-
ನಾನು ರೈತ ಮಗ ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಅವಕಾಶ ನೀಡುವುದಿಲ್ಲ- ಶಾಸಕ ವೆಂಕಟರಮಣಪ್ಪ
-
ಶೇಂಗಾದಲ್ಲಿ 50% ವೆಸ್ಟ್ ಇದ್ದು. ಹಾಗೂ ಮಾರುಕಟ್ಟೆ ಸಿಗುವ ಬೆಲೆಗಿಂತಲೂ ಹೆಚ್ಚಿನದ್ದಾಗಿದೆ.
-
ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ 6500 ರೂ ಗೆ ಸಿಗುತ್ತದೆ ಸರ್ಕಾರ ದ ಸಬ್ಸಿಡಿ ಧರ 6800 ರೂ ಗಳು ಆಗುತ್ತದೆ,
-
ರೈತರಿಗೆ ಪಾವಗಡ ಕೃಷಿ ಇಲಾಖೆಯಿಂದ ದೋಖಾ
ಪಾವಗಡ : ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಬಾರದು. ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮುನ್ನ ಬಿತ್ತನೆ ಬೀಜ ಪರೀಕ್ಷಿಸಿ ಮಾಡಬೇಕು.
ಒಂದು ವೇಳೆ ಕಳಪೆಯಾಗಿದ್ದರೆ ಅವುಗಳನ್ನು ತಿರಸ್ಕರಿಸಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬ ನಿಯಮವಿದ್ದರೂ ನೀವು ಯಾಕೆ ಪರೀಕ್ಷಿಸಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿ ವಿಜಯಮೂರ್ತಿಯವರನ್ನು ತರಾಟೆಗೆ ತೆಗೆದುಕೊಂಡರು
ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆ ಆವರಣದಲ್ಲಿ ಇಂದು ಶೇಂಗಾ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರಾದ ವೆಂಕಟರಮಣಪ್ಪ ನವರು ಶೇಂಗಾವನ್ನು ಕೆ-6 ಮತ್ತು tmv -2 ಮಾದರಿ ಶೇಂಗಾವನ್ನು ಪರಿಶೀಲನೆ ಮಾಡಿ ನಾನು ಒಬ್ಬ ರೈತನ ಮಗನಾಗಿ ಇತರಹದ ಶೇಂಗಾವನ್ನು ನಾನು ವಿತರಣೆ ಮಾಡುವುದಿಲ್ಲ, ಈ ಶೇಂಗಾದಲ್ಲಿ 50% ವೆಸ್ಟ್ ಇದ್ದು. ಹಾಗೂ ಮಾರುಕಟ್ಟೆ ಸಿಗುವ ಬೆಲೆಗಿಂತಲೂ ಹೆಚ್ಚಿನ ಬೆಲೆಯಾಗಿದ್ದು.ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ 6500 ರೂ ಗೆ ಸಿಗುತ್ತದೆ ಸರ್ಕಾರ ವತಿಯಿಂದ ಬಂದ ಸಬ್ಸಿಡಿಯಿಂದಲೂ 6800 ರೂ ಗಳು ಆಗುತ್ತದೆ ಈತರಹದ ಶೇಂಗಾವನ್ನು ನಾನು ವಿತರಣೆ ಮಾಡುವುದಿಲ್ಲ ಅಂತ ಕೃಷಿ ಅಧಿಕಾರಿಗಳಿಗೆ ತಿಳಿಸಿ ಈ ಶೇಂಗಾವನ್ನು ವಾಪಸ್ಸು ಕಳಿಸುವಂತೆ ತಿಳಿಸಿದರು
ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ನರಸಿಂಹ ರೆಡ್ಡಿ. ಕೃಷ್ಣ ರಾವ್. ಹಾಗೂ ಪದಾಧಿಕಾರಿಗಳು ಪುರಸಭಾ ಸದಸ್ಯರಾದ ಬಾಲ ಸುಬ್ರಹ್ಮಣ್ಯಂ. ರವಿ ಸುದೇಶ್ ಬಾಬು ರಾಜೇಶ್ ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಶಿವಮೂರ್ತಿ ನಾಗಭೂಷಣ್, ರಮೇಶ್ ರೈತ ಸಂಘದ ಪದಾಧಿಕಾರಿಗಳು ರೈತರು ಕೃಷಿ ಇಲಾಖೆ ಸಿಬ್ಬಂದಿ ಹಾಜರಿದ್ದರು
ವರದಿ ಬುಲೆಟ್ ವೀರ ಸೇನ ಯಾದವ್