IMG 20221123 WA0038

ಮಧುಗಿರಿ: ಕಾರ್ಯಕರ್ತರ ಒತ್ತಾಯದಿಂದ ಸ್ಪರ್ಧಿಸಲು ಒಪ್ಪಿದ ಶಾಸಕರು…!

DISTRICT NEWS ತುಮಕೂರು

*

*ಕಾರ್ಯಕರ್ತರ ಒತ್ತಾಯ ಹಾಗೂ ಜೆಡಿಎಸ್ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ನಾನೇ ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿ ….

ಮಧುಗಿರಿ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಮುಂದಿನ 2023ರ ವಿಧಾನಸಭಾ ಚುನಾವಣೆಯ ಜೆಡಿಎಸ್ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ತುಂಬಾ ಗೊಂದಲ ಉಂಟಾಗಿದ್ದು ಏಕೆಂದರೆ ಹಾಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ವಿ ವೀರಭದ್ರಯ್ಯನವರು ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಯಾರು ಬೇಕಾದರೂ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಬಹುದೆಂದು ಹೇಳಿದ್ದರು. ಯಾಕೆ ಸ್ಪರ್ಧಿಸುವುದಿಲ್ಲ ಎಂದು ಕಾರ್ಯಕರ್ತರು ಅಭಿಮಾನಿಗಳು ಸೇರಿಶಾಸಕ ಎಂ.ವಿ .ವೀರಭದ್ರಯ್ಯನವರನ್ನು ವಿಚಾರಣೆ ಮಾಡಿದಾಗ ನನ್ನ ಮಗ ಹಾಗೂ ನನ್ನ ಕುಟುಂಬದವರು ಈ ಬಾರಿ ನೀನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ ನಾವು ಯಾರಿಗೆ ಬೇಕಾದರೂ ಕ್ಷೇತ್ರವನ್ನು ಬಿಟ್ಟುಕೊಟ್ಟು ನಾವು ಅಗಲಿರಲು ಶ್ರಮಿಸಿ ಬೇರೆಯವರನ್ನು ಗೆಲ್ಲಿಸಿ ಕೊಡೋಣ ಎಂದು ತಿಳಿಸಿದರು ಆದ್ದರಿಂದ ಆ ಮಾತನ್ನು ನಾನು ಹೇಳಬೇಕಾಯಿತು ಎಂದರು

ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ ತಕ್ಷಣ ನನ್ನ ಹಿತೈಷಿಗಳು ಪಕ್ಷದ ಕಾರ್ಯಕರ್ತರು ಸಾವಿರಾರು ಜನ ಸೇರಿ ಹೆಚ್ .ಡಿ .ಕುಮಾರಸ್ವಾಮಿ ಅವರನ್ನು ಮಾಜಿ ಪ್ರಧಾನಿಗಳಾದ ಹೆಚ್ .ಡಿ .ದೇವೇಗೌಡರನ್ನು ಅವರ ನಿವಾಸದ ಹತ್ತಿರ ಹೋಗಿ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷದಿಂದ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂವಿ ವೀರಭದ್ರ ರವರನ್ನೇ ಮಧುಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಬೇರೆಯವರು ಯಾರೇ ಬಂದರೂ ಕೂಡ ನಾವು ಕೆಲಸ ಮಾಡುವುದಿಲ್ಲ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಶ್ರಮಿಸುತ್ತಿದ್ದಾರೆ ಆದ್ದರಿಂದ ಅವರನ್ನೇ ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಲು ತಾವುಗಳು ಅನುಕೂಲ ಮಾಡಿಕೊಡಬೇಕೆಂದು ಬೃಹ ತಸಂಖ್ಯೆಯಲ್ಲಿ ಕಾರ್ಯಕರ್ತರು ಒತ್ತಾಯ ಮಾಡಿದ್ದರಿಂದ ಕಾರ್ಯಕರ್ತರ ಆಶಯದಂತೆ ನನ್ನನ್ನು ಮಾಜಿ ಪ್ರಧಾನಿಗಳಾದ ಎಚ್. ಡಿ .ದೇವೇಗೌಡ ರವರು ಹಾಗೂ ಹೆಚ್. ಡಿ .ಕುಮಾರಸ್ವಾಮಿ ಅವರು ನನಗೆ ಆದೇಶ ಮಾಡಿದ್ದರಿಂದ ಇಂದು ನಾನು ಪತ್ರಿಕೆಯಾಗೋಷ್ಠಿಯನ್ನು ಕರೆದು ಏನು ಜೆಡಿಎಸ್ ಪಕ್ಷದಲ್ಲಿ ಗೊಂದಲವಿತ್ತು ಆ ಗೊಂದಲಕ್ಕೆ ಇಂದು ತೆರೆ ಎಳೆಯಲಾಗಿದೆ ಜೆಡಿಎಸ್ ಪಕ್ಷದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಎಂ.ವಿ .ವೀರಭದ್ರಯ್ಯ ಆದ ನಾನುಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

IMG 20221123 WA0039


ಮತ್ತು ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಾನು ಗೆದ್ದು ಬರುತ್ತೇನೆ. ಮತ್ತು ಸಣ್ಣಪುಟ್ಟ ಊಹಾಪೋಹಗಳಿಗೆ ಮಾಧ್ಯಮದ ಮೂಲಕ ತೆರೆ ಹೇಳಬೇಕಾಗುತ್ತದೆ.ಮುಂದಿನ ದಿನಗಳಲ್ಲಿ ಎಚ್. ಡಿ .ಕುಮಾರಸ್ವಾಮಿ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನಮ್ಮ ಗುರಿ. ಮತ್ತು ವೈಯಕ್ತಿಕ ಕಾರಣಗಳಿಂದ ದೊಡ್ಡ ಮಟ್ಟದಾಗಿ ಚರ್ಚೆ ಮಾಡುವುದು ಬೇಡ ಎಂದು ತಾಕಿತ್ತು ಮಾಡಿದರು.

ನಾನು ಅಧಿಕಾರಿಯಾಗಿ ಸೇವೆ ಮಾಡಿದವನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು ಕ್ಷೇತ್ರಕ್ಕೆ ಕೈಲಾದ ಮಟ್ಟಿಗೆ ಕೆಲಸ ಮಾಡಿದ್ದೇನೆ ಮುಖ್ಯವಾಗಿ ಕಾರ್ಯಕರ್ತರ ಒತ್ತಾಯ ಹೈಕಮಾಂಡ್ ಸೂಚನೆಯ ಮೇರೆಗೆ ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು. ಅವಕಾಶ ಕೂಡಿ ಬಂದಿದೆ

ಮಾಧ್ಯಮದವರು ಶಾಸಕರಾದ ಎಂವಿ ವೀರಭದ್ರಯ್ಯನವರನ್ನು ಪ್ರಶ್ನೆ ಮಾಡಿ ಆರು ತಿಂಗಳ ಮುಂಚಿತವಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ರಿ ಕಾರಣವೇನು ತಿಳಿಸಬಹುದಲ್ಲ ಎಂದು ಕೇಳಿದಾಗ ಹೊಸ ಅಭ್ಯರ್ಥಿ ಯಾರಾದರೂ ಬಂದರೆ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರನ್ನು ಮಾತನಾಡಿಸಲು ಸಮಯದ ಅಭಾವ ಇರುತ್ತದೆ ಆದ್ದರಿಂದ ಮುಂಚಿತವಾಗಿ ನಾನು ಹೇಳಿಕೆಯನ್ನು ಕೊಟ್ಟಿದ್ದೆ ಎಂದರು.

ಯುದ್ಧಕ್ಕೆ ಇಳಿದ ಮೇಲೆ ಹಿಂಜರಿಯುವಪ್ರಶ್ನೆಯೇ ಇಲ್ಲ ಮನಸ್ಸುಪೂರ್ವಕವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಿ ಎಲ್ಲರ ಜೊತೆಗೂಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಶತಸಿದ್ಧನಾಗಿದ್ದೇನೆ ಮತ್ತು ಇದೊಂದು ದೊಡ್ಡ ಸಮರವಾಗಿದೆ ನಾನು ಕಾಯ .ವಾಚ. ಮನಸ್ಸುಪೂರ್ವಕವಾಗಿಎಲ್ಲರ ಜೊತೆಗೂಡಿ ಕೆಲಸ ಮಾಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ತಿಮ್ಮರಾಯಪ್ಪ. ತಾಲೂಕು ಪರಿಶಿಷ್ಟ ಜಾತಿ ಜೆಡಿಎಸ್ ಘಟಕದ ಅಧ್ಯಕ್ಷರಾದ ಶಿವಣ್ಣ. ಆರ್ ಕೆ ರೆಡ್ಡಿ. ಪುರಸಭಾ ಸದಸ್ಯರಾದ ಚಂದ್ರಶೇಖರ್ ನಾಗರಾಜ ಜೆಡಿಎಸ್ ನಗರ ಘಟಕದಅಧ್ಯಕ್ಷರಾದ ಲೋಕೇಶ್. ನಾಸೀರ್ ಅಹ್ಮದ್ ಮೋಹನ್ ಕುಮಾರ್ ನವೀನ್ ಕುಮಾರ್. ವೆಂಕಟಪುರ ಗೋವಿಂದರಾಜು. ಕಂಬತನ ಹಳ್ಳಿರಘು. ಮಂಜುನಾಥ್. ಶೈಲೂ. ಹೂವಿನಹಳ್ಳಿ ರಾಮಚಂದ್ರಪ್ಪ. ಸಾದರಹಳ್ಳಿ ಜಯಣ್ಣ. ಇನ್ನು ಮುಂತಾದ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು

.