ರಾಮರಾಜ್ಯದ ಪರಿಕಲ್ಪನೆ ಪ್ರತಿಯೊಬ್ಬ ನಾಗರೀಕನ ತಲೆಯಲ್ಲಿರಬೇಕು
ಪಾವಗಡ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ) ಬಣದ ವತಿಯಿಂದ ಪಾವಗಡ ಪಟ್ಟಣ ಹೊಸ ಬಸ್ ನಿಲ್ದಾಣದಲ್ಲಿ ದೈವ ಸಂಭೂತ ರಾಮನವಮಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಒಂದು ಸಾವಿರ ಮಜ್ಜಿಗೆ ಪೊಟ್ಟಣ ಮತ್ತು ಮಾಸ್ಕ್. ಶುದ್ಧ ಕುಡಿಯುವ ನೀರು ಹಂಚಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದಲ್ಲಿ ಮಾತನಾಡಿದ ಕ ರ ವೇ ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಮಾತನಾಡಿ ದೇಶ ಎಲ್ಲಾ ರೀತಿಯ ರಂಗದಲ್ಲಿ ಪ್ರಗತಿ ಸಾಧಿಸಲು ದೇಶದ ಪ್ರತಿಯೊಬ್ಬರ ಜವಾಬ್ದಾರಿ ತನ್ನ ದೇಶ ತನ್ನ ಬದುಕು ಎನ್ನುವ ನಿಟ್ಟಿನಲ್ಲಿ ಸ್ವಾಭಿಮಾನದ ಬದುಕು ರೂಪಿಸಿಕೊಂಡಗ ಶಿಕ್ಷಣ ನಿರುದ್ಯೋಗ ನಿವಾರಣೆ ಸ್ವಾಭಿಮಾನ ಬದುಕು ಕಂಡುಕೊಂಡಾಗ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಎಂಬ ಮಹಾನ್ ಗ್ರಂಥದಲ್ಲಿ ಶ್ರೀ ರಾಮನಿಗೆ ತನ್ನದೇ ಆದ ಸ್ಥಾನಮಾನ ನೀಡಿದೆ ದೇಶದ ಉದ್ದಗಲಕ್ಕೂ ಶ್ರೀ ರಾಮನ ಜಪ ಪಠಿಸಲು ಸಾಧ್ಯವಾಗಿದೆ ಸಹೋದರತ್ವ ಸಮಾನತೆ ದೇಶ ಪ್ರೇಮ ಸಹನೆ ತಾಳ್ಮೆ ದೈವ ಭಕ್ತಿ ಗುರು ಭಕ್ತಿ ಇವೆಲ್ಲವಕ್ಕೂ ರಾಮ ಲಕ್ಷ್ಮಣ ಸೀತೆ ಲವ ಕುಶ ಎಂಬ ಸಂಸಾರ ಅವಿಭಕ್ತ ಕುಟುಂಬ ಸ್ತ್ರೀ ಗೌರವ ರಾಮರಾಜ್ಯದಲ್ಲಿ ಇಂತಹ ಸ್ಥಾನ ಮಾನ ಇದ್ದವು ಎನ್ನುವುದಕ್ಕೆ ರಾಮಾಯಣದ ಮೂಲಕ ತಿಳಿಯಬಹುದು ಒಂದೇ ಧರ್ಮ ಒಂದೇ ದೇವರು ಮಾನವರೆಲ್ಲರು ಒಂದೇ ಶಸ್ತ್ರೀ ಪುರುಷ ಸಮಾನರು ಎನ್ನುವ ಅಂಶ ಸಾರುವ ದೇಶ ನಮ್ಮದು ಅದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಶ್ರೀರಾಮನನ್ನು ಅಯೋದ್ಯಗೆ ಸೀಮಿತ ಮಾಡದೆ ದೇಶದ ಉದ್ದಗಲಕ್ಕೂ ಪೂಜಿಸಿ ಕೊಂಡಾಡುವ ದೈವ ಶೇಕ್ತಿ ಎಲ್ಲರಿಗೂ ಬರಬೇಕು ದೇಶ ಸಮೃದ್ಧಿ ಹೊಂದಲಿ ಎಲ್ಲರಿಗೂ ಆರೋಗ್ಯ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ದೇಶಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು
ಕಾರ್ಯಕ್ರಮದಲ್ಲಿ ಕ ರ ವೇ ಅಧ್ಯಕ್ಷ ಲಕ್ಷ್ಮಿ ನಾರಾಯಣ
ಉಪಾಧ್ಯಕ್ಷ ನರಸಿ ಪಾಟೀಲ್,ಮಹಿಳಾ ಅಧ್ಯಕ್ಷೆ ಶಶಿಕಲಾ
ಅಶೋಕ ನಾಯಕ,ಕುಮಾರ್ ಮಂಜುನಾಥ್,ಹರಿ ಡಿಜಿಟಲ್
ರಮೇಶನಾಯ್ಕ್, ಮಹಾಂತೇಶ್ ಇನ್ನು ಮುಂತಾದವರು ಹಾಜರಿದ್ದರು
ವರದಿ: ಬುಲೆಟ್ ವೀರಸೇನಯಾದವ್