IMG 20211023 WA0015

ಪಾವಗಡ: ಭೂ-ತಾಪಮಾನದಿಂದ ಪ್ರಕೃತಿ ವಿಕೋಪ….!

DISTRICT NEWS ತುಮಕೂರು

ಭೂ-ತಾಪಮಾನದಿಂದ ಪ್ರಕೃತಿ ವಿಕೋಪ

ವೈ.ಎನ್.ಹೊಸಕೋಟೆ: ಭೂಮಿಯಲ್ಲಿ ತಾಪಮಾನ ಹೆಚ್ಚಳದಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದು ನಿವೃತ್ತ ದೈಹಿಕ ಶಿಕ್ಷಕ ಫಕ್ರುದ್ದೀನ್ ತಿಳಿಸಿದ್ದಾರೆ.

ತೆಲುಗು ಚಿತ್ರ ನಟ ಪ್ರಭಾಸ್ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಆವರಣದಲ್ಲಿ ತಾಲ್ಲೂಕು ಪ್ರಭಾಸ್ ಅಭಿಮಾನಿ ಬಳಗದಿಂದ ಗಿಡ ನೀಡುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿ ಅವರು, ಇಂದು ಪರಿಸರದಲ್ಲಿ ಗಿಡಮರಗಳು ಕಡಿಮೆಯಾಗುತ್ತಿವೆ. ಆದ್ದರಿಂದ ಭೂಮಿಯಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಮೇಘಸ್ಪೋಟ ಕೆಲವೇ ಪ್ರದೇಶಗಳಲ್ಲಿ ಉಂಟಾಗಿ ಪ್ರಕೃತಿಯಲ್ಲಿ ವಿಕೋಪಗಳು ಸಂಭವಿಸುತ್ತಿವೆ. ಹಿಮಪರ್ವದ ಮಂಜು ಕರಗಿ ಹಾನಿಯುಂಟುಮಾಡುತ್ತಿದೆ. ಇದನ್ನು ತಪ್ಪಿಸಬೇಕಾದರೆ ಗಿಡಮರಗಳನ್ನು ಬೆಳೆಸುವ ಅಗತ್ಯತೆ ಇದೆ. ಇಂದು ಪ್ರಭಾಸ್ ಅಭಿಮಾನಿಗಳ ಸಂಘ ವತಿಯಿಂದ ಪ್ರಭಾಸ್ ನಟ ಹುಟ್ಟುಹಬ್ಬವನ್ನು ಗಿಡವನ್ನು ನೆಡುವ ಮೂಲಕ ಆಚರಿಸಿ ಪರಿಸರ ಉಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.IMG 20211023 WA0016

ಮುಖಂಡರಾದ ಎನ್. ಆರ್. ಅಶ್ವತ್ ಕುಮಾರ್ ಮಾತನಾಡಿ, ಹುಟ್ಟುಹಬ್ಬದ ಪ್ರಯುಕ್ತ ಪಾವಗಡ ತಾಲ್ಲೂಕು ಪ್ರಭಾಸ್ ಅಭಿಮಾನಿ ಸಂಘ ದುಂದುವೆಚ್ಚ ಮಾಡದಂತೆ ಗಿಡ ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಐ.ಎ.ನಾರಾಯಣಪ್ಪ, ಗ್ರಾಪಂ ಸದಸ್ಯ ನಂದೀಶ್, ಮುಖಂಡ ಎಲ್.ಡಿ.ಸುಬ್ರಮಣಿ
ಪಾವಗಡ ತಾಲ್ಲೂಕು ಪ್ರಭಾಸ್ ಅಭಿಮಾನಿ ಸಂಘ ಅಧ್ಯಕ್ಷ ಶಶಿಪ್ರಭಾಸ್, ತುಮಕೂರು ಜಿಲ್ಲಾ ಸಂಘದ ಕಾರ್ಯದರ್ಶಿ ವೇಣುಪ್ರಸಾದ್, ವೈ.ಎನ್.ಹೊಸಕೋಟೆ ಘಟಕದ ಅಧ್ಯಕ್ಷ ವಿನೋದ್, ರವಿ, ಮುರುಳಿ, ರಘು, ಹೇಮಂತ್, ಭಾಗವಹಿಸಿದ್ದರು.

ವರದಿ: ಸತೀಶ್