ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅತ್ತಿಬೆಲೆ ಬೆಥಲ್ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಆದೂರು ಪ್ರಕಾಶ್ ನೆರವೇರಿಸಿದರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಚಂದ್ರಶೇಖರ್ ಕಾರ್ಯದರ್ಶಿಗಳಾದ ಎಂ ಗೋವಿಂದರಾಜು ಸಿಆರ್ಪಿ ಚಂದ್ರಪ್ಪ ಸುರೇಶ್ ಸಂಸ್ಥೆಯ ನಿರ್ದೇಶಕರುಗಳಾದ ಕೇಶವಮೂರ್ತಿ ಸರಿತಾ ಉಮೇಶ್ ರೆಡ್ಡಿ ಇದ್ದರು
ಶಾಲೆಯಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಕಸಾಪ ಅಧ್ಯಕ್ಷ ಆದೂರ್ ಪ್ರಕಾಶ್ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸುವ ಕಾರ್ಯಕ್ರಮಗಳು ಸದಾ ನಡೆಯುತ್ತಿರಬೇಕು ವಿದ್ಯಾಭ್ಯಾಸದ ಜೊತೆಗೆ ಹಸಿರಿನ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು ಗಿಡ ಮರಗಳಿಂದ ಆಗುವ ಅನುಕೂಲತೆಗಳನ್ನು ಕಥೆ ನಾಟಕ ಹಾಡಿನ ಮೂಲಕ ತಿಳಿಸಿದರೆ ಬಹುಬೇಗ ಅರ್ಥವಾಗುತ್ತದೆ ಎಂದು ತಿಳಿಸಿದರು ನಮ್ಮ ಆಹಾರ ಪದ್ಧತಿ ಸಂಪೂರ್ಣವಾಗಿ ಬದಲಾಗಿ ಅನೇಕ ಅಡ್ಡ ಪರಿಣಾಮಗಳು ಎದುರಾಗಿದೆ ಇವುಗಳನ್ನು ತಂದೆ-ತಾಯಿ ಹಾಗೂ ಶಿಕ್ಷಕರು ಸರಿ ಮಾಡಬಹುದಿತ್ತು ಬೇರೆಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಸಲಹೆ ನೀಡಿದರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ಹಸಿರು ನಮ್ಮೆಲ್ಲರ ಉಸಿರು ಅದು ಒಂದು ಕ್ಷಣ ನಿಂತರೆ ಜಗವೆಲ್ಲ ಸ್ತಬ್ಧವಾಗಿ ಸ್ಮಶಾನ ಮೌನ ಆವರಿಸುತ್ತದೆ ಭೂಮಂಡಲದ ಬುದ್ಧಿಜೀವಿಯಾದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ಆಪೋಷನ ತೆಗೆದುಕೊಂಡು ವೇಗವಾಗಿ ಸಾಗುತ್ತಿದ್ದರೆ ಒಂದು ಕ್ಷಣ ಎದೆ ನಡುಗಿ ಹೋಗುತ್ತದೆ ಎಂದು ಹೇಳಿದರು ಶಾಲೆಯ ನಿರ್ದೇಶಕರಾಗಿ ಕೇಶವಮೂರ್ತಿ ಮಾತನಾಡಿ ಎಲ್ಲಾ ಮಕ್ಕಳಿಗೆ ಪರಿಸರದ ಉಳಿವಿನ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿತ್ತು ಶಾಲೆಯಲ್ಲಿ ಕೂಡ ಇದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತದೆ ನಮ್ಮ ಶಾಲೆಯ ಉದ್ದೇಶವು ಕೂಡ ನಮ್ಮ ಪೂರ್ವಜರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕ.ಸಾ.ಪ ಪದಾಧಿಕಾರಿಗಳಾದ ಎಂ ಗೋವಿಂದರಾಜ ಟಿ ಎಸ್ ಮುನಿರಾಜು ಚುಟುಕು ಶಂಕರ್ ಮಲ್ಲಿಕಾರ್ಜುನ ಆರಾಧ್ಯ ಸಿಆರ್ಪಿ ಗಳಾದ ಸುರೇಶ್ ಚಂದ್ರಪ್ಪ ಪತ್ರಕರ್ತರಾದ ಸೋಮಶೇಖರ್ ಶಾಲೆಯ ಮುಖ್ಯೋಪಾಧ್ಯಾಯರಾದ ಸುಗುಣ ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.
ವರದಿ: ಹರೀಶ್