IMG 20230405 WA0064

ಪಾವಗಡ:ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದಕ್ಕೆ ಬೆಂಕಿ…!

DISTRICT NEWS ತುಮಕೂರು

ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದಕ್ಕೆ ಬೆಂಕಿ.

ಪಾವಗಡ : ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದಕ್ಕೆ ಬೆಂಕಿ ಹರಡಿ, ಮನೆ ಸುಟ್ಟು ಹೋಗಿರುವ ಘಟನೆ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಶ್ರೀರಂಗಪುರ ತಾಂಡಾದ ಭೀಮಾ ನಾಯ್ಕ್ ಮನೆಯು ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಹೋಗಿದ್ದು,
ಮನೆಯಲ್ಲಿದ್ದ ಆಹಾರ ಧಾನ್ಯಗಳು, ಬಟ್ಟೆಗಳು, ಪಾತ್ರೆಗಳು , ಇತರೆ ವಸ್ತುಗಳು ಸುಟ್ಟು ಹೋಗಿವೆ.

IMG 20230405 WA0060

ಭೀಮಾ ನಾಯಕ್ ಗಾರೆ ಕೆಲಸವನ್ನು ಮಾಡಿಕೊಂಡು, ಜೀವನ ಸಾಗಿಸುತಿದ್ದನೆಂದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು,
ಭೀಮಾ ನಾಯಕ್ ಇವರು ಗಾರೆ ಕೆಲಸಕ್ಕೆ ಪಾವಗಡಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ .ಈಗ ತಮಗೆ ಇರಲು ಮನೆ ಇಲ್ಲ, ಉಡಲು ಬಟ್ಟೆ ಇಲ್ಲ, ತಿನ್ನಲು ಆಹಾರವಿಲ್ಲ ಎಂದು ಅವರು ನಮ್ಮ ಅಳಲನ್ನು ತೋಡಿಕೊಂಡರು.

ವಿದ್ಯುತ್ ಅವಘಡ ಸಂಭವಿಸಿದ ಮೇಲೆ
ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದರು.ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಶಾಸಕ ವೆಂಕಟರಮಣಪ್ಪ‌ ಭೇಟಿ ನೀಡಿ ಪರಿಶೀಲಿಸಿದರು.