IMG 20220720 WA0013

ಮಧುಗಿರಿ:ಶಾಸಕರ ಅಧ್ಯಕ್ಷತೆಯಲ್ಲಿ ಕೆ ಡಿ ಪಿ ಸಭೆ ……

DISTRICT NEWS ತುಮಕೂರು

ಶಾಸಕರ ಅಧ್ಯಕ್ಷತೆಯಲ್ಲಿ ಕೆ ಡಿ ಪಿ ಸಭೆ …….

ಮಧುಗಿರಿ ತಾಲೂಕಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ದಿನಾಂಕ 20 .7.2022 ರಂದು 2022 23ನೇ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶಾಸಕರಾದ ಎಂವಿ ವೀರಭದ್ರಯ್ಯನವರು ವಹಿಸಿಕೊಂಡಿದ್ದರು ಸಭೆಯಲ್ಲಿ ತಾಲೂಕು ಪಂಚಾಯಿತಿ ಇ. ಓ ಬಿಎಸ್ ಲಕ್ಷ್ಮಣ್ ಆಡಳಿತ ಅಧಿಕಾರಿ ಎಸ್ ಆರ್ ಗಂಗಯ್ಯ ಜಿಲ್ಲಾ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಬಿಎನ್ ನಾಗೇಶ್ ಬಾಬು ಗ್ರೇಡ್ 2 ತಹಶೀಲ್ದಾರಾದ ತಿಪ್ಪೇಸ್ವಾಮಿ ಸರ್ಕಾರದ ನಾಮಿನಿ ಸದಸ್ಯರುಗಳಾದ ನಾಗರಾಜಪ್ಪ ರತ್ನಮ್ಮ ವೆಂಕಟೇಶ್ ರಂಗನಾಥ್ ಮಲ್ಲಿಕಾರ್ಜುನಯ್ಯ ಇಮ್ತಾಜ್ ಭಾಷ್ ಎಲ್ಲಾ ಇಲಾಖೆಗಳು ಹಾಜರಿದ್ದರು ಸಭೆಯನ್ನು ಉದ್ದೇಶಿಸಿ ಶಾಸಕರು ಮಾತನಾಡುತ್ತಾ ಯಾವ ಯಾವ ಇಲಾಖೆಗಳಲ್ಲಿ ಕೆಲಸ ಕಾರ್ಯಗಳು ಈಗಾಗಲೇ ಕುಂಠಿತಗೊಂಡಿದೆ ಎಂಬುದನ್ನು ತಿಳಿಸಬೇಕು ಸರ್ಕಾರದಿಂದ ಅನುದಾನ ಬಂದು ಕಾಮಗಾರಿಗಳನ್ನು ಆರಂಭ ಮಾಡದೇ ಇರುವುದು ಗಮನಕ್ಕೆ ಬಂದಿರುತ್ತದೆಅವುಗಳನ್ನು ಆದಷ್ಟು ಬೇಗನೆ ಪ್ರಾರಂಭ ಮಾಡಬೇಕು ಮತ್ತು ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆಗೆ ಕರೆದರೆ ನಾವು ಸಿದ್ದರಿದ್ದೇವೆ ಮುಂದಿನ ತಿಂಗಳು ಅವುಗಳನ್ನು ಉದ್ಘಾಟನೆ ಮಾಡಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಳ್ಳಬೇಕೆಂದು ತಿಳಿಸಿದರು

ಸಭೆಯಲ್ಲಿ ಮುಂದುವರಿಸುತ್ತಾ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕೃಷಿ ಸಹಾಯಕ ನಿರ್ದೇಶಕರನ್ನು ರೈತರಿಗೆ ರಸಗೊಬ್ಬರ ಅಗತ್ಯ ದಾಸ್ತಾನು ಇದೆ ಅದರಲ್ಲಿ ಯಾವ್ಯಾವ ತರ ರಸಗೊಬ್ಬರ ತಾವು ದಾಸ್ತಾನು ಮಾಡಿದ್ದೀರಾ ಎಂದು ಕೇಳಿದಾಗ ಕೃಷಿ ಸಹಾಯಕ ನಿರ್ದೇಶಕರು ಕಾಂಪ್ಲೆಕ್ಸ್ ಡಿಎಪಿ ಸದ್ಯಕ್ಕೆ ದಾಸ್ತಾನು ಇದೆ ಎಂದು ತಿಳಿಸಿದರು ಶಾಸಕರ ಮರು ಪ್ರಶ್ನೆ ತಾವು ಯಾಕೆ ಯೂರಿಯಾದಾಸ್ತಾನು ಮಾಡಿಲ್ಲ ಎಂದು ಕೇಳಿದಾಗ ರೈತರು ಬಿತ್ತನೆ ಮಾಡುವ ಆರಂಭದಲ್ಲಿ ಯೂರಿಯಾ ಅವಶ್ಯಕತೆ ಇರುವುದಿಲ್ಲ ಬಿತ್ತನೆ ಮಾಡಿದ ತದನಂತರ ಬೇಕಾಗುತ್ತದೆ ಅದಕ್ಕೋಸ್ಕರ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಈಗಾಗಲೇ ಅಗತ್ಯ ಯೂರಿಯವನ್ನು ದಾಸ್ತಾನು ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು ಚರ್ಚೆ ಮುಂದುವರಿಸುತಾಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆಯಲ್ಲಿ ಶುದ್ಧ ನೀರಿನ ಘಟಕಗಳುಪಾರಂಭಿಸಲು ಸರ್ಕಾರದಿಂದ ಹಣ ಮಂಜೂರು ಮಾಡಿಸಿದರು ಸಹ ಯಾಕೆ ಇದುವರೆಗೂ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂಬ ಪ್ರಶ್ನೆಗೆ ಎ ಇ,ಇ. ಉತ್ತರಿಸಿ ಕೆಲವು ಕಡೆ ಈಗಾಗಲೇ ಕಾಮಗಾರಿ ಮುಗಿದಿದೆ ಕೆಲವು ಕಡೆ ಎಲೆಕ್ಟ್ರಿಷಿಯನ್ ಬಾಕಿ ಇದೆಕೆಲವು ಕಡೆ ಟೈಲ್ಸ್ ಹಾಕುವುದು ಇವುಗಳನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ನೀರೊದಿಗಿಸಲು ಅನುಕೂಲ ಮಾಡಿಕೊಡಲಾಗುವುದು ಇದಕ್ಕೆ ಧ್ವನಿಗೂಡಿಸಿದ ನಾಮಿನಿ ಸದಸ್ಯರಾದ ವೆಂಕಟೇಶ್ ಅವರು ಮಾತನಾಡುತ್ತ ಕೋಡಿಗೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದಲ್ಲಿ ಈಗಾಗಲೇ ಕೊಳವೆಬಾವಿ ಕೊರೆದರು ಸಹ ಅದಕ್ಕೆ ಮೋಟಾರ್ ಪಂಪ್ ಅಳವಡಿಸಿರೋದಿಲ್ಲ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದಾಗ ಅವರುಗಳು ನಮ್ಮಲ್ಲಿ ಲಭ್ಯವಿಲ್ಲ ಎಂಬ ಉತ್ತರವನ್ನು ನೀಡಿರುತ್ತಾರೆ ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ನೀರು ಅವಶ್ಯಕತೆ ಇರುವುದರಿಂದ ಟ್ಯಾಂಕರನ ಮೂಲಕ ಸರಬರಾಜು ಮಾಡಲಾಗಿರುತ್ತದೆ ಇದಕ್ಕೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳನ್ನು ಈ ವಿಚಾರವಾಗಿ ಪ್ರಶ್ನಿಸಿ ಅತಿ ಶೀಘ್ರದಲ್ಲಿಯೇ ಆ ಗ್ರಾಮಕ್ಕೆ ನೀರೊದಿಗಿಸಿ ಕೊಡಬೇಕೆಂದು ತಾಕೀತು ಮಾಡಿದರು ಚರ್ಚೆ ಮುಂದುವರೆಯುತ್ತಾ ನಾಮಿನಿ ಸದಸ್ಯರು ಕಾರ್ಮಿಕ ಇಲಾಖೆಯ ಕರ್ತವ್ಯ ಲೋಪ ಬೇಜವಾಬ್ದಾರಿತನ ಇದ್ದು ಕಾಣುತ್ತದೆ ಎಂದು ಆಕ್ಷೇಪಣೆ ಮಾಡಿದಾಗ ನಾವು ಅಂತಹ ಬೇಜವಾಬ್ದಾರಿತನದಿಂದ ಕರ್ತವ್ಯ ಲೋಪ ಇರುವುದಿಲ್ಲ ಎಂದು ಕಾರ್ಮಿಕ ಇಲಾಖೆ ನಿರೀಕ್ಷಕರು ನುಡಿದಿರುತ್ತಾರೆ ಕಟ್ಟಡ ಕಾರ್ಮಿಕರಿಗೆ ಮಾತ್ರ ತಮ್ಮ ಇಲಾಖೆಯ ವತಿಯಿಂದ ಗುರುತಿನ ಚೀಟಿಗಳನ್ನು ನೀಡುತ್ತೀರಾ ಆದರೆ ಕೃಷಿ ಚಟುವಟಿಕೆಗಳಲ್ಲಿ ಮತ್ತು ಇನ್ನಿತರೆ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ನೀಡುತ್ತಿರೋದಿಲ್ಲ ಎಂದು ಆರೋಪಿಸಿದಾಗ ಇದಕ್ಕೆ ಉತ್ತರಿಸಿದ ಇಲಾಖೆ ನಿರೀಕ್ಷಕರು ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಉಲ್ಬಣಗೊಳ್ಳದಂತೆ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು

ಮುಂದುವರಿದ ಚರ್ಚೆ ಭಾಗ ನಾಮಿನಿ ಸದಸ್ಯರಾದ ನಾಗರಾಜಪ್ಪ ಮಾತನಾಡುತ್ತಾ ಎತ್ತಿನಹೊಳೆ ಯಿಂದ ದೊಡ್ಡೇರಿ ಹೋಬಳಿಗೆ ಕೆರೆಗಳಿಗೆ ನೀರಲಿಸಲು ಕೆಎಸ್ಆರ್ಟಿಸಿ ಡಿಪೋದಿಂದ ಪೈಪ್ ಲೈನ್ ಮುಖಾಂತರ ಕೆರೆಗಳಿಗೆ ನೀರ್ ಹರಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು ಇದಕ್ಕೆ ಉತ್ತರಿಸಿದ ಇಂಜಿನಿಯರ್ ಮುಖ್ಯ ನಾಲೆಗಳ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ ಆದ್ದರಿಂದ ಈಗಲೇ ಆ ಕೆಲಸ ಮಾಡಲು ಆಗುವುದಿಲ್ಲ ಮುಖ್ಯನಾಲೆಯ ಪೂರ್ಣಗೊಂಡ ನಂತರ ಉಪಕಾಲುವೆಗಳುನಿರ್ಮಾಣ ಮಾಡಲು ಇಲಾಖೆ ತಯಾರಿದೆ ಎಂದು ತಿಳಿಸಿದರು

ತೋಟಗಾರಿಕೆ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ನಾಗೇಶ್ ಬಾಬು ಮಾತನಾಡುತ್ತಾ ರೈತರಿಗೆ ನಮ್ಮ ಮದುಗಿರಿ ತಾಲೂಕಿನಲ್ಲಿ ಅತಿಹೆಚ್ಚಿನ ವಿಮೆ ಪರಿಹಾರ ರೈತರಿಗೆ ಸಿಗುತ್ತಿಲ್ಲ ಅದೇ ಪಕ್ಕದ ತಾಲೂಕಿನ ಪಾವಗಡ ರೈತರಿಗೆ 50 ಕೋಟಿ ಯಿಂದ 60 ಕೋಟಿಯವರೆಗೆ ಬೆಳೆ ಪರಿಹಾರ ಪ್ರತಿವರ್ಷ ದೊರೆಯುತ್ತಿದೆ ಆದ್ದರಿಂದ ಈ ಕೂಡಲೇ ತಾವುಗಳು ರೈತರಿಗೆ ವಿಮಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಬೇಕು ಮತ್ತು ಈ ವಿಚಾರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಪಹಣಿಯಲ್ಲಿನ ಬೆಳೆ ನಮೂದಿನ ಲೋಪ ದೋಷಗಳನ್ನು ಸರಿಪಡಿಸಿದರೆ ಬೆಳೆ ವಿಮೆ ಕಟ್ಟಲು ರೈತರಿಗೆ ಅನುಕೂಲವಾಗುತ್ತದೆ ಇದನ್ನು ತಾವುಗಳು ಆದಷ್ಟು ಬೇಗನೆ ಪಹಣಿಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ಕೊಡಬೇಕೆಂದು ಕೋರಿದರು ಶಿಕ್ಷಣ ಇಲಾಖೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಅನೇಕ ಕಡೆ ದುರಸ್ತಿಯಲ್ಲಿರುವ ಅತಿ ಹೆಚ್ಚು ಶಾಲಾ ಕಟ್ಟಡಗಳು ಇರುವುದರಿಂದಅವುಗಳನ್ನು ಆದಷ್ಟು ಬೇಗನೆ ದುರಸ್ತಿಗೊಳಿಸುವುದು ಇಲ್ಲವೋ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಿದರೆ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ತುಂಬಾ ಅನುಕೂಲಕರವಾಗಿರುತ್ತದೆ ಎಂದು ತಿಳಿಸಿದರು

ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಈ ವರ್ಷದಲ್ಲಿ ರೈತರಿಗೆ ಸಸಿಗಳು ಕೊಡುವುದರಲ್ಲಿ ಬೇಡಿಕೆ ಇದ್ದರೆ ಅದನ್ನು ತಾವುಗಳು ಶೀಘ್ರವೇ ಪರಿಹರಿಸಿ ರೈತರು ಕೇಳಿದಂತಹ ಸಸಿಗಳನ್ನು ಆದಷ್ಟು ಬೇಗ ಅವರಿಗೆ ನೀಡಲು ಅನುಕೂಲ ಮಾಡಿಕೊಡಬೇಕು ಇದಕ್ಕೆ ಉತ್ತರಿಸಿದ ಇಲಾಖೆ ಅಧಿಕಾರಿಯ ನಮ್ಮಲ್ಲಿ ಈಗಾಗಲೇ ಮಹಾಗಣಿ ರಕ್ತ ಚಂದನ ಬೇವು ಸಿಲ್ವರ್ ಮುಂತಾದ ಗಿಡಗಳು ರೈತರಿಗೆ ವಿತರಿಸಿದ್ದೇವೆ ಇನ್ನು ಈ ಸಸಿಗಳು ಹೆಚ್ಚಿನ ಬೇಡಿಕೆ ಇರುವುದರಿಂದ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದ್ದೇವೆ ಆದಷ್ಟು ಬೇಗ ಸಸಿಗಳನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು

ಸಭೆಯ ಮುಕ್ತಾಯ ಸಮಾರಂಭದಲ್ಲಿ ಇಲಾಖಾಧಿಕಾರಿಗಳು ಈ ಸಭೆಯಲ್ಲಿ ನಡೆದಂತಹ ಘಟನೆಗಳು ಲೋಪ ದೋಷಗಳು ಮುಂದಿನ ಸಭೆಯಲ್ಲಿ ನಾಮಿನಿ ಸದಸ್ಯರಾಗಲಿ ಬೇರೆ ರೈತರಾಗಲಿ ಸಮಸ್ಯೆಗಳು ಮುರಿಕಳಿಸಬಾರದು ಎಂದು ತಾಕೀತು ಮಾಡಿ ಸಭೆ ಮುಕ್ತಾಯಗೊಳಿಸಲಾಯಿತು

ವರದಿ ಲಕ್ಷ್ಮಿಪತಿ ಎಲ್ಕೂರ್