ಕಾಂಟಿನೆಂಟಲ್ ನಿಂದ ಸುಸ್ಥಿರ ನೀರಿನ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಜಲ ಸಂರಕ್ಷಣೆಯ ಮೂಲಸೌಕರ್ಯ ಉದ್ಘಾಟನೆ
• ಈ ನೀರು ಸಂಗ್ರಹ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕಿರು ಜಲಾಶಯ, ನಾಲ್ಕು ಚೆಕ್ ಡ್ಯಾಂಗಳು ಮತ್ತು 500 ಗುಂಡಿಗಳಿದ್ದು ಅವು 28,000,000 ಲೀಟರ್ ನೀರು ಸಂಗ್ರಹಿಸುತ್ತವೆ
• ಈ ಚೆಕ್ ಡ್ಯಾಂ ಯೋಜನೆಯು ಬೃಹತ್ತಾದ ಇಂಟಿಗ್ರೇಟೆಡ್ ರೂರಲ್ ಡೆವಲಪ್ ಮೆಂಟ್ ಪ್ರೋಗ್ರಾಮ್ ಭಾಗವಾಗಿದ್ದು ಅದು ಆನೇಕಲ್ ತಾಲೂಕಿನಲ್ಲಿ ಜನವರಿ 2020ರಲ್ಲಿ ಪ್ರಾರಂಭವಾಯಿತು
• “ನೀರಿನ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿಯ ಕೇಂದ್ರವಾಗಿದೆ. ಸುಸ್ಥಿರತೆಯು ಕಾಂಟಿನೆಂಟಲ್ನಲ್ಲಿ ಆವಿಷ್ಕಾರದ ಪ್ರಮುಖ ಚಾಲಕಶಕ್ತಿ ಮತ್ತು ನಾವು ನೀರನ್ನು ಸಂಪನ್ಮೂಲವಾಗಿ ಸಂರಕ್ಷಿಸಲು ಬದ್ಧರಾಗಿದ್ದೇವೆ”- ಪ್ರಶಾಂತ್ ದೊರೆಸ್ವಾಮಿ, ಅಧ್ಯಕ್ಷ ಮತ್ತು ಸಿಇಒ, ಕಾಂಟಿನೆಂಟಲ್ ಇಂಡಿಯಾ
ಬೆಂಗಳೂರು, ಜುಲೈ 21, 2022: ಸುಸ್ಥಿರ ಬದ್ಧತೆ, ತಂತ್ರಜ್ಞಾನ ಕಂಪನಿ ಕಾಂಟಿನೆಂಟಲ್ ಇಂದು ಆನೇಕಲ್ ನಲ್ಲಿ ಪರ್ಲ್ ವ್ಯಾಲಿ ಜಲಾಶಯ ಮತ್ತು ನಾಲ್ಕು ಚೆಕ್ ಡ್ಯಾಂಗಳಿಗೆ ಚಾಲನೆ ನೀಡಿದೆ. ಇದು ಈ ಪ್ರದೇಶದ ನೀರಿನ ಕೊರತೆಯನ್ನು ಗಮನಾರ್ಹವಾಗಿ ನಿವಾರಿಸಲಿದೆ. 28,000,000 ಲೀಟರ್ಗಳಷ್ಟು ನೀರು ಸಂಗ್ರಹಿಸುವ ಅಂದಾಜು ಇರುವ ಇದು 2200 ಹೆಕ್ಟೇರ್ಗಳ ಪ್ರದೇಶದಲ್ಲಿ ನಿರ್ಮಿತವಾದ ಅತ್ಯಂತ ದೊಡ್ಡ ಪ್ರಮಾಣದ ಯೋಜನೆಯಾಗಿದ್ದು 10.5 ಚದರ ಕಿಲೋಮೀಟರ್ ಕ್ಯಾಚ್ ಮೆಂಟ್ ಪ್ರದೇಶ ಹೊಂದಿದೆ ಮತ್ತು 4046 ಹೆಕ್ಟೇರ್ಗಳ ಕಮ್ಯಾಂಡ್ ಪ್ರದೇಶ ಹೊಂದಿದೆ. ಯುನೈಟೆಡ್ ವೇ ಆಫ್ ಬೆಂಗಳೂರು ಈ ಯೋಜನೆಯ ಅನುಷ್ಠಾನ ಪಾಲುದಾರನಾಗಿದ್ದು ಪೂರ್ಣ ಹಣಕಾಸಿನ ನೆರವು ಕಾಂಟಿನೆಂಟಲ್ ನೀಡಿದೆ.
ಭಾಗವಹಿಸಿದ್ದ ಗಣ್ಯರಲ್ಲಿ ವಣಕನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಶ್ರೀ ಆರ್.ಶ್ರೀನಿವಾಸ್, ಬೆಂಗಳೂರು ಗ್ರಾಮೀಣ ಜಿಲ್ಲೆಯ ಸಿಇಒ ಶ್ರೀ ಸಂಗಪ್ಪ,
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಟಿನೆಂಟಲ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಪ್ರಶಾಂತ್ ದೊರೆಸ್ವಾಮಿ, “ನೀರು ಅತ್ಯುತ್ತಮ ಸಂಪನ್ಮೂಲ ಮತ್ತು ಜಲ ಸಂಪನ್ಮೂಲವು ಸುಸ್ಥಿರ ಅಭಿವೃದ್ಧಿಯ ಕೇಂದ್ರದಲ್ಲಿದೆ. ಸುಸ್ಥಿರರೆತು ಕಾಂಟಿನೆಂಟಲ್ನಲ್ಲಿ ಆವಿಷ್ಕಾರ ಪ್ರಮುಖ ಚಾಲಕಶಕ್ತಿಯಾಗಿದೆ. ನಾವು ನೀರನ್ನು ಒಂದು ಸಂಪನ್ಮೂಲವಾಗಿ ರಕ್ಷಿಸಲು ಬದ್ಧರಾಗಿದ್ದೇವೆ, ಅದು ನಮ್ಮ ಘಟಕಗಳ ಕಾರ್ಯಾಚರಣೆಯಾಗಿರಲಿ, ಬಳಕೆ ಕಡಿಮೆ ಮಾಡುವ, ಮರುಬಳಕೆ ಮಾಡುವ ಮತ್ತು ಸಮುದಾಯದ ಅಗತ್ಯಗಳಿಗೆ ಇಂತಹ ಯೋಜನೆಗಳಿಂದ ಬೆಂಬಲಿಸುವುದಾಗಿರುತ್ತದೆ. ನೀರಿನ ಸಂರಕ್ಷಣೆಯು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಮತ್ತು ಆರೋಗ್ಯಕರ ಹಾಗೂ ಸುಸ್ಥಿರ ಇಕೊಸಿಸ್ಟಂಗಳನ್ನು ಸೃಷ್ಟಿಸುವ ಅತ್ಯಂತ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಇದರ ಗುಣಕದ ಪರಿಣಾಮ ಅದ್ಭುತವಾಗಿದೆ. ನಾವು ಸಮುದಾಯಕ್ಕೆ ಈ ಯೋಜನೆ ಅನುಷ್ಠಾನಗೊಳಿಸಲು ಬಹಳ ಸಂತೋಷ ಹೊಂದಿದ್ದೇವೆ” ಎಂದರು.
ಈ ಚೆಕ್ ಡ್ಯಾಮ್ ಯೋಜನೆ ಏಳು ಪ್ರಾಥಮಿಕ ಉದ್ದೇಶಗಳನ್ನು ಹೊಂದಿದೆ:
- ನೀರು ಹರಿದು ಹೋಗುವುದನ್ನು ತಡೆಯುವುದು ಮತ್ತು ಪ್ರವಾಹ ನಿಯಂತ್ರಣ
- ಮಳೆನೀರಿನ ಹೆಚ್ಚು ಸಂಗ್ರಹ ಮತ್ತು ಭೂಮಿಯ ಮೇಲಿನ ಸಂಗ್ರಹ
- ಸಸ್ಯ ಮತ್ತು ಪ್ರಾಣಿಗಳಿಗೆ ನೀರು ಲಭ್ಯವಾಗುವಂತೆ ಮಾಡುವುದು ಮತ್ತು ಅವುಗಳಿಗೆ ಸುರಕ್ಷಿತ ಆವಾಸಸ್ಥಾನವಾಗಿಸುವುದು
- ಸುರಕ್ಷಿತ ಆವಾಸಸ್ಥಾನದ ಒಳಗಡೆ ಪ್ರಾಣಿಗಳಿಗೆ ನೀರು ಲಭ್ಯವಾಗುವಂತೆ ಮಾಡಿ ಮಾನವ-ಪ್ರಾಣಿ ಸಂಘರ್ಷವನ್ನು ನಿಯಂತ್ರಿಸುವುದು ಮತ್ತು ಅವುಗಳ ಅಲೆದಾಟ ತಪ್ಪಿಸುವುದು
- ಕಣಿವೆಯಲ್ಲಿ ಅಂತರ್ಜಲದ ರೀಚಾರ್ಜ್ ದೃಢೀಕರಿಸುವುದು
- ನೈಸರ್ಗಿಕ, ದೇಶೀಯ ಸಸ್ಯವರ್ಗ ಮತ್ತು ಜೀವ ವೈವಿಧ್ಯತೆಯ ಹೆಚ್ಚಳ
- ಮಾನವರು, ಪ್ರಾಣಿ ಮತ್ತು ಸಸ್ಯ ವರ್ಗ ಬೆಳೆಯುವಂತೆ ಪರ್ಲ್ ವ್ಯಾಲಿಯ ಇಕೊಸಿಸ್ಟಂ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು
ಕಾಂಟಿನೆಂಟಲ್ನ ಸುಸ್ಥಿರತೆಯ ಗುರಿಗಳು
ಕಾಂಟಿನೆAಟಲ್ ಇತ್ತೀಚೆಗೆ ನೆಟ್|ಝೀರೋ|ನೌ ಕಾರ್ಯಕ್ರಮ ಪ್ರಾರಂಭಿಸಿದ್ದು ಅದು ಗ್ರಾಹಕರಿಗೆ ಮಹತ್ವಾಕಾಂಕ್ಷೆಯ ಸುಸ್ಥಿರತೆಯ ಗುರಿಗಳೊಂದಿಗೆ ಅವರಿಗೆ ಸಂಬಂಧಿಸಿದ ಉದ್ಯಮಗಳ ಕಾರ್ಬನ್ ಬ್ಯಾಕ್ ಬ್ಯಾಕ್ ಅನ್ನು ತಟಸ್ಥಗೊಳಿಸುವ ಗುರಿ ಹೊಂದಿದೆ. ಸುಸ್ಥಿರತೆಯು ಕಂಪನಿಯ ಕಾರ್ಪೊರೇಟ್ ಕಾರ್ಯತಂತ್ರದಲ್ಲಿ ಪ್ರಮುಖ ಚಾಲಕಶಕ್ತಿಯಾಗಿ ಕೆಲಸ ಮಾಡುತ್ತದೆ: ಸಂಸ್ಥೆಯ ಇಡೀ ಮೌಲ್ಯ ಸರಣಿಯಲ್ಲಿ ಇಂಗಾಲದ ತಟಸ್ಥತೆ, ಹೊರಸೂಸುವಿಕೆ ಮುಕ್ತ ಮೊಬಿಲಿಟಿ ಮತ್ತು ಕೈಗಾರಿಕೆ, ಆವರ್ತ ಅರ್ಥವ್ಯವಸ್ಥೆ ಮತ್ತು ಜವಾಬ್ದಾರಿಯುತ ಮೌಲ್ಯ ಸರಣಿಗಳನ್ನು ಹೊಂದಿದೆ. ಕಂಪನಿಯು 2050ರ ವೇಳೆಗೆ ಇದನ್ನು ಸಾಧಿಸುವ ಗುರಿ ಹೊಂದಿದೆ.
ಕಾಂಟಿನೆಂಟಲ್ ಇಂಡಿಯಾ ತನ್ನ ಸಿಎಸ್ಆರ್ ಅಂಗ ಕನ್ಸೈನ್ಸ್.ಇನ್ ಮೂಲಕ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳನ್ನು ಕೈಗೊಳ್ಳುತ್ತದೆ, ಕಾಂಟಿನೆಂಟಲ್ ಬೆಂಗಳೂರಿನ ಆನೇಕಲ್ ತಾಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದು ಗ್ರಾಮಗಳಲ್ಲಿ ಸುಸ್ಥಿರತೆಯ ಉಪಕ್ರಮಗಳನ್ನು ಅನುಷ್ಠಾನಗೊಳಿಸಿತು. ಇದರಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ, ಸುಸ್ಥಿರ ಕೃಷಿಯ ರೂಢಿಗಳು, ತಾರಸಿಯ ಮೇಲಿನ ಮಳೆನೀರು ಕೊಯಿಲು, ಉದ್ಯಮಶೀಲತೆಯ ಅವಕಾಶಗಳು ಮತ್ತು ಮಹಿಳೆಯರ ಜೀವನೋಪಾಯದ ಬೆಂಬಲಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಪೂರಕವಾಗಿವೆ.
ಕನ್ಸೈನ್ಸ್ ನಲ್ಲಿ ತನ್ನ ಇತರೆ ಉಪಕ್ರಮಗಳಲ್ಲಿ ಕಂಪನಿಯು ತನ್ನ 150ನೇ ವಾರ್ಷಿಕೋತ್ಸವದ ಅಂಗವಾಗಿ ಭಾರತದಾದ್ಯಂತ 150,000 ಮರಗಳನ್ನು ನೆಟ್ಟಿದೆ. ಮತ್ತೊಂದು ಮಹತ್ತರ ಉಪಕ್ರಮಗಳಲ್ಲಿ ವಿಮೆನ್ ಫಾರ್ ಮ್ಯಾನುಫ್ಯಾಕ್ಚರಿಂಗ್ ಸೇರಿದೆ. ಈ ಕಾರ್ಯಕ್ರಮವು ದುರ್ಬಲ ವರ್ಗದ ಮಹಿಳೆಯರಿಗೆ ಉತ್ಪಾದನೆಯಲ್ಲಿ ಉದ್ಯೋಗ ಕೈಗೊಳ್ಳಲು ರಚನಾತ್ಮಕ ಕೌಶಲ್ಯಾಭಿವೃದ್ಧಿ ಹಾಗೂ ತರಬೇತಿ ಕೋರ್ಸ್ ಗಳ ಮೂಲಕ ನೆರವಾಗುತ್ತದೆ.
ಕಾಂಟಿನೆಂಟಲ್ ಜನರು ಮತ್ತು ಅವರ ಉತ್ಪನ್ನಗಳ ಸುಸ್ಥಿರ ಹಾಗೂ ಸಂಪರ್ಕಿತ ಮೊಬಿಲಿಟಿಗೆ ಮುಂಚೂಣಿಯ ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುತ್ತದೆ. 1871ರಲ್ಲಿ ಸ್ಥಾಪನೆಯಾದ ಈ ತಂತ್ರಜ್ಞಾನ ಕಂಪನಿಯು ವಾಹನಗಳು, ಯಂತ್ರಗಳು, ಟ್ರಾಫಿಕ್ ಮತ್ತು ಸಾರಿಗೆಗೆ ಸುರಕ್ಷಿತ, ದಕ್ಷ, ಜಾಣ್ಮೆಯ ಮತ್ತು ಕೈಗೆಟುಕುವ ಪರಿಹಾರಗಳನ್ನು ಒದಗಿಸುತ್ತದೆ. 2021ರಲ್ಲಿ ಕಾಂಟಿನೆಂಟಲ್ 33.8 ಬಿಲಿಯನ್ ಯೂರೋ ಮಾರಾಟ ಉತ್ಪಾದಿಸಿದೆ ಮತ್ತು ಪ್ರಸ್ತುತ 58 ದೇಶಗಳಲ್ಲಿನ 190,000 ಜನರು ಮತ್ತು ಮಾರುಕಟ್ಟೆಗಳಲ್ಲಿ ಉದ್ಯೋಗಿಗಳನ್ನು ಹೊಂದಿದೆ. ಅಕ್ಟೋಬರ್ 8, 2021ರಲ್ಲಿ ಕಂಪನಿಯು ತನ್ನ 150ನೇ ವಾರ್ಷಿಕೋತ್ಸವ ಆಚರಿಸಿದೆ.
- ಕಟಿನೆಂಟಲ್ ಭಾರತದಲ್ಲಿ 50 ವರ್ಷಗಳಿಂದಲೂ ತಂತ್ರಜ್ಞಾನ ಸಹಯೋಗಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ (ಕಾಂಟಿನೆಂಟಲ್ ಟೈರ್ಸ್ 1974ರಿಂದ) ಮತ್ತು ತನ್ನ ಹಲವು ಉದ್ಯಮಗಳ ಜಂಟಿ ಸಹಯೋಗಗಳನ್ನು ಹೊಂದಿದೆ. ಇಂದು, ಭಾರತದಾದ್ಯಂತ ಟೈಯರ್ 1 ಆಟೊಮೊಟಿವ್ ಪೂರೈಕೆದಾರ, ಟೈರ್ ಉತ್ಪಾದಕ ಮತ್ತು ಕೈಗಾರಿಕಾ ಪಾಲುದಾರನಾಗಿದ್ದು 13 ಪ್ರದೇಶಗಳಲ್ಲಿ 8000 ಉದ್ಯೋಗಿಗಳನ್ನು ಹೊಂದಿದ್ದು ಭಾರತದ ಮಾರುಕಟ್ಟೆಗೆ ಪೂರೈಸಲು ಏಳು ಘಟಕಗಳನ್ನು ಹೊಂದಿದೆ ಮತ್ತು ಕಾಂಟಿನೆAಟಲ್ನ ಜಾಗತಿಕ ಆರ್ ಅಂಡ್ ಡಿ ಚಟುವಟಿಕೆಗಳಿಗೆ ಬೆಂಬಲಿಸುವ ಟೆಕ್ನಿಕಲ್ ಸೆಂಟರ್ ಹೊಂದಿದೆ.