ಮಂಡ್ಯ ಮೇ ೧: ಜಿಲ್ಲಾಡಳಿತ ಬೇಜವಬ್ಬಾರಿ ತನದಿಂದ ಇಂದು 26 ಕೊರೋನ ಸೋಂಕು ಹರಡುವಂತೆ ಮಾಡಿದೆ. ಇಂದು ಒಂದೇ ದಿನ 8 ಪಾಜಿಟೀವ್ ಕೇಸ್ ಗಳು ಪತ್ತೆ ಯಾಗಿವೆ. ಮುಂಬೈನಿಂದ ಬಂದ ಶವವನ್ನು ಜಿಲ್ಲೆಗೆ ಬರಲು ಅನುಮತಿಸಿದ್ದು ಸೋಂಕು ಹೆಚ್ಚಾಗಲು ಕಾರಣ ಎನ್ನುತ್ತಿದ್ದಾರೆ ಮಂಡ್ಯದ ಜನರು,ಮುಂಬರುವ ದಿನದಲ್ಲಿ ಇದು ಎಷ್ಟಾಗಲಿದೆಯೋ ಎಂಬ ಆತಂಕ ಜನರನ್ನು ಕಾಡತೊಡಗಿದೆ..
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೊಡಗಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಆಟೋ ಓಡಿಸುತ್ತಿದ್ದ. ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಯ ಶವವನ್ನು ಆತನ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಪಾರ್ಥೀವ ಶರೀರವನ್ನು ಕೊಡಗಹಳ್ಳಿಗೆ ತರಲಾಗಿತ್ತು. ಹೌದು. ಮುಂಬೈ ನಗರ ಪಾಲಿಕೆಯಿಂದ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನ ಆಂಬುಲೆನ್ಸ್ ಮೂಲಕ ಕರ್ನಾಟಕದ ಮಂಡ್ಯ ಜಿಲ್ಲೆಗೆ ಕಳುಹಿಸಿಕೊಡಲಾಗಿತ್ತು. ಕರ್ನಾಟಕ ಗಡಿಯಿಂದ ಮಂಡ್ಯ ಜಿಲ್ಲೆಯ ಕೊಡಗಹಳ್ಳಿಗೆ ಒಟ್ಟು 20 ಚೆಕ್ ಪೋಸ್ಟ್ ಇದ್ದು, 20 ಚೆಕ್ ಪೋಸ್ಟ್ ನಲ್ಲಿ ಆಂಬುಲೆನ್ಸ್ ಎನ್ನುವ ಕಾರಣಕ್ಕೆ ತಪಾಸಣೆ ಮಾಡದೇ ಬಿಡಲಾಗಿತ್ತು ಎಂದು ಮಂಡ್ಯ ಡಿಸಿ ಡಾ.ವೆಂಕಟೇಶ್ ತಿಳಿಸಿದರು
ಶವದ ಜೊತೆ ಬಂದಿದ್ದ ಮೃತನ ಮೊದಲನೇ ಮಗ ಮುಂಬೈನ ಐಸಿಐಸಿಐ ಬ್ಯಾಂಕಿನಲ್ಲಿ ನೌಕರನಾಗಿದ್ದು, ಆತನಿಗೆ ಕೊರೋನಾ ಇತ್ತು ಎಂಬ ಶಂಕೆ ವ್ಯಕ್ತಪಡಿಸಿರುವ ಡಿಸಿ, ಆತನಿಂದ ಆತನ ತಮ್ಮ, ತಂಗಿ, ಹಾಗೂ ತಂಗಿಯ ಮಗುವಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ. ಆದ್ರೆ ಈತನಿಂದ ಈಕೆಯ ತಾಯಿ ಮತ್ತು ಮೃತನ ಪತ್ನಿಗೆ ಕೊರೋನಾ ನೆಗೆಟಿವ್ ಬಂದಿದೆ. ಇನ್ನು ಮೃತನ ಅಂತ್ಯ ಸಂಸ್ಕಾರದಲ್ಲಿ ಏಳು ಮಂದಿ ಪಾಲ್ಗೊಂಡಿದ್ದರಂತೆ. ಜಿಲ್ಲಾಡಳಿತದ ಕೆಲ ಅಧಿಕಾರಿಗಳು ಅಂತ್ಯ ಸಂಸ್ಕಾರದ ವೇಳೆ ಹಾಜರಿದ್ದರು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ
ಸರ್ಕಾರವನ್ನು ಎಚ್ಚರಿಸಿದ ಕುಮಾರಸ್ವಾಮಿ
ಮಂಡ್ಯ ಕೊರೋನಾ ಸೋಕು ಹರಡುತ್ತಿರುವ ಬಗ್ಗೆ ದೇವನಹಳ್ಳಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಕಲಿ ದಾಖಲೆ ಸೃಷ್ಟಿಸಿ ಮಹಾರಾಷ್ಟ್ರದಿಂದ ಶವವನ್ನು ಅಕ್ರಮವಾಗಿ ತಂದು ನಿಯಮ ಪಾಲಿಸದೆ ಶವ ಸಂಸ್ಕಾರ ಮಾಡಲಾಗಿದೆ. ಶವದ ಜೊತೆ ಬಂದವರಲ್ಲಿ ೪ ಜನರಿಗೆ ಕೊರೋನಾ ವೈರಸ್ ಪತ್ತೆಯಾಗಿದೆ ಎಂದರು
ಮುಂಬೈನಿಂದ ಮಂಡ್ಯಕ್ಕೆ ಶವ ಹೇಗೆ ತನಿಖೆಯಾಗಲಿ ಬಂತು…?
ಮಂಬೈ -ಮಂಡ್ಯ ನಡುವೆ ೨೦ ಕ್ಕೂ ಹೆಚ್ಚು ಚೆಕ್ ಪೋಸ್ಟ್ ,೫-೬ ಜಿಲ್ಲೆ ದಾಟಿ ಶವ ಹೇಗೆ ಕೊಡಗನಹಳ್ಳಿಗೆ ಬಂತು ಎನ್ನುವುದನ್ನು ಸರ್ಕಾರ ತನಿಖೆ ಮಾಡಬೇಕು. ತಪ್ಪಿತಸ್ತರು ಮೇಲೆ ಕ್ರಮ ಜರಗಿಸಬೇಕು ಎಂದು ಮಾಜಿ ಸಚಿವ ಪುಟ್ಟರಾಜು ಆಗ್ರಹಿಸಿದ್ದಾರೆ.
ಮುಂಜಾಗ್ರತ ಕ್ರಮಗಳಿಲ್ಲದೆ ಶವಸಂಸ್ಕಾರ
ಪಾಂಡವಪುರ ತಾಲೂಕು ಮೇಲುಕೋಟೆ ಸಮೀಪದ ಬಿ.ಕೊಡಗಹಳ್ಳಿ ಗ್ರಾಮದಲ್ಲಿ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ.ಮುಂಬೈನಲ್ಲಿ ಆಟೋಡ್ರೈ ವರ್ ಕೆಲಸ ಮಾಡಿಕೊಂಡಿದ್ದ ಬಿ.ಕೊಡಗಹಳ್ಳಿಯ ವ್ಯಕ್ತಿಯು, ಹತ್ತು ದಿನಗಳ ಹಿಂದೆ ಮೃತಪಟ್ಟಿದ್ದನು. ಹೀಗಾಗಿ ಮೃತನ ಶವವನ್ನು ಹುಟ್ಟೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ತಡವಾಗಿ ಎಚ್ಚೆತ್ತ ಜಿಲ್ಲಾಡಳಿತ
ಮುಂಬೈ ನಿಂದ ಮಂಡ್ಯ ಜಿಲ್ಲೆ ಗೆ ಅನುಮತಿ ಇಲ್ಲದೆ ಯಾರು ಬಾರದು,ಯಾರು ಬರಲು ಅವಕಾಶ ನೀಡುವುದಿಲ್ಲ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಪೋಲಿಸರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು ಜಿಲ್ಲಾಡಳಿತದ ಕಾರ್ಯವೈಖರಿಗೆ ಇಡಿದ ಕೈಗನ್ನಡಿ.
ಒಟ್ಟಾರೆ ಜಿಲ್ಲಾಡಳಿತದ ನಿರ್ಲಕ್ಷ್ಯವೋ ಅಥವಾ ಶವ ಸಂಸ್ಕಾರದ ಸಂದರ್ಭದಲ್ಲಿ ನಡೆದ ಅಚಾತುರ್ಯವೋ ಮಂಡ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 26ಕ್ಕೇರಿದ್ದು, ಕೊಡಗಹಳ್ಳಿ ಗ್ರಾಮವನ್ನು ಮತ್ತು ಶೀಲ್ ಡೌನ್ ಮಾಡಿ,ಮೇಲುಕೋಟೆ ಕೂಡ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಇನ್ನಾದ್ರೂ ಸಹ ಜಿಲ್ಲಾಡಳಿತ ಹೊರ ರಾಜ್ಯದಿಂದ ಬರುವವರ ಮೇಲೆ ಕಟ್ಟೆಚ್ಚರ ವಹಿಸಿರುವುದು ಎಷ್ಟರ ಮಟ್ಟಿಗೆ ಕೊರೋನಾ ತಡೆಗಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ…