ವೀರಶೈವ ಲಿಂಗಾಯತ ಧರ್ಮದ ಆಚರಣೆಗಳಿಗೆ ಅವಮಾನ….!
ಪೋಲಿಸ್ ವರಿಷ್ಠಾಧಿಕಾರ ಮಾತಿಗೂ ಬೆಲೆ ಇಲ್ಲ…
ಪೋಲೀಸಪ್ಪನ ಕೌರ್ಯ…
ಮಾನವಹಕ್ಕುಗಳ ಹರಣ….
ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೋಟೆ ಪೋಲೀಸ್ ಠಾಣೆಗೆ ಜೆಡಿ ಎಸ್ ಬೆಂಬಲಿತ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಡಾನ್ ಸೀನ ಅಲಿಯಾಸ್ ಶ್ರೀನಿವಾಸ್ ಇವರ ಮಗ ಉದಯಕುಮಾರ್ ಹೆಚ್ ಎಮ್ ಷಣ್ಮುಖಮೂರ್ತಿ ಕುಟುಂಬ ವಿರುದ್ಧ ಸುಳ್ಳು ದೂರನ್ನು ನೀಡಿದ್ದಾರೆ. ಡಾನ್ ಎಂಬ ಭಯ ಪೋಲೀಸಪ್ಪನ ಕಿರುಕುಳದಿಂದ ಮಾನಸಿಕ ಖಿನ್ನತೆ ಹೊಳಗಾಗಿ 30-10-2024 ರಂದು ಗ ನಿಧನ ಹೊಂದಿದರು ಎಂದು ಕುಟುಂಬ ವರ್ಗ ತಿಳಿಸಿದೆ..
ಏನಿದು ಘಟನೆ
ವೈ,ಎನ್ ಹೊಸಲೋಟೆಯ ಡಿ ಬ್ಲಾಕ್ ನಲ್ಲಿರುವ ಮಹಂತೀಮಠ ದಲ್ಲಿ ಹೆಚ್ ಎಮ್ ಷಣ್ಮುಖಮೂರ್ತಿ ಕುಟುಂಬ ರೇಷ್ಮೆ ಹುಳು ಸಾಗಾಣಿಕಾ ಮನೆಯನ್ನು 2018 ರಲ್ಲಿ ಗ್ರಾಮಪಂಚಾತಿಯಿಂದ ಲೈಸೆನ್ಸ್ ಪಡೆದು ಪಶ್ಚಿಮ ದಿಕ್ಕಿನಲ್ಲಿ ಐದು ಅಡಿ ಜಾಗ ಬಿಟ್ಟು ಕಾನೂನಾತ್ಮಕವಾಗಿ ರೇಷ್ಮೆ ಸಾಕಾಣೆ ಮನೆ ನಿರ್ಮಾಣಮಾಡಿರುತ್ತಾರೆ. ಲಭ್ಯ ದಾಖಲೆಗಳ ಪ್ರಕಾರ 2020 ರಲ್ಲಿ ಡಾನ್ ಸೀನ ನಿವೇಶನ ಖರೀದಿಸುತ್ತಾನೆ. ನಂತರ ಸುಮಾರು 2022 ರಿಂದ ಪಶ್ಚಿಮ ದಿಕ್ಕಿನಲ್ಲಿರುವ ಕಿಟಕಿಗಳನ್ನು ಮುಚ್ಚುವಂತೆ ಹೆಚ್ ಎಮ್ ಷಣ್ಮುಖಮೂರ್ತಿ ಕುಟುಂಬಕ್ಕೆ ನಿರಂತರ ಕಿರುಕುಳ ನೀಡುತ್ತಾನೆ.
ಮೂರ್ತಿಯವರ ಕುಟುಂಬ ನಿನ್ನ ನಿವೇಶನದಲ್ಲಿ ನೀನು ಮನೆ ನಿರ್ಮಾಣ ಮಾಡಿಕೊ ನಾವೇನು ತೊಂದರೆ ಮಾಡುವುದಿಲ್ಲ ಎಂದು ತಿಳಿಸುತ್ತಾರಂತೆ. ಆದರೂ ಈತ ಈ ಕುಟುಂಬ ಕ್ಕೆ ಕಿರುಕುಳ ನೀಡುವುದನ್ನು ನಿಲ್ಲಿಸುವುದಿಲ್ಲ. ಅಂತಿಮ ಅಸ್ತ್ರವಾಗಿ ತನ್ನ ಜಾತಿ ಎಂಬ ಪದವನ್ನು ಇದಕ್ಕೆ ಜೋಡಿಸಿ ಸುಳ್ಳು ದೂರನ್ನು ನೀಡುತ್ತಾನೆ. ಷಣ್ಮುಖಮೂರ್ತಿ ಯವರ ದೊಡ್ಡ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುತ್ತಾನೆ ದೂರುದಾರನನ್ನು ಭೇಟಿ ಮಾಡಿರುವುದೇ ಇಲ್ಲ ಇತರೆ ಕುಟುಂಬ ಸದಸ್ಯರು ಈತನ ಜೊತೆ ಮಾತನಾಡಿರುವುದೇ ಇಲ್ಲ ಮುಖಾ-ಮುಖಿ ಭೇಟಿನೂ ಇಲ್ಲ –ಚರ್ಚೆನೂ ಇಲ್ಲ. ಕ್ರಮಿ ಡಾನ್ ಸೀನ ಕ್ರಿಮಿನಲ್ ಹಿನ್ನಲೆಯಿರುವ ವ್ಯಕ್ತಿ 1994 ರಿಂದ 2024 ರ ಅವಧಿಯಲ್ಲಿ FIR ಗಳು ದಾಖಲಾಗಿವೆ, ಜೈಲುವಾಸ ಅನುಭವಿಸಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ವ್ಯಕ್ತಿ ಮತ್ತು ದಿವಂಗತ ಹೆಚ್ ಎಮ್ ಷಣ್ಮುಖಮೂರ್ತಿ ಮತ್ತು ಅವರ ಪತ್ನಿ ಹಿರಿಯನಾಗರೀಕರು ಅವರು ಹೋಗಿ ಜಾತಿ ನಿಂದನೆ ಮಾಡಿದರೆ ನಮ್ಮನ್ನು ಬದುಕಲು ಬಿಡುತ್ತಾನ ಈತನ ಕುಟುಂಬ ದ ಹಿನ್ನಲೆ ಎಂತಹದ್ದು ಅವರ ಎದರು ನಿಂತು ಮಾತನಾಡುವ ದೈರ್ಯ ಎಲ್ಲಿದೆ…? ಎನ್ನುತ್ತದೆ ಕುಟುಂಬ ವರ್ಗ
ಈತನ ಆದಾಯ ಮೂಲ ತನಿಖೆಯಾದರೆ ಬಹಳಷ್ಟು ಸತ್ಯ ಸಂಗತಿಗಳು ಹೊರಬರುತ್ತವೆ. ವೈ.ಎನ್ ಹೊಸಕೋಟೆಯ ಸುತ್ತು ಮುತ್ತಲಿನ ಗ್ರಾಮಗಳಲ್ಲಿ ಈತ ಮತ್ತು ಮಗ ಉದಯ್ ಕುಮಾರ್ ನಿಂದ ನೊಂದವರು ಬಹಳಷ್ಟು ಜನ ಇದ್ದಾರೆ ಇವರು ಯಾರು ಪೊಲೀಸರಿಗೆ ದೂರು ನೀಡುವ ದೈರ್ಯವಿಲ್ಲ ಕಾರಣ ಡಾನ್ ಜೊತಗೆ ಕೆಲ ಪೊಲೀಸರು ಈತನ ಕೈಗೊಂಬೆ ಗಳಾಗಿದ್ದಾರೆ ಎಂಬ ಮಾಹಿತಿಯನ್ನು ಸಾರ್ವಜನಿಕರು ನೀಡುತ್ತಾರೆ.
ಕಿಟಕಿ ಎಂಬುದು ಸಿವಿಲ್ ವಿಷಯ ಅದರೊಂದಿಗೆ ಜಾತಿನಿಂದನೆ ಎಂದ ಹಸಿ ಸುಳ್ಳಿನ ಪದವನ್ನು ಜೋಡಿಸಿ ದೂರು ನೀಡುತ್ತಾನೆ. ಮೇಲ್ನೋಟಕ್ಕೆ ಆದರೂ ದೂರಿನಲ್ಲಿ ಉಲ್ಲೇಖವಾಗಿರುವ ಅಂಶಗಳ ಸತ್ಯಾ-ಸತ್ಯತೆಯನ್ನು ಪೊಲೀಸರು ಪರಿಶಿಲಿಸುವುದಿಲ್ಲ ಏಕಾಏಕಿ ಪೊಲೀಸ್ ಠಾಣೆ ಗೆ ಮೂರ್ತಿಯವರ ಕುಟುಂಬವನ್ನು 4-10- 2024 ರಂದು ಠಾಣೆ ಕೆರಸುತ್ತಾರೆ.
ದೂರಿನಲ್ಲಿ ಏನಿದೆ ಎಂದರೆ….!
ಉದಯಕುಮಾರ್ ಬಿನ್ ಶ್ರೀನಿವಾಸ್ ೨೮ ವರ್ಷ ನಾಯಕ ಜನಾಂಗ ವೈ ಎನ್ ಹೊಸಕೋಟೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ ಆದ ನಾನು ತಮ್ಮಲ್ಲಿ ಈ ಪಿರ್ಯಾದು ಮಾಡಿಕೊಳ್ಳುವುದೇನೆಂದರೆ
ಮಾನ್ಯರೆ ನಾನು ಮತ್ತು ನಮ್ಮ ಕುಟುಂಬ ಇದೇ ವೈ ಎನ್ ಹೊಸಕೋಟೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದೇವೆ ನಮ್ಮ ಮನೆಗೆ ಹೊಂದಿಕೊಂಡು ನಮಗೆ ಸೇರಿದ ನಿವೇಶನ ಸ್ಥಳ ಇರುತ್ತದೆ. ನಿವೇಶನಕ್ಕೆ ಹೊಂದಿಕೊಂಡು ಹೆಚ್ ಎಸ್ ರಾಜೇಶ್ ಬಿನ ಹೆಚ್ ಎಮ್ ಷಣ್ಮುಖ ಮೂರ್ತಿ ಯವರ ಮನೆ ಇದ್ದು ಅವರಿಗೆ ಸಂಬಂದಿಸಿದಂತೆ ರೇಷ್ಮೆ ಶೆಡ್ ನಿರ್ಮಿಸುತ್ತಾರೆ, ಶೆಡ್ ನಿರ್ಮಿಸುವ ವೇಳೆ ಅದರ ಪಶ್ಚಿಮ ಅಂದರೆ ನಮ್ಮ ನಿವೇಶನ ಕಡೆ ಗೋಡೆಯಲ್ಲಿ ಕಿಟಕಿ ಇಡುತ್ತಿದ್ದರು. ಈ ಸಂದರ್ಭದಲ್ಲಿ ನಾವು ಪ್ರಶ್ನಿಸಿದ್ದಕ್ಕೆ ತಾತ್ಕಾಲಿಕವಾಗಿ ಇಡುತ್ತಿದ್ದು ನೀವು ಮನೆ ನಿರ್ಮಿಸುವ ವೇಳೆ ಮುಚ್ಚುತ್ತೇವೆ ಎಂದು ಹೇಳಿದ್ದರು. ನಾವು ಒಪ್ಪಿ ಸುಮ್ಮನೆ ಆದೆವು ಈಗ ಮನೆ ಕಟ್ಟುತ್ತಿದ್ದು ಕಿಟಕಿ ಮುಚ್ಚುವಂತೆ ತಿಳಿಸಿದೆವು ಇಲ್ಲ ನೀವು ಗೋಡೆ ಕಟ್ಟಿಕೊಳ್ಳಿ ಅವೇ ಬಂದ್ ಹಾಗುತ್ತವೆ ಎಂದು ತಿಳಿಸಿದರು.
ಮಠದ ಹತ್ತಿರ ಬಂದು ಮತಾಡಿದ್ದೀರ ನಿಮಗೆ ಯೋಗ್ಯತೆ ಇಲ್ಲ, ಮಠದ ಒಳಕ್ಕೆ ಬರಲು ಯೋಗ್ಯತೆ ಇಲ್ಲ ನಾಯಕರು, ನಾಯಕ ನನ್ನ ಮಕ್ಕಳು, ನಾಯಕ ಜಾತಿ ನಿಮ್ಮದು ಎಂದು ಬೈದರು ಎಂಬ ಅಂಶಗಳು ದೂರಿನಲ್ಲಿ ನೀಡಿದ್ದಾರೆ.
ಪೆನ್ನು ಪೇಪರ್ ಇದೆ ಅಂತ ಬಾಯಿಗೆ ಬಂದಿದ್ದನ್ನು ಬರೆದುಕೊಂಡು ಹೋದರೆ ಅದನ್ನು ಹೇಗೆ ಪರಿಗಣಿಸುತ್ತಾರೆ.
ಸುಳ್ಳು ದೂರು :
- ವೈ ಎನ್ ಹೊಸಕೋಟೆ ಗ್ರಾಮದಲ್ಲಿ ಕೂಲಿಮಾಡಿಕೊಂಡು ಜೀವನಸಾಗಿಸುತ್ತೇವೆ – ಎಲ್ಲಿ ಕೂಲಿ ಮಾಡುತ್ತಾರೆ ಇವರ ಕೆಲಸ ಏನು ಮಾಡುತ್ತಾರೆ ಎನ್ನುವುದು ವೈ ಎನ್ ಹೊಸಕೋಟೆಯ ಜನತೆ ಗೊತ್ತು ಜೊತೆಗೆ ಪೋಲೀಸರಿಗೂ ಇವರ ಆರ್ಥಿಕ ಮೂಲ ಯಾವುದು ಎಂಬ ಮಾಹಿತಿ ಇದೆ ಇವರಿದ ಬಾದಿತರು ಬಹಳಷ್ಟು ಮಂದಿ ಸುತ್ತ- ಮುತ್ತ ಲ ಹಳ್ಳಿಗಳಲ್ಲಿ ಇದ್ದಾರೆ. ಇವರ ಕಸಬು ಏನು ಎಂಬುದು ತಿಳಿದಿಲ್ಲ ಎಂದರೆ ಗುಪ್ತಚರ ಇಲಾಖೆಯ ವೈಫಲ್ಯ ಅಲ್ಲವಾ….
- 2018 ರಲ್ಲಿ ರೇಷ್ಮೆ ಶೆಡ್ ನಿರ್ಮಿಸಲಾಗಿದೆ, ನಾವು ಶೆಡ್ ನಿರ್ಮಿಸುವ ವೇಳೆ ಡಾನ್ ಸೀನ ನಿವೇಶವನ್ನೇ ಖರೀದಿಸಿರುವುದಿಲ್ಲ.ಆದರೆ ಶೆಡ್ ನಿರ್ಮಿಸುವ ವೇಳೆ ಕಿಟಕಿ ಮುಚ್ಚಲು ಹೇಳಿದ್ದೆವು ಎಂದು ಉಲ್ಲೇಖಿಸಿದ್ದಾರೆ.
- ಕಿಟಕಿ ಮುಚ್ಚ ಬೇಕು ಎನ್ನುವುದು ಸಿವಿಲ್ ವಿಷಯ ಪೋಲೀಸರ ವ್ಯಾಪ್ತಿಗೆ ಬರಲ್ಲ.
- ದೂರಿನಲ್ಲಿ ಪ್ರಮುಖವಾಗಿ