ಚಿರತೆ ಸೆರೆ. ನಿಟ್ಟಿಸಿರು ಬಿಟ್ಟ ಬಡಾವಣೆವಾಸಿಗಳು.
ಪಾವಗಡ : ಕಳೆದ 3 ತಿಂಗಳಿಂದ ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿದ್ದ
ಚಿರತೆ ಕೊನೆಗೆ ಭಾನುವಾರ ರಾತ್ರಿ ಬೋನಿಗೆ ಬಿದ್ದಿದೆ.
ಕಳೆದ ಎರಡು ಮೂರು ತಿಂಗಳಿಗಳಿಂದ ಹೌಸಿಂಗ್ ಬೋರ್ಡ್ ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಾತ್ರಿ ವೇಳೆ ಬೀದಿ ನಾಯಿಗಳ ಮೇಲೆ ದಾಳಿ ಮಾಡುತ್ತಿರುವುದು ಸಿಸಿ ಕ್ಯಾಮೆರಾ ಗಳಲ್ಲಿ ಸೆರೆಯಾಗಿದ್ದು.
ಚಿರತೆಯನ್ನು ಹಿಡಿಯುವಂತೆ ಬಡಾವಣೆ ನಿವಾಸಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮನವಿ ಮಾಡಿದ್ದರು.
ಜನರ ಮನವಿಯನ್ನು ಆಲಿಸಿದ ಇಲಾಖೆ ಎರಡು ತಿಂಗಳ ಹಿಂದೆ ವೆಂಕಟಾಪುರ ರಸ್ತೆಯ ಹೌಸಿಂಗ್ ಬೋರ್ಡ್ ಮುಂದಿರುವ ಕೋಳಿ ದೇವರಾಜ್ ಎಂಬುವರ ಮನೆ ಬಳಿ ಬೋನ್ ಇರಿಸಿದ್ದು.
ಭಾನುವಾರ ರಾತ್ರಿ ಆಹಾರ ಅರಸಿ ಬಂದ ಚಿರತೆಯು ಅರಣ್ಯ ಇಲಾಖೆಯವರು ಇಟ್ಟಂತಹ ಬೋನಿಗೆ ಬಿದ್ದಿದೆ.
ವಿಷಯ ತಿಳಿದ ನಂತರ ಅರಣ್ಯ ಅಧಿಕಾರಿಗಳು ಚಿರತೆಯನ್ನು ಬೇರಡೆಗೆ ಸ್ಥಳಾಂತರಿಸಿದರು.ಚಿರತೆ ಸೆರೆಯಾದ ಹಿನ್ನೆಲೆ ಸ್ಥಳೀಯ ನಿವಾಸಿಗಳು ನಿಟ್ಟಿಸಿರು ಬಿಟ್ಟಂತಾಗಿದೆ.
ವರದಿ : ಶ್ರೀನಿವಾಸಲು ಎ