ಪ್ರತಿಯೊಬ್ಬರೂ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಡಾ. ನಾಗಲಕ್ಷ್ಮಿ ಚೌದರಿ
ಪಾವಗಡ : ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡದೆ ಇದ್ದಾಗ ಸಾರ್ವಜನಿಕರು ಅಧಿಕಾರಿಗಳನ್ನು ಪ್ರಶ್ನೆ ಮಾಡುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು
ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾಕ್ಟರ್ ನಾಗಲಕ್ಷ್ಮಿ ಚೌದರಿ ತಿಳಿಸಿದರು.
ತಾಲ್ಲೂಕಿನ ಸಿ.ಕೆ. ಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸೀಮಂತ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಮುಖ್ಯವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿರುವ ಮಾತ್ರ ಗಾಂಧೀಜಿ ಕಂಡ ನವ ಭಾರತ ನಿರ್ಮಾಣದ ಕನಸು ನನಸಾಗುತ್ತದೆ ಎಂದರು.
ರಾಜ್ಯ ಮಹಿಳಾ ಆಯೋಗ ದ ಉದ್ದೇಶ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರನ್ನು ಮುಂದೆ ತಂದು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿದೆ ಎಂದರು ಮಹಿಳೆಯರಿಗಾಗಿ ಕಾನೂನಿನ ಭದ್ರತೆ, ಆರ್ಥಿಕ ಭದ್ರತೆ, ಸಾಂಸ್ಕೃತ ಭದ್ರತೆ, ರಾಜಕೀಯ ಭದ್ರತೆ ಹಾಗೂ ಮಹಿಳೆಯರ ರಕ್ಷಣೆ ಮುಂತಾದ ಕಾರ್ಯಗಳಲ್ಲಿ ಮಹಿಳೆಯರ ಪರವಾಗಿ ಹೊರಡುವಂತಹ ಸಂಸ್ಥೆ ಇದಾಗಿದೆ ಎಂದರು.
ಸಿ ಕೆ ಪುರದ ಆಸ್ಪತ್ರೆಗೆ ಭೇಟಿ ನೀಡಿ ದಾಗ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದಿರುವುದು, ಆಸ್ಪತ್ರೆಯಲ್ಲಿ ಸರಿಯಾದ ರೀತಿಯಲ್ಲಿ ಪರಿಕರಗಳು ಇಲ್ಲದೆ ಇರುವುದು ಗುರುತಿಸಿ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಈ ಹಿಂದೆ ಈ ಮೂವರು ಗರ್ಭಿಣಿ ಸ್ತ್ರೀಯರು ಮೃತಪಟ್ಟಿರುವುದು ಒಂದು ಉದಾಹರಣೆ ಎಂದರು.
ಆಸ್ಪತ್ರೆ ಒಳಗಡೆ ಫಿಶ್ ತೊಟ್ಟಿ ಮಾಡಿದ್ದು ಇದರಲ್ಲಿನ ನೀರು ಮಲಿನ ಗೊಂಡಿದೆ. ಇದರಲ್ಲಿ ಮೀನುಗಳು ಇಲ್ಲ. ತೊಟ್ಟಿ ಸ್ವಚ್ಛತೆಯು ಇಲ್ಲ ಇದರಿಂದ ನಾನಾ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಇಲ್ಲಿ ಕೆಲಸ ಮಾಡುತ್ತಿರುವ ಹೆಲ್ತ್ ಇನ್ಸ್ಪೆಕ್ಟರ್ ನಾಲ್ಕು ವರ್ಷದ ಅನುಭವ ಇದ್ದರೂ ಸಹ ಸ್ವಚ್ಛತೆ ಕಡೆಗೆ ಗಮನಹರಿಸಿಲ್ಲ. ಎಂದು ಹೌಹಾರಿದರು.
ಒಳ ರೋಗಿಗಳನ್ನು ದಾಖಲಿಸಿಕೊಳ್ಳುವ ಕೊಠಡಿಗಳು ಸಹ ಸ್ವಚ್ಛತೆ ಇಲ್ಲ ಮತ್ತು ಶೌಚಾಲಯ ಬಳಕೆ ಇಲ್ಲದೆ. ಇನ್ನೂ ಹೆರಿಗೆ ಕೊಠಡಿ ಸ್ಥಿತಿ ನೋಡಿದರೆ ನನಗೆ ಭಯವಾಗುತ್ತದೆ ನೀವು ರೋಗಿಗಳ ಜೀವನದ ಜೊತೆ
ಚೆಲ್ಲಾಟವಾಡುತ್ತಿದ್ದೀರಾ. ವೈದ್ಯರಾದ ಡಾ. ಸೋನಿಕ ಗೌಡ ಮತ್ತು ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ಕಿರಣ್ ಅವರೇ ಇಲ್ಲಿನ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ಎಚ್ಚರಿಕೆ ನೀಡಿದರು.
ಸಿಕೆ ಪುರ ಗ್ರಾಮದ ಎರಡು ಎರಡನೇ ತರಗತಿಯ ವಿದ್ಯಾರ್ಥಿಯಾದ ಯಶ್ವಂತ್ ಆಟವಾಡುವಾಗ ಕಾಲಿನ ಹೆಬ್ಬೆರಳು ಗಾಯಗೊಂಡಿದ್ದು ಇದೇ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ಅಂದರೆ ಶನಿವಾರ ಚಿಕಿತ್ಸೆಗೆ ಬಂದಾಗ ವೈದ್ಯರು ಇಲ್ಲದೆ ಇರುವುದರಿಂದ ಶುಶ್ರೂಷಾ ಅಧಿಕಾರಿ ನಾಗರಾಜು ರವರು ಕೇವಲ ಬ್ಯಾಂಡೇಜ್ ಮಾಡಿ ಕಳಿಸಿರುವುದರಿಂದ ಇಂದು ಆ ಬೆರಳು ಕೊಳೆಯು ಹಂತಕ್ಕೆ ಬಂದಿದೆ . ಇದಕ್ಕೆ ಯಾರು ಜವಾಬ್ದಾರರು ?
ಆ ಮಗುವಿನ ಬೆರಳಿಗೆ ಹೇಚ್ಚಿನ ಶಸ್ತ್ರ ಚಿಕಿತ್ಸೆ ನೀಡಿ ಗುಣಪಡಿಸುವ ಜವಾಬ್ದಾರಿ ನಿಮ್ಮದು ಎಂದು ತಾಕಿದ್ದು ಮಾಡಿದರು.
ಆಶಾ ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇವರು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಜನರ ಆರೋಗ್ಯದ ಕಡೆ, ಕಾಳಜಿ ವಹಿಸುತ್ತಿದ್ದಾರೆ.
ತಾಲ್ಲೂಕಿನ ಎಲ್ಲಾ ಅಧಿಕಾರಿಗಳನ್ನು ಸಾರ್ವಜನಿಕರಿಗೆ ಪರಿಚಯಿಸಿ ಅವರಿಂದಲೇ ಅವರ ದೂರವಾಣಿ ಸಂಖ್ಯೆಯನ್ನು ಹೇಳಿಸಿ ಅವರ ನಂಬರಗಳನ್ನು ಸಾರ್ವಜನಿಕರು ಬರೆದುಕೊಂಡಿದ್ದು ವಿಶೇಷವಾಗಿತ್ತು.
ಸಮಸ್ಯೆಗಳ ಆಗರವಾದ ತಾಲ್ಲೂಕು ಆಸ್ಪತ್ರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ಕುಡಿಯಲು ನೀರಿಲ್ಲ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲದಿರುವುದು ಬೇಸರದ ಸಂಗತಿ ಯಾಗಿದೆ ಎಂದು ನಾಗಲಕ್ಷ್ಮಿ ಚೌದರಿ ತಿಳಿಸಿದರು.
ಕೇವಲ ಮೂರು ಜನ ಡಾಕ್ಟರ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಹೊರಗುತ್ತಿಗೆಯಿಂದ ಹೆಚ್ಚಿನ ವೈದ್ಯರನ್ನು ನೇಮಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಸಿ .ಕೆ. ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವೈದ್ಯರು ಚಿಕಿತ್ಸೆ ನೀಡಲು ನರ್ಸ್ ಗಳ ಮಾಹಿತಿ ಕೇಳಿ ಅವರು ವೈದ್ಯರೋ ಅಲ್ಲವೋ ಎನ್ನುವ ಅನುಮಾನ ಮೂಡುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವರದರಾಜು, ಇ.ಒ ಜಾನಕಿ ರಾಮ್, ತಾಲೂಕು ಆರೋಗ್ಯ ಅಧಿಕಾರಿ ಕಿರಣ್ ಸಿಪಿಐ ಸುರೇಶ್, ಪಿ ಡಿ ಪಿ ಓ ಸುನಿತಾ, ಸಿಕೆಪುರ ಗ್ರಾಮ ಪಂಚಾಯಿತಿ ಪಿಡಿಒ ರಂಗಸ್ವಾಮಿ ಅಧ್ಯಕ್ಷ ಅರುಂಧತಿ ನಾಗಲಿಂಗಪ್ಪ, ಗುಜನೂಡು ಗ್ರಾಮ ಪಂಚಾಯತಿ ಪಿಡಿಒ ರಾಘವೇಂದ್ರ ಬಿಲ್ ಕಲೆಕ್ಟರ್ ಮಂಜುನಾಥ್, ನಾಗರಾಜು, ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ. ಶ್ರೀನಿವಾಸಲು. A