IMG 20241125 WA0009

ಪಾವಗಡ : ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳು ಸರಿಯಾಗಿ ಬಳಸಿಕೊಳ್ಳಬೇಕು- ನ್ಯಾಯ ಮೂರ್ತಿ ವಿ.ಮಾದೇಶ್.

DISTRICT NEWS ತುಮಕೂರು

ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳು ಸರಿಯಾಗಿ ಬಳಸಿಕೊಳ್ಳಬೇಕು. ನ್ಯಾಯ ಮೂರ್ತಿ ವಿ.ಮಾದೇಶ್.

ಪಾವಗಡ : ಬಾಲ್ಯಾವಸ್ಥೆಯಲ್ಲಿ ಮಕ್ಕಳ ಬೆಳವಣಿಗೆಗೆ ಅವಶ್ಯಕತೆವಾದ ಪೌಷ್ಟಿಕ ಆಹಾರವನ್ನು ಸರ್ಕಾರ ಅಂಗನವಾಡಿಗಳಿಗೆ ಒದಗಿಸುತ್ತಿದ್ದು ಅವುಗಳನ್ನು ಅಂಗನವಾಡಿ ಕೇಂದ್ರಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಹತ್ತಿರವಿರುವ ಅಂಬೇಡ್ಕರ್ ಭವನದಲ್ಲಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ
ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದಿಂದ ಅಂಗನವಾಡಿ ಮಕ್ಕಳಿಗೆ ಬರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು, ಯಾವುದೇ ರೀತಿಯಲ್ಲಿ ಮಕ್ಕಳಿಗೆ ವಂಚನೆ ಆಗಬಾರದು ಎಂದರು.
ಅಂಗನವಾಡಿ ಶಾಲೆಯಲ್ಲಿ ಆಟದೊಂದಿಗೆ ಪಾಠ ಎಂಬಂತೆ ಬೇಸಿಕ್ ಶಿಕ್ಷಣ ನೀಡಬೇಕು ಎಂದರು.

ಮಹಿಳೆಯರಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ ಎಂದರು.

ಇತ್ತೀಚಿನ ಸಮಾಜದಲ್ಲಿ ತಾಯಿಯಾದವಳು ಮಗಳನ್ನು ನೋಡುವ ರೀತಿ ಮತ್ತು ಸೊಸೆಯನ್ನು ನೋಡು ರೀತಿಯೇ ಬೇರೆ ಇರುವುದು ಕೌಟುಂಬಿಕ ಕಲಹಗಳನ್ನು ಉಂಟುಮಾಡುತ್ತಿವೆ ಎಂದರು.

ಕುಟುಂಬದ ಸಣ್ಣ ಪುಟ್ಟ ವಿಚಾರಗಳಿಗಾಗಿ ಕೋರ್ಟ್ ಮೆಟ್ಟಿಲೇರುವುದು ಸರ್ವೇಸಾಮಾನ್ಯವಾಗಿದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ವಕೀಲ ಸಂಘದ ಅಧ್ಯಕ್ಷ ಶೇಷ ನಂದನ್ ಮಾತನಾಡಿ,
ಮಹಿಳೆಯ ಮೇಲಿನ ದೌರ್ಜನ್ಯ ಇವತ್ತಿನ ದಲ್ಲ ಇದು ತಲತಲಾಂತರದಿಂದ ಬಂದಂತಹ ವ್ಯವಸ್ಥೆಯಾಗಿದೆ ಎಂದರು.
ಪುರುಷಪ್ರಧಾನ ಸಮಾಚದಲ್ಲಿ ಹೆಣ್ಣಿನ ಶೋಷಣೆ ಹೆಚ್ಚುತ್ತಿದೆ ಎಂದರು.ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ, ವಿಧಿ ವಿಧಾನಗಳ ಮೂಲಕ ಹೆಣ್ಣನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಿಂದೇಟು ಹಾಕಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಧಿಕ ಸಿವಿಲ್ ನ್ಯಾಯಾಧೀಶರದ ವಿ ಪ್ರಿಯಾಂಕ, ಕಾರ್ಮಿಕ ಇಲಾಖೆಯ ಅಬ್ದುಲ್ ರವೂರ್,
ವಕೀಲ ಸಂಘದ ಕಾರ್ಯದರ್ಶಿ ಪ್ರಭಾಕರ್ ರೆಡ್ಡಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸಣ್ಣೀರಪ್ಪ, ಪ್ಯಾನಲ್ ವಕೀಲರಾದ ದಿವ್ಯ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳು ಹಾಜರಿದ್ದರು.

ವರದಿ‌: ಶ್ರೀನಿವಾಸಲು‌.ಎ

Leave a Reply

Your email address will not be published. Required fields are marked *