IMG 20210421 WA0012

ಕೊರೊನಾ: 66 ಪ್ರಮುಖ ಆಸ್ಪತ್ರೆಗಳಿಗೆ ತುರ್ತು ನೋಟೀಸ್ ಜಾರಿ…!

DISTRICT NEWS ಬಿಬಿಎಂಪಿ

 

* BBMP ಮುಖ್ಯ ಆಯುಕ್ತರು ರವರಿಂದ 66 ಪ್ರಮುಖ ಆಸ್ಪತ್ರೆಗಳಿಗೆ ತುರ್ತು ನೋಟೀಸ್ ಜಾರಿ:*

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಏರಿಕೆಯಾಗುತ್ತಿದ್ದು, ಕೋವಿಡ್ ಸೋಂಕು ಲಕ್ಷಣಗಳಿರುವವರನ್ನು ತ್ವರಿತವಾಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿಡಬೇಕೆಂದು ಸೂಚನೆ ನೀಡಲಾಗಿರುತ್ತದೆ.

*ದಿ: 18-4-21ರ ನೋಟೀಸ್ ಗೆ ಖಾಸಗಿ ಆಸ್ಪತ್ರೆ ಗಳ ಸಮಜಾಯಿಷಿ ಉತ್ತರ*

ನಗರದಲ್ಲಿರುವ ಬಹುತೇಕ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗಾಗಿ ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿಡದ ಪರಿಣಾಮ ಮಾನ್ಯ ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ದಿನಾಂಕ: 18-04-2021 ರಂದು ಖುದ್ದು ಅಧಿಕಾರಿಗಳ ಜೊತೆಗೆ ವಿಕ್ರಂ ಆಸ್ಪತ್ರೆ, ಪೋರ್ಟಿಸ್ ಆಸ್ಪತ್ರೆ (ಕನ್ನಿಂಗ್ ಹ್ಯಾಂ ರಸ್ತೆ), ಆಸ್ಟರ್ ಸಿಎಂಐ ಆಸ್ಪತ್ರೆ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಸರ್ಕಾರದ ಆದೇಶದಂತೆ ಶೇ. 50 ರಷ್ಟು ಹಾಸಿಗೆ ನೀಡದ ಕಾರಣ ತುರ್ತು ನೋಟೀಸ್ ಜಾರಿಮಾಡಿ ಕೂಡಲೆ ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಇಲ್ಲವಾದರೆ ಕಾಯ್ದೆ ಅನುಸಾರ ಆಸ್ಪತ್ರೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಸದರಿ ಆಸ್ಪತ್ರೆಗಳು ಪ್ರಸ್ತುತ ಅನ್ಯ ಕಾಯಿಲೆಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಹಂತ ಹಂತವಾಗಿ ಶೇ. 50 ರಷ್ಟು ಹಾಸಿಗೆಗಳನ್ನು ನೀಡುವುದಾಗಿ ಮಾನ್ಯ ಮುಖ್ಯ ಆಯುಕ್ತರು ರವರಿಗೆ ಪತ್ರದ ಮೂಲಕ ಸಮಜಾಯಿಷಿ ನೀಡಿ ಸೂಚನಾ ಪತ್ರದಂತೆ ಹಾಸಿಗೆ ನೀಡಲು ಕ್ರಮವಹಿಸಲಾಗುತ್ತಿರುವುದಾಗಿ ಪ್ರತಿಕ್ರಿಯೆ ನೀಡಿರುತ್ತಾರೆ. ಅದರಂತೆ ಸದರಿ ಆಸ್ಪತ್ರೆಯವರು ಹಾಸಿಗೆ ನೀಡಲು ಪ್ರಾರಂಭಿಸಿದ್ದಾರೆ.

*ಮತ್ತೆ 66 ಆಸ್ಪತ್ರೆ ಗಳಿಗೆ ತುರ್ತು ನೋಟೀಸ್:*

ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆ ಮೀಸಲಿಡದ *66 ಆಸ್ಪತ್ರೆಗಳಿಗೆ ಇಂದು ತುರ್ತು ನೋಟೀಸ್ ನೀಡಿ* ಸರ್ಕಾರದ ಆದೇಶದಂತೆ ಶೇ. 50 ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗಾಗಿ ತ್ವರಿತವಾಗಿ ಮೀಸಲಿಡಲು ಸೂಚನೆ ನೀಡಲಾಗಿರುತ್ತದೆ.IMG 20210421 WA0005 1IMG 20210421 WA0006