IMG 20240326 184918 scaled

ಪಾವಗಡ : ಅದ್ದೂರಿಯಾಗಿ ನಡೆದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ರಥೋತ್ಸವ….!

DISTRICT NEWS ತುಮಕೂರು

ಅದ್ದೂರಿಯಾಗಿ ನಡೆದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ರಥೋತ್ಸವ.

ಪಾವಗಡ : ತಾಲ್ಲೂಕಿನ ವದನ ಕಲ್ಲು  ಮತ್ತು ವೈ ಎನ್ ಹೊಸಕೋಡೆ ಹೋಬಳಿ ಯ ಮಾರಮ್ಮನಹಳ್ಳಿ  ಗ್ರಾಮದಲ್ಲಿ ಸುಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.IMG 20240326 182228

ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಂತಹ ಭಕ್ತರು ಉಪವಾಸವಿದ್ದು, ಶ್ರದ್ಧಾ ಭಕ್ತಿಗಳಿಂದ ದೇವರಿಗೆ ನಮಿಸಿದರು.

IMG 20240326 WA0008

ವದನಕಲ್ಲಿನಲ್ಲಿ. ಶ್ರೀ ಸಿದ್ದೇಶ್ವರ ಬೆಟ್ಟದ ಸ್ವಾಮಿಗಳ ನೇತೃತ್ವದಲ್ಲಿ ಗಣಪತಿ ಪೂಜೆ, ನಂದಿ ಪೂಜೆ, ನವಗ್ರಹ ಪೂಜೆ ಹವನ, ರಥಾಂಗ ಹೋಮ ಮುಂತಾದ ಕಾರ್ಯಗಳನ್ನು ನಾಗಭೂಷಣ ರೆಡ್ಡಿ ಎಂಬ ಸೇವಾಕರ್ತರು ನೆರವೇರಿಸಿದರು.

ಮಾರಮ್ಮನ ಹಳ್ಳಿ ಗ್ರಾಮದ ಸುತ್ತ ಮುತ್ತಲಿನ ಗ್ರಾಮಸ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.  ತಾಲ್ಲೂಕಿನ ಹಿರಿಯ ವಕೀಲರಾದ ಭಗವಂತಪ್ಪ ನವರು ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

IMG 20240326 WA0009
ಗ್ರಾಮದ ಗೌಡರು, ಕೊಂಚಗಾರರು ಪಾಲ್ಗೊಂಡಿದ್ದು, ನಂದಿ ಕೋಲು ಕುಣಿತ, ತಮಟೆ ವಾದ್ಯಗಳೊಂದಿಗೆ ಜಾತ್ರೆಯು ಅದ್ದೂರಿಯಾಗಿ ನಡೆಯಿತು.

ವದನಕಲ್ಲಿ ನಲ್ಲಿ  ಬಂದಂತಹ ಭಕ್ತಾದಿಗಳಿಗೆ ಕ್ರೇಜಿ ಬಾಯ್ಸ್ ವತಿಯಿಂದ ದಾಸೋಹ ಪ್ರಸಾದ ವ್ಯವಸ್ಥೆ ಮಾಡಲಾಯಿತು

ದಿ. ಶ್ರೀನಿವಾಸಲು. A