ಅವೈಜ್ಞಾನಿಕ ಮೀಸಲಾತಿ ಆದೇಶವನ್ನು ಹಿಂಪಡೆಯುವಂತೆ ಒತ್ತಾಯ
ಪಾವಗಡ: ತಾಲ್ಲೂಕಿನ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿಯು ಅವೈಜ್ಞಾನಿಕ, ನ್ಯಾಯ ಮೂರ್ತಿ ಸದಾಶಿವ ಆಯೋಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಿಂದ ಪ್ರಾರಂಭವಾದ ಪ್ರತಿಭಟನೆ ಸರ್ಕಲ್, ಟೋಲ್ ಗೇಟಲ್ಲಿ ಅಂಬೇಡ್ಕರ್ ಪುತಳಿಗೆ ಮಾಲಾರ್ಪಣೆ ಮಾಡಿ ನಂತರ ತಾಲ್ಲೂಕಿನ ದಂಡಾಧಿಕಾರಿಗಳಾದ ಕೆ ಎನ್ ಸುಜಾತ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಸಾರ್ ಪಾಳ್ಯದನ್ಮಂತ್ರಾಯ ರವರು ಎಸಿ ರೂಂ ಅಲ್ಲಿ ಕುಳಿತಿ ಮಾಡಿರುವ ಸದಾಶಿವ ಆಯೋಗ ಅವೈಜ್ಞಾನಿಕ ಈ ಕೂಡಲೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಹಿಂಪಡೆಯಬೇಕು. ಇಷ್ಟು ದಿನ ಇದ್ದ ವೀಸಲಾತಿಯನ್ನೆ ಜಾರಿ ಮಾಡಬೇಕು, ಒಂದು ಪಕ್ಷ ಮಾಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ರಮೇಶ್ ರಾಥೋಡ್ ಮಾತನಾಡಿ ಈಗ ಮಾಡಿರುವ ವರ್ಗೀಕರಣ ಕಾನೂನು ಪ್ರಕಾರ ಎಲ್ಲಿಯೂ ಇಲ್ಲ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನದಲ್ಲಿಯು ಕೂಡ ಈ ಕಾನೂನು ಇಲ್ಲ, ಅಸಂಬದ್ಧವಾದ ಕಾನೂನು ರಚನೆ ಮಾಡುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಗೋವಿಂದ ನಾಯ್ಕ, ಸೇವಾ ನಾಯ್ಕ, ಶಾಂತ ಬಾಯಿ, ತಾಲ್ಲೂಕಿನ ಭೋವಿ ಸಂಘದ ಅಧ್ಯಕ್ಷರಾದ ಬಂಗಾರಪ್ಪ, ಬೊಟ್ಟು ವೆಂಕಟೇಶ್, ವಕೀಲರಾದ ವೆಂಕಟಸ್ವಾಮಿ, ನಾಗೇಶ್, ರಾಮಕೃಷ್ಣ ನಾಯ್ಕ, ನಂದೀಶ್, ಮಿಷ್ಣವರ್ಧನ್, ರಾಮ ನಾಯ್ಕ, ಕೇಶ ನಾಯ್ಕ, ರಾಕೇಶ್ ಹೆಚ್ ಆರ್, ರವಿ ಕುಮಾರ್, ವೀರಭದ್ರಪ್ಪ, ತಿಮ್ಮಣ್ಣ, ತಿಪ್ಪೇಸ್ವಾಮಿ ಮುಂತಾದ ಕೋಲಂಭೋ ಸಮುದಾಯ ಮುಖಂಡರು, ಜನರು ಭಾಗವಹಿಸಿದ್ದರು.
ವರದಿ :- ನಂದೀಶ್ ನಾಯ್ಕ