ಶೋಷಿತ ವರ್ಗಗಳ ಹರಿಕಾರ ಡಾ. ಬಿಆರ್ ಅಂಬೇಡ್ಕರ್.
ಪಾವಗಡ : ಸಮಾಜದಲ್ಲಿ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಪಣತೊಟ್ಟು ಅವರಿಗೆ ಸಮಾಜದಲ್ಲಿ ಉತ್ತಮ ಅವಕಾಶ ಕಲ್ಪಿಸಿದಂತಹ ಮಹಾನ್ ವ್ಯಕ್ತಿ ಡಾ. ಬಿ.ಆರ್ ಅಂಬೇಡ್ಕರ್ ಎಂದು ಶಾಸಕ ಹೆಚ್. ವಿ ವೆಂಕಟೇಶ್ ತಿಳಿಸಿದರು.
ಪಟ್ಟಣದ ಪುರಸಭೆಯ ಹಿಂಭಾಗದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ನಾವೆಲ್ಲ ಬದ್ಧರಾಗಿರಬೇಕು.
ಸಂವಿಧಾನದಿಂದಾಗಿ ಇಂದು ಶೋಷಿತ ವರ್ಗಗಳು ತಲೆಯೆತ್ತಿ ನಡೆಯುವಂತಹ ಸ್ಥಿತಿಗೆ ಬಂದಿದ್ದೇವೆ ,ಆದರೆ ಇಂದು ಕೇಂದ್ರ ಸರ್ಕಾರ ಸಂವಿಧಾನ ಬದಲಾಯಿಸುವುದಕ್ಕೆ ಹುನ್ನಾರ ಮಾಡುತ್ತಿದೆ ಎಂದರು.
ಪಟ್ಟಣದ ವಿವಿಧ ಶಾಲೆಗಳಿಂದ ಮಕ್ಕಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಎನ್ ಮೂರ್ತಿ, ಕಂದಾಯ ಅಧಿಕಾರಿ ರಾಜಗೋಪಾಲ್, ಇ.ಓ ಜಾನಕಿರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ,
ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ಶಂಶುದ್ದೀನ್, ಸಿ.ಡಿ.ಪಿ.ಓ ಸುನಿತಾ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು ಮಾಜಿ ಪುರಸಭಾ ಸದಸ್ಯರಾದ ಎ ಶಂಕರ್ ರೆಡ್ಡಿ ಗಂಗಮ್ಮ, ರಾಮಾಂಜಿನಪ್ಪ, ವೇಲುರಾಜು ಪುರಸಭಾ ಸದಸ್ಯರಾದ ರಾಜೇಶ್ ರವಿ ವೆಂಕಟರಮಣ ವಿಜಯಪ್ಪ, ಗೊರ್ತಿ ನಾಗರಾಜು ರವಿ ದಲಿತ ಮುಖಂಡರಾದ ಡಿಜೆಎಸ್ ನಾರಾಯಣಪ್ಪ, ಕನ್ನಮೆಡಿ ಕೃಷ್ಣಮೂರ್ತಿ, ಚೆನ್ನಮ್ಮನಳ್ಳಿ ವೆಂಕಟರಮಣ, ಮಂಗಳವಾಡ ಹನುಮಂತರಾಯ, ಆಪ್ ರಾಮಾಂಜಿನಪ್ಪ,
ಸೇರದಂತೆ ಅನೇಕರು ಹಾಜರಿದ್ದರು…
ವರದಿ. ಶ್ರೀನಿವಾಸಲು. A