a83e695c bda6 4dc8 935f cbae4b115def

ಮನೆಯಿಂದ ಹೊರಬಂದರೆ ದಂಡ ಬೀಳತ್ತೆ ಹುಷಾರ್..!

DISTRICT NEWS ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಮೇ ೨: ನಗರದಲ್ಲಿ ಲಾಕ್ಡೌನ್ ಉಲ್ಲಂಘಿಸಿ ವಿನಾಕಾರಣ ಅಡ್ಡಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಇಷ್ಟು ದಿನ ಬಾಯಿ ಮಾತಿನಲ್ಲಿ ಹೇಳಿ ಸಾಕಾಯಿತು, ಲಾಠಿ ರುಚಿ ಯೂ ತೋರಿಸಿದ್ದಾಯಿತು, ಆದರೂ ಜನ ಅನಾವಶ್ಯಕವಾಗಿ ಓಡಾಡುತ್ತಿರುವ ಕಾರಣ ದಂಡ ವಿಧಿಸುವಕ್ರಮವನ್ನು ಜಾರಿಗೆ ತರಲಾಗಿದೆ ಎಂದು ನೋಡಲ್ ಅಧಿಕಾರಿ ಭಾಸ್ಕರ್ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆ ನಗರಸಭೆ ಅಧಿಕಾರಿಗಳು ನಗರದಲ್ಲಿ ದಂಡ ವಿಧಿಸುವ ಮೂಲಕ ಜನ ಹೊರಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಶುಕ್ರವಾರ ಶನವಾರ ಎರಡು ದಿನ ಸೇರಿ ಒಟ್ಟು ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ಚಿಕ್ಕಬ ಳ್ಳಾಪುರ ನಗರದಲ್ಲಿ ವರದಿಯಾಗಿದೆ. ನಗರದಾದ್ಯಂತ ಲಾಕ್ಡೌನ್, ಸೀಲ್ಡೌನ್ ನಡುವೆಯೂ ಅನಾವಶ್ಯಕವಾಗಿ ರಸ್ತೆಗಿಳಿ ಯುವ ಸಾರ್ವಜನಕರಿಗೆ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ.

ಜನ ಸುಖಾಸುಮ್ಮನೆ ಅಡ್ಡಾಡಿದರೆ, ಮನೆಯಿಂದ ಹೊರಬಂದರೆ ಸಾಕು 100 ರೂಪಾಯಿ ದಂಡ ವಿಧಿಸಲಾಗುತ್ತಿದೆ. ನಗರಸಭೆ ಅಧಿಕಾರಿಗಳು ತಂಡವನ್ನು ಮಾಡಿಕೊಂಡು ನಗರದ ನಾನಾ ಕಡೆ ತೆರಳಿ, ಮನೆಯಿಂದ ಹೊರ ಬಂದು ಬೇಕಾಬಿಟ್ಟಿ ತಿರುಗುತ್ತಿರುವ ಮಂದಿಗೆ ಹಾಗೂ ಕಸವನ್ನು ರಸ್ತೆಗೆ ಎಸೆಯುವವರಿಗೆ ಸಹ 100 ರೂ ದಂಡ ವಿಧಿಸೋ ಕೆಲಸ ಮಾಡ್ತಿದ್ದಾರೆ.ಈಗಾಗಲೇ ಚಿಕ್ಕಬಳ್ಳಾಪುರ ನಗರವನ್ನ ಸಂಪೂರ್ಣ ಸೀಲ್ಡೌನ್ ಸಹ ಮಾಡಲಾಗಿದೆ. ಈ ತಂಡ ಶುಕ್ರವಾರ ಶನಿವಾರ ಎರಡು ದಿನ ಒಟ್ಟು 5 ಸಾವಿರ ರೂಗಳನ್ನು ಡಂಡವಾಗಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಪೌರಾಯುಕ್ತ ಲೋಹಿತ್, ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್ ಸೇರಿದಂತೆ ಈ ಕಾರ್ಯಕ್ಕೆ ಸಾತ್ ನಡಿದ್ದಾರೆ.