4505d8c0 7760 43d3 a163 290a6ccf661e

ರಾಜ್ಯದಾದ್ಯಂತ ಎಣ್ಣೆ ಅಂಗಡಿ ಓಪನ್‌,ಷರತ್‌ ಅನ್ವಯ…!

Genaral STATE

ಬೆಂಗಳೂರು ಮೇ 2 :- ಲಾಕ್ ಡೌನ್‌ ನಿಂದ ಬಂದ್‌ ಆಗಿದ್ದ ಮದ್ಯದ ಅಂಗಡಿಗಳನ್ನು ತೆರೆಯಲು  ರಾಜ್ಯ ಸರ್ಕಾರ ಆದೇಶಿಸಿದೆ. ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ಸಾಧಕ- ಬಾದಕಗಳನ್ನು ಚರ್ಚಿಸಿ, ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ,

. ಕಂಟೇನ್ಮೆಂಟ್ ಝೋನ್ ಪ್ರದೇಶ ಹೊರತುಪಡಿಸಿ  ಬೇರೆ ಎಲ್ಲಾ ಪ್ರದೇಶಗಳಲ್ಲಿ  ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ರಾಜ್ಯ ಅಬಕಾರಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮದ್ಯ ಮಾರಾಟವನ್ನು ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾರಾಟಕ್ಕೆ ಅನುಮತಿ ನೀಡಲಾಗಿದೆ.ಕೇಂದ್ರದ ಮಾರ್ಗಸೂಚಿ ಪಾಲನೆ ಕಡ್ಡಾಯ:

ಸಾಮಾಜಿಕ ಅಂತರ ಪಾಲಿಸುವುದು ಹಾಗೂ ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಮದ್ಯವನ್ನು ಪಾರ್ಸಲ್ ಮೂಲಕ ಖರೀದಿಸುವುದಕ್ಕೆ ಮಾತ್ರ ಅನುಮತಿ ನೀಡಲಾಗಿದೆ.

ಮದ್ಯ ಮಾರಾಟಕ್ಕೆ ವಿಧಿಸಿರುವ ಷರತ್ತುಗಳು

* ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಘೋಷಿಸಿರುವ ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಮಾತ್ರವೇ ಸಿಎಲ್-2 ಮತ್ತು ಸಿಎಲ್ 11-ಸಿ(ಎಂಎಸ್ಐಎಲ್ ಮದ್ಯ ಮಳಿಗೆಗಳು)ಗಳನ್ನು ತೆರೆದು ಮದ್ಯ ಮಾರಾಟ ಮಾಡಲು ಹಾಗೂ ಕೆಎಸ್ ಬಿಸಿಎಲ್ ಡಿಪೋಗಳು ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.

*  ಒಂದು ಬಾರಿಗೆ ಕೇವಲ 5 ಜನ ಗ್ರಾಹಕರು ಮಾತ್ರ ಅಂಗಡಿ ಪ್ರವೇಶಿಸಲು ಅನುಮತಿ ,6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

* ಮದ್ಯ ಮಾರಾಟ ಮಾಡುವ  ಅಂಗಡಿ ಯಲ್ಲಿ ನೌಕರರು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸುವುದು ಕಡ್ಡಾಯ. ಸ್ಯಾನಿಟೈಸರ್ ಗಳನ್ನು ಬಳಸಬೇಕು.

* ಕೇವಲ ಸ್ಟಾಂಡ್ ಅಲೋನ್ ಸಿಎಂಲ್-2 ಹಾಗೂ ಸಿಎಲ್ 11-ಸಿ ಸನ್ನದುಗಳನ್ನು ಮಾತ್ರ ಕಾರ್ಯನಿರ್ವಹಿಸುವುದು. ಮಾಲ್ ಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಸದರಿ ಸನ್ನದುಗಳು ಇದ್ದಲ್ಲಿ ಈ ಅನುಮತಿ ಅನ್ವಯವಾಗುವುದಿಲ್ಲ

*  ಕೇಂದ್ರ ಸರ್ಕಾರದ ಮೇಲಿನ ನಿಮಯಗಳನ್ನು ಉಲ್ಲಂಘಿಸಿದ್ದಲ್ಲಿ ಮದ್ಯದ ಅಂಗಡಿಗಳಿಗೆ ನೀಡಿದ ಲೈಸೆನ್ಸ್ ರದ್ದುಪಡಿಸಲಾಗುವುದು..