ಆಂಬುಲೆನ್ಸ್ ಹಸ್ತಾಂತರ
ವೈ.ಎನ್.ಹೊಸಕೋಟೆ : ಗ್ರಾಮದ ಹಿರಿಯ ರಾಜಕೀಯ ಮುತ್ಸದಿ ಜೆಡಿಎಸ್ ಮುಖಂಡ ಜಿ.ಎಲ್.ಭೀಮಯ್ಯ ಮತ್ತು ಜಿ.ಬಿ.ದೇವರಾಜ್ ರವರ ಸ್ಮರಣಾರ್ಥ ಕುಟುಂಬ ವರ್ಗವು ಶುಕ್ರವಾರದಂದು ಆಂಬುಲೆನ್ಸ್ ನ್ನು ಉಪವಿಭಾಗಾಧಿಕಾರಿ ಸೋಮಣ್ಣ ಕಡಗೋಳ ಮತ್ತು ಗ್ರಾಮಪಂಚಾಯಿತಿ ಅಧ್ಯಕ್ಷ ಪದ್ಮಕ್ಕಓಬಳೇಶ ರವರ ಸಮ್ಮುಖದಲ್ಲಿ ತಹಶೀಲ್ದಾರರಿಗೆ ಹಸ್ತಾಂತರಿಸಲಾಯಿತು.
ಈ ಕುಟುಂಬವು ತಲೆತಲಾಂತರದಿಂದ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದು ಗ್ರಾಮದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿಬೆಳೆಸಿದ ಕೀರ್ತಿ ಹೊಂದಿದ್ದಾರೆ. ಜಿ.ಎಲ್.ಭೀಮಯ್ಯರವರು ಮಂಡಲಪಂಚಾಯಿತಿ ಅಧ್ಯಕ್ಷರಾಗಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ, ಮಗ ಜಿ.ಬಿ.ದೇವರಾಜು ಜೆಡಿಎಸ್ ಪಕ್ಷದ ಹೋಬಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸೊಸೆ ಯಶೋದಮ್ಮ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು. ಇದೇ ಹಾದಿಯಲ್ಲಿ ಮತ್ತೊಬ್ಬ ಮಗನಾದ ಜಿ.ಬಿ.ಸತ್ಯನಾರಾಯಣ ಸಾಗುತ್ತಿದ್ದು, ಜೆಡಿಎಸ್ ಪಕ್ಷ ಮತ್ತು ಗ್ರಾಮದ ಪ್ರಗತಿಗೆ ಸಹಕರಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಹೋಬಳಿಯಲ್ಲಿ ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ಕಳುಹಿಸಿಕೊಡಲು ಆಂಬುಲೆನ್ಸ್ ನ್ನು ಕೊಡುಗೆಯಾಗಿ ಶುಕ್ರವಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಆಂಬುಲೆನ್ಸ್ ಅಗತ್ಯವಿದ್ದವರು 9880628758 ಮತ್ತು 7204704468 ನಂಬರುಗಳಿಗೆ ಕರೆ ಮಾಡಲು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ ಗೋವಿಂದಬಾಬು, ಪಚ್ಚೆಗಂಗಪ್ಪ, ಮುಜೀಬುಲ್ಲಾ, ಎಲ್.ಕೆ.ರಘು, ಬಿಜೆಪಿ ಉಮೇಶ್, ರಾಜಶೇಖರ್, ಖಯೂಮ್‌ವುಲ್ಲ, ಎ.ಓ.ನಾಗರಾಜು, ಪಕೃದ್ಧೀನ್, ಸತ್ಯನಾರಾಯಣಚೌದರಿ ಅಧಿಕಾರಿಗಳಾದ ತಹಶೀಲ್ದಾರ್ ಕಲ್ಯಾಣಿ, ಇಓ ಶಿವರಾಜಯ್ಯ, ಆರ್‌ಐ ಕಿರಣಕುಮಾರ್, ರವಿಕುಮಾರ್, ಡಾ.ರಾಮಾಂಜಿನೇಯಲು, ಡಾ.ಲಿಂಗರಾಜು, ಗ್ರಾ.ಪಂ ಸದಸ್ಯರಾದ ಶಂಕರ, ನಂದೀಶ, ಸೋಮಣ್ಣ, ತಿಪ್ಪೇಸ್ವಾಮಿ ಮುಖಂಡರಾದ ಲಾಯರ್ ಜಯರಾಂ, ಎನ್.ವೆಂಕಟೇಶ್, ನಾಗಯ್ಯ, ಮುಸ್ಟೂರ್ ಮಲ್ಲಿ ಮತ್ತು ಇತರರು ಇದ್ದರು.
ವರದಿ: ಸತೀಶ್