IMG 20220719 WA0015

ಪಾವಗಡ:72 ಗಂಟೆಗಳಲ್ಲಿ ಫಲಾನುಭವಿಗಳ ಪಿಂಚಣಿ ಸೇರಿದಂತೆ ಅಗತ್ಯ ಸೌಲಭ್ಯ ….!

DISTRICT NEWS ತುಮಕೂರು

ಹಲೋ ಕಂದಾಯ ಸಚಿವರೇ ಎಂದು ಕರೆ ಮಾಡಿದರೆ 72 ಗಂಟೆಗಳಲ್ಲಿ ಫಲಾನುಭವಿಗಳು ಪಿಂಚಣಿ ಸೇರಿದಂತೆ ಅಗತ್ಯ ಸೌಲಭ್ಯ ಪಡೆಯಬಹುದು. ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್

ಪಾವಗಡ : ತಾಲೂಕಿನಾದ್ಯಂತ ಹಲವಾರು ಸಮಸ್ಯೆಗಳಿದ್ದು, ಶೀಘ್ರವೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸಲಾಗುವುದೆಂದು, ಪಟ್ಟಣದ ತಹಶೀಲ್ದಾರ್ ಕಚೇರಿಯ ಹಲವಾರು ಭಾಗಗಳು ಶಿಥಿಲಗೊಂಡಿದ್ದು ಶೀಘ್ರವೇ ನೂತನ ತಹಶೀಲ್ದಾರ್ ಕಟ್ಟಡ ನಿರ್ಮಿಸುವಂತೆ ಸರ್ಕಾರಸಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ಮಂಗಳವಾಡದಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ತಾಲ್ಲೂಕಿನಲ್ಲಿ ಸ್ಮಶಾನ ಇಲ್ಲದ ಗ್ರಾಮಗಳ ಪಟ್ಟಿಯನ್ನು ಮಾಡಿಸಿ ಶೀಘ್ರವೇ ಸ್ಮಶಾನಕ್ಕೆ ನಿವೇಶನ ಮಂಜೂರು ಮಾಡಿಕೊಡಲಾಗುವುದು, ಸ್ಮಶಾನಕ್ಕೆ ಮಾಡುವುದಕ್ಕೆ ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ರೈತರಿಂದ ಜಮೀನು ಖರೀದಿಸಲಾಗುವುದು ಎಂದರು.

ಮಾಚರಾಜನ ಹಳ್ಳಿಯಲ್ಲಿ ಸ್ಮಶಾನಕ್ಕೆ ಭೂಮಿ ದಾನ ನೀಡಲು ಒಪ್ಪಿಗೆ ಪತ್ರ ನೀಡಲಾಗಿದೆ.
ಹಲೋ ಕಂದಾಯ ಸಚಿವರೇ ಎಂದು ಕರೆ ಮಾಡಿದರೆ 72 ಗಂಟೆಗಳಲ್ಲಿ ಫಲಾನುಭವಿಗಳು ಪಿಂಚಣಿ ಸೇರಿದಂತೆ ಅಗತ್ಯ ಸೌಲಭ್ಯ ಪಡೆಯಬಹುದು. ಈ ಸೌಕರ್ಯವನ್ನು ಜನತೆ ಉಪಯೋಗಿಸಿಕೊಳ್ಳಬೇಕು ಎಂದರು.
ಸಧ್ಯಇರುವ ಸಿಬ್ಬಂದಿ ಹೆಚ್ಚಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು . ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸುವ ಕಾರ್ಯ ನಿರಂತವಾಗಿ ಮಾಡಬೇಕು ಎಂದರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿ.ಡಿ.ಎಲ್.ಆರ್ ಸುಜಯ್ಕು ಮಾರ್, ತಹಶೀಲ್ದಾರ್ ವರದರಾಜು, ಶಿರಸ್ತೇದಾರ್ ಎನ್. ಮೂರ್ತಿ ಉಪಸ್ಥಿತರಿದ್ದರು.