ವಿದ್ಯಾರ್ಥಿಗಳು ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು. ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ರಾಜೇಂದ್ರ..
ಪಾವಗಡ.. ಇಂದು ಪಟ್ಟಣದ ಶನಿಮಹಾತ್ಮ ದೇವಾಲಯದ ಹಿಂಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಬ್ಯಾಂಕ್ ಆಫ್ ಬರೋಡ ಸಂಸ್ಥಾಪನಾ ದಿನದ ಅಂಗವಾಗಿ ಪಾವಗಡ ಚ್ರಾಂಚ್ ನ ವತಿಯಿಂದ ಶನಿಮಹಾತ್ಮ ದೇವಾಲಯದ ಹಿಂಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಪ್ರೊಜೆಕ್ಟರ್ ಖರೀದಿಗಾಗಿ ರೂ.10000/- ರೂಗಳ ಡಿ ಡಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ರಾಜೇಂದ್ರ ಮಾತನಾಡಿ, ಶಾಲೆಗೆ ವಿತರಿಸಿರುವ ಹಣದಿಂದ ಪ್ರೊಜೆಕ್ಟರ್ ಕೊಂಡು ಅದರ ಸದುಪಯೋಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಶಾಲಾ ಸಿಬ್ಬಂದಿ ಹಾಗೂ ಮಕ್ಕಳಿಗೆ ತಿಳಿಸಿದರು ತಿಳಿಸಿದರು.
ಮಕ್ಕಳು ಬಾಲ್ಯ ದಿಂದಲೇ ಉಳಿತಾಯ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು, ಎಲ್ಲರೂ ಬ್ಯಾಂಕ್ ಖಾತೆಯನ್ನು ಹೊಂದಬೇಕು ಎಂದು ತಿಳಿಸಿದರು.ಹಾಗೂ ಬ್ಯಾಂಕ್ ಆಫ್ ಬರೋಡವು 115 ವರ್ಷಗಳನ್ನು ಪೂರೈಸಿದ್ದು, ಗ್ರಾಹಕರ ವಿಶ್ವಾಸನೀಯ ಬ್ಯಾಂಕ್ ಆಗಿದೆ..ನಮ್ಮ ಬ್ಯಾಂಕ್ ಉತ್ತಮವಾದ ಸೇವೆಯನ್ನು ಗ್ರಾಹರಿಗೆ ಒದಗಿಸುತ್ತಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕರಾದ ಮಾರುತೇಶರವರು ಮಾತನಾಡಿ ನಮ್ಮ ಸರ್ಕಾರಿ ಶಾಲೆಗಳಿಗೆ ಈ ರೀತಿ ಪ್ರೋತ್ಸಾಹ ನೀಡಿದರೆ ಯಾವ ಖಾಸಗೀ ಶಾಲೆಗಳಿಗೂ ಸರಿಸಾಟಿಯಾಗುವಂತೆ ಅಭಿವೃದ್ಧಿ ಪಡಿಸಬಹುದು ಎಂದು ತಿಳಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಮುಖಾಂತರ ಬೋಧನೆ ಮಾಡುವುದು ಅತ್ಯವಶ್ಯಕವಾಗಿದ್ದು, ಎಲ್ಲಾ ರಂಗದವರು ಶಿಕ್ಷಣ ಕ್ಷೇತ್ರಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಶಿಕ್ಷಕಿ ಶೋಭರವರು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಹನುಮಂತರಾಯ, ಬ್ಯಾಂಕ್ ಸಿಬ್ಬಂದಿ ಕೌಶಿಕ್, ಸಾಧಿಕ್ ಇತರರು ಹಾಜರಿದ್ದರು.
ವರದಿ: ಶ್ರೀನಿವಾಸಲು ಎ