ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಲು ಚುನಾವಣೆ ನಿಮಗೆ ಒಂದು ಅಸ್ತ್ರವಾಗಿದೆ.
ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.
ಪಾವಗಡ : ಡಬಲ್ ಇಂಜಿನ್ ಸರ್ಕಾರಗಳಿಂದ ರಾಜ್ಯದ ಜನತೆಗೆ ಯಾವುದೇ ಅನುಕೂಲವಿಲ್ಲವೆಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಡಿ.ಕೆ ಶಿವಕುಮಾರ್ ಬೆಂಬಲದೊಂದಿಗೆ ಹೆಚ್. ವಿ ವೆಂಕಟೇಶ್ ಮಂಗಳವಾರ ಪಾವಗಡ ವಿಧಾನಸಭೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಅದಕ್ಕೂ ಮುನ್ನ ಪಟ್ಟಣದ ಸರ್ಕಾರಿ ಕಾಲೇಜಿನ ಮೈದಾನದಿಂದ. ಶನಿ ಮಹಾತ್ಮ ಸರ್ಕಲ್ ನವರೆಗೆ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಮೆರವಣಿಗೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಹೆಜ್ಜೆ ಹಾಕಿದರು.
ನೆರೆದಿದ್ದ ಅಸಂಖ್ಯಾತ ಕಾರ್ಯಕರ್ತರನ್ನು ಉದ್ದೇಶಿಸಿ ಡಿ.ಕೆ ಶಿವಕುಮಾರ್ ಮಾತನಾಡಿ,
40% ಕಮಿಷನ್ ಸರ್ಕಾರಕ್ಕೆ ಬರಿ 40 ಸೀಟ್ ಮಾತ್ರ ಕೊಡಬೇಕೆಂದು ರಾಹುಲ್ ಗಾಂಧಿ ನಿನ್ನೆ ತಿಳಿಸಿದ್ದಾರೆ ಎಂದು . ಕೆ.ಪಿ.ಸಿ.ಸಿ ಅಧ್ಯಕ್ಷ
ಡಿ.ಕೆ ಶಿವಕುಮಾರ್ ತಿಳಿಸಿದರು.
. ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಬೆಲೆ ಏರಿಕೆ ಉಂಟು ಮಾಡಿ ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆದಿವೆ ಎಂದು,
ತಾಲೂಕಿನ ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು,
ಬಿಜೆಪಿಯ ಸರ್ಕಾರವು ರೈತರನ್ನು ಕಡೆಗಣಿಸಿದೆ, ರೈತರ ಆದಾಯ ಕುಂಠಿತವಾಗಿದೆ,
ತಾನು ಇಂಧನ ಸಚಿವನಾಗಿದ್ದಾಗ ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕನ್ನು ತಾಲೂಕಿನಲ್ಲಿ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದರು,
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ನೈತಿಕತೆ ಇಲ್ಲ, ಆದ್ದರಿಂದಲೇ, ಜೆಡಿಎಸ್ ಮುಖಂಡರಾದ ಶಿವಲಿಂಗೇಗೌಡ, ವಾಸು, ಕೋಲಾರದ ಶ್ರೀನಿವಾಸ್ ಗೌಡ, ಬೆಮೆಲ್ ಕಾಂತರಾಜು, ಮಧು ಬಂಗಾರಪ್ಪ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ,
ಅದೇ ರೀತಿ ಬಿಜೆಪಿಯ ಪ್ರಬಲ ನಾಯಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ,
ಕಾಂಗ್ರೆಸ್ ಪಕ್ಷದ ಸಿದ್ಧಾಂತ, ತತ್ವಗಳಿಂದ ಅವರೆಲ್ಲರೂ ಆಕರ್ಷಿತರಾಗಿದ್ದಾರೆ ಎಂದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರಿ ಚುಕ್ಕಾಣಿ ಹಿಡಿಯುವುದು ಖಚಿತ ಎಂದರು.
ತಾಲೂಕಿನ ಜನತೆಯು ಮತ ಹಾಕುವಾಗ, ಆ ಮತವನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಹುಲ್ ಗಾಂಧಿಗೆ ಹಾಕಿದಂತೆ ಎಂಬುದನ್ನು ಗಮನವಿಟ್ಟುಕೊಂಡು ಕಾಂಗ್ರೆಸ್ಸಿಗೆ ಮತ ನೀಡಬೇಕೆಂದು ವಿನಂತಿಸಿದರು.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಮಾತನಾಡಿ,
ಬಿಜೆಪಿ ಸರ್ಕಾರವು ಕರ್ನಾಟಕದ ರೈತರಿಗೆ ನೆರವಾಗಿದ್ದ ನಂದಿನಿ ಹಾಲಿನ ಮೇಲಿನ ಮಲತಾಯಿ ಧೋರಣೆ ಹೊಂದಿದೆ,
ರಾಜ್ಯದಲ್ಲಿ ಗುಜರಾತಿನ ಮೂಲದ ಅಮೂಲ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ , ಕರ್ನಾಟಕದ ನಂದಿನಿಯನ್ನು ಮೂಲೆಗುಂಪವನ್ನಾಗಿ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರವನ್ನು ಕಾಂಗ್ರೆಸ್ ಗೆಲ್ಲಿಸುವ ಮೂಲಕ ನೀಡಬೇಕೆಂದರು.
ಆಂಧ್ರಪ್ರದೇಶದ ಮಾಜಿ ಕಾಂಗ್ರೆಸ್ ಸಚಿವರಾದ ರಘುವೀರ ರೆಡ್ಡಿ ಮಾತನಾಡಿ,
ಪಾವಗಡ ತಾಲೂಕಿಗೆ ಶಾಶ್ವತ ಕುಡಿಯುವ ನೀರನ್ನು ತರಲು ವೆಂಕಟರಮಣಪ್ಪನ ಪಾತ್ರ ಹೆಚ್ಚಾಗಿದೆ ಎಂದು, ವೆಂಕಟರಮಣಪ್ಪ ನ ಕಾಲಾವಧಿಯಲ್ಲಿ ತಾಲೂಕು ಹೆಚ್ಚು ಅಭಿವೃದ್ಧಿಯಾಗಿದೆ ಎಂದು,
ಈ ಬಾರಿ ಹೆಚ್.ವಿ ವೆಂಕಟೇಶ್ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಕಾರ್ಯಕರ್ತರ ಪಕ್ಷವಾಗಿದ್ದು, ವೆಂಕಟೇಶ್ ಗೆದ್ದರೆ, ಕಾರ್ಯಕರ್ತರು ಗೆದ್ದಂತೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ
ಬಿ ಎನ್ ಚಂದ್ರಪ್ಪ, ಶಾಸಕ ವೆಂಕಟರಮಣಪ್ಪ,
ಎಚ್. ವಿ ಕುಮಾರಸ್ವಾಮಿ, ಶಂಕರ್ ರೆಡ್ಡಿ, ರಾಜೇಶ್, ಸುದೇಶ್ ಬಾಬು, ಮುಂತಾದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.