IMG 20220613 WA0013

ಕಾಂಗ್ರೆಸ್ :ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಇ ಡಿ ನೋಟಿಸ್ ಜಾರಿ ಖಂಡಿಸಿ ಪ್ರತಿಭಟನೆ…!

POLATICAL STATE

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಇ ಡಿ ನೋಟಿಸ್ ಜಾರಿ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಡಿ.ಕೆ. ಶಿವಕುಮಾರ್ ಅವರ ಮಾತುಗಳು:

ಇದೊಂದು ಐತಿಹಾಸಿಕ ಹೋರಾಟ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಆಚಾರ- ವಿಚಾರಗಳನ್ನು ಪ್ರಚಾರ ಮಾಡಲು ಜವಹಾರ್ ಲಾಲ್ ನೆಹರೂ, ಬಾಲಗಂಗಾದರ್ ತಿಲಕರು ಹಾಗೂ ವಲ್ಲಭಬಾಯ್ ಪಟೇಲ್ ಅವರೆಲ್ಲರೂ ಸೇರಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಜನ ನಾಯಕರು ಜೈಲಿಗೆ ಹೋದರು. ಅನೇಕರು ಪ್ರಾಣ ತ್ಯಾಗ ಮಾಡಿದರು. ಇದೆಲ್ಲದರ ಧ್ವನಿಯಾಗಿದ್ದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ. ಇದು ಇಂದಿಗೂ ಜೀವಂತವಾಗಿ ಉಳಿದಿದೆ. ಅದರ ಮುಂದಾಳತ್ವವನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡೀಸ್ ಹಾಗೂ ಮೋತಿಲಾಲ್ ವೊರಾ ವಹಿಸಿಕೊಂಡಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಸ್ಟಿಯಾಗಿದ್ದಾರೆ.

ಈ ಪತ್ರಿಕೆಯನ್ನು ಒಂದು ಸಂಸ್ಥೆ ಮುಂದುವರಿಸಿಕೊಂಡು ಬಂದೆದೆ. ಆದಾಯ ತೆರಿಗೆ ಅಧಿಕಾರಿಗಳು ಈ ಸಂಸ್ಥೆಯ ಹಣಕಾಸು ವ್ಯವಹಾರಗಳ ಪರಿಶೀಲನೆ ಮಾಡಿದ್ದಾರೆ. ದೇಶದ ಕಾಂಗ್ರೆಸಿಗರು ದೇಣಿಗೆ ಕೊಟ್ಟು ಆ ಪತ್ರಿಕೆಯನ್ನು ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ 90 ಕೋಟಿ ನೀಡಲಾಗಿದೆ.

ಈ ಬಗ್ಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದು, ಇಲಾಖೆ ಕೂಡ ಇದು ಸರಿಯಾಗಿದೆ ಎಂದು ಹೇಳಿದೆ. ಆದರೆ ಬಿಜೆಪಿ ಸರ್ಕಾರ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನೋಟೀಸ್ ಕೊಟ್ಟು ವಿಚಾರಣೆಗೆ ಕರೆದಿದೆ.

ನಮ್ಮ ನಾಯಕರು ಯಾವಾಗ ಹಣಕಾಸು ಅವ್ಯವಹಾರ ಮಾಡಿದ್ದಾರೆ? ಯಾವ ಹಣ ವರ್ಗಾವಣೆ ಮಾಡಿದ್ದಾರೆ? ಯಾರ ಬಳಿ ಲಂಚ, ಕಮಿಷನ್ ಪಡೆಡಿದ್ದಾರೆ? ಇವರ ವಿರುದ್ಧ ಯಾವುದಾದರೂ ದೂರು ದಾಖಲಾಗಿದೆಯೇ? ಯಾವುದೋ ಒಬ್ಬ ಸದಸ್ಯನಿಂದ ಖಾಸಗಿ ದೂರು ದಾಖಲಿಸಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದೀರಿ.

ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಯುಪಿಎಗೆ ಬಹುಮತ ಬಂದಿದ್ದು, ನೀವು ಬಂದು ಸರ್ಕಾರ ರಚಿಸಿ ಎಂದು ಸೋನಿಯಾಗಾಂಧಿ ಅವರಿಗೆ ಆಹ್ವಾನ ನೀಡುತ್ತಾರೆ. ಆಗ ಸೋನಿಯಾ ಗಾಂಧಿ ಅವರು ನನಗೆ ಪ್ರಧಾನಮಂತ್ರಿ ಹುದ್ದೆ ಬೇಡ, ಈ ದೇಶದ ಮುಂದಾಳತ್ವವನ್ನು ಆರ್ಥಿಕ ತಜ್ಞ ವಹಿಸಿಕೊಳ್ಳಬೇಕು ಎನ್ನುತ್ತಾರೆ. ಮನಮೋಹನ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡುತ್ತಾರೆ.

IMG 20220613 WA0014

ಇಲ್ಲಿ ಸಾಕಷ್ಟು ಮಂದಿ ಹಳ್ಳಿಗಳಿಂದ ಬಂದಿದ್ದೀರಿ. ನೀವು ಪಂಚಾಯ್ತಿ ಸ್ಥಾನವನ್ನು ಬಿಟ್ಟುಕೊಡುತ್ತೀರಾ? ರಾಹುಲ್ ಗಾಂಧಿ ಅವರೂ ಕೂಡ ಪ್ರಧಾನಮಂತ್ರಿ, ಉಪಪ್ರಧಾನಿಯಾಗಬಹುದಿತ್ತು. ಮಂತ್ರಿಯಾಗಬಹುದಿತ್ತು. ಆದರೆ ಈ ದೇಶಕ್ಕಾಗಿ 10 ವರ್ಷಗಳ ಕಾಲ ತ್ಯಾಗ ಮಾಡಿದ್ದಾರೆ.

ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ನಾನು ಸತ್ತರೆ ನನ್ನ ಪ್ರತಿಯೊಂದು ರಕ್ತದ ಕಣವು ಈ ದೇಶದ ಐಕ್ಯತೆ, ಸಮಗ್ರತೆಗಾಗಿ ಹರಿಯಲಿದೆ ಎಂದು ಇಂದಿರಾ ಗಾಂಧಿ ಅವರು ಹೇಳಿದ್ದರು. ಇದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಆದರೆ ಬಿಜೆಪಿ ಸರ್ಕಾರ ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದೆ. ಅವರನ್ನು ಜೈಲಿಗೆ ಹಾಕಲು ಹೊರಟಿದೆ. ಆದರೆ ಇದು ಸಾಧ್ಯವಿಲ್ಲ. ಈ ದೇಶಕ್ಕೆ ಗಾಂಧಿ ಕುಟುಂಬ ಹಾಗೂ ಸಾವಿರಾರು ಕಾಂಗ್ರೆಸ್ ಸದಸ್ಯರು ತಮ್ಮ ಆಸ್ತಿ ಪಾಸ್ತಿಗಳನ್ನೇ ತ್ಯಾಗ ಮಾಡಿದ್ದಾರೆ. ಅಂತಹವರು ಯಾವ ಕಾರಣಕ್ಕೆ ಹಣಕಾಸು ಅವ್ಯವಹಾರ ಮಾಡುತ್ತಾರೆ?

ಪೊಲೀಸರು ಎಲ್ಲೆಡೆ ತಡೆದಿದ್ದರೂ ಇಂದು ಕರ್ನಾಟಕದ ಮೂಲೆ ಮೂಲೆಯಿಂದ ಸಾವಿರಾರು ಕಾರ್ಯಕರ್ತರು ಇಲ್ಲಿಗೆ ಆಗಮಿಸಿದ್ದೀರಿ.

ನಿನ್ನೆ ಪೊಲೀಸರು ನನಗೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದು ಪ್ರೇಮ ಪತ್ರ ಬರೆದಿದ್ದಾರೆ. ಅವರ ಪತ್ರದ ಬಗ್ಗೆ ಕಾನೂನು ತಿಳಿದಿರುವ ಉಗ್ರಪ್ಪನವರಿಗೆ ಕೇಳಿದೆ. ಪ್ರತಿಭಟನೆ ಮಾಡುವುದು ನಮ್ಮ ಮೂಲಭೂತ ಹಕ್ಕು, ಸಂವಿಧಾನದ ಆರ್ಟಿಕಲ್ 19ರಲ್ಲಿ ಆ ಹಕ್ಕು ನೀಡಿದ್ದಾರೆ.

IMG 20220613 WA0015

ಇನ್ನು ಮುಂದೆ ಇಡಿಯವರು ನಮ್ಮ ಪಕ್ಷದ ನಾಯಕರುಗಳಿಗೆ ಬೇಕಾದಷ್ಟು ತೊಂದರೆ ನೀಡಲಿದ್ದಾರೆ. ಇದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ನೀವು ತಿಹಾರ್ ಜೈಲಿಗಾದರೂ ಕರೆದುಕೊಂಡು ಹೋಗಿ, ಪರಪ್ಪನ ಅಗ್ರಹಾರ ಜೈಲಿಗಾದರೂ ತೆಗೆದುಕೊಂಡು ಹೋಗಿ. ರಾಹುಲ್ ಗಾಂಧಿ ಅವರನ್ನು ಕರೆದುಕೊಂಡು ಹೋದರೆ, ಈ ದೇಶಕ್ಕಾಗಿ ಪ್ರಾಣ ಬಿಡಲು ನಾವೆಲ್ಲರೂ ಸಿದ್ಧರಿದ್ದೇವೆ. ಅದೇ ಕಾರಣಕ್ಕೆ ನಾವೆಲ್ಲ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ.

ಇಂದು ಪ್ರತಿಭಟನೆಗೆ ಬಂದಿರುವ 30-40 ಸಾವಿರ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದ್ದು, ಇದರ ವಿರುದ್ಧ ಹೋರಾಡಲು, ಬಿಜೆಪಿಯ ದ್ವೇಷದ ರಾಜಕಾರಣ ಧಿಕ್ಕರಿಸಿ, ನಾವು ನಮ್ಮ ನಾಯಕರ ಜತೆ ಇದ್ದೇವೆ ಎಂದು ಹೇಳಲು ಈ ಪ್ರತಿಭಟನೆ ಮಾಡಿದ್ದೇವೆ.

ನಾವು ಇಡಿ ಕಚೇರಿಗೆ ಹೋಗುವ ಮುನ್ನ ನಮ್ಮನ್ನು ಬಂಧಿಸಲಾಗಿದ್ದು, ಇದು ಅನ್ಯಾಯ. ಈ ಮೂಲಕ ನಮ್ಮ ಪ್ರತಿಭಟನೆ ಹಕ್ಕನ್ನು ಮೊಟಕುಗೊಳಿಸಲಾಗಿದೆ. ನಮ್ಮ ಪ್ರತಿಭಟನೆ ಮುಂದುವರಿಯಲಿದೆ.