IMG 20210112 WA0010

ಪಾವಗಡ: ಆಧಾರ್ ಜೋಡಣೆ ಇಲ್ಲದ ಮಾಶಾಸನ ರದ್ದು….!

DISTRICT NEWS ತುಮಕೂರು

ಆಧಾರ್ ಜೋಡಣೆ ಇಲ್ಲದ ಮಾಶಾಸನ ರದ್ದು

ವೈ.ಎನ್.ಹೊಸಕೋಟೆ : ಆಧಾರ್ ಸಂಖ್ಯೆ ಜೋಡಣೆ ಇಲ್ಲದ ಮಾಶಾಸನಗಳು ಜನವರಿ 18 ರಿಂದ ರದ್ದಾಗಲಿವೆ ಎಂದು ಹೋಬಳಿಯ ಕಂದಾಯ ನಿರೀಕ್ಷಕರಾದ ಕಿರಣ್ ಕುಮಾರ್ ತಿಳಿಸಿದರು.
ಮಂಗಳವಾರದAದು ಗ್ರಾಮದ ಕಂದಾಯ ಕಛೇರಿಯಲ್ಲಿ ಮಾತನಾಡಿ ವೃದ್ದಾಪ್ಯವೇತನ, ವಿಧವಾವೇತ, ಅಂಗವಿಕಲವೇತನ, ಸಂದ್ಯಾ ಸುರಕ್ಷಾ, ಮನಸ್ವಿನಿ ಇತ್ಯಾದಿ ಮಾಶಾಸನಗಳ ಫಲಾನುಭವಿಗಳಲ್ಲಿ ಬಹಳಷ್ಟು ಜನರು ಮಾಶಾಸನಕ್ಕೆ ಆಧಾರ್ ಕಾರ್ಡುಗಳನ್ನು ಜೋಡಣೆ ಮಾಡಿಸಿರುವುದಿಲ್ಲ. ಇದರಿಂದಾಗಿ ಅವರ ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿಲ್ಲ. ಹಾಗಾಗಿ 8 ತಿಂಗಳಿನಿಂದ ಆಧಾರ್ ಕಾರ್ಡ್ ಜೋಡಣೆ ನಡೆಯುತ್ತಿದೆ.

ಜನವರಿ 18 ಕ್ಕೆ ಈ ಕಾರ್ಯ ಪೂರ್ಣಗೊಳ್ಳಲಿದ್ದು, ತದನಂತರ ಆಧಾರ್ ಜೋಡಣೆಯಾಗದ ಫಲಾನುಭವಿಗಳ ಮಾಶಾಸನ ರದ್ದಾಗುತ್ತದೆ ಎಂದರು.
ಈ ಬಗ್ಗೆ ಧ್ವನಿವರ್ಧಕಗಳ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಕಂದಾಯ ಮತ್ತು ಗ್ರಾಮಪಂಚಾಯಿತಿಗಳಲ್ಲಿ ಅಪೂರ್ಣ ವಿಳಾಸದ ಫಲಾನುಭವಿಗಳ ಪಟ್ಟಿಯನ್ನು ಲಗತ್ತಿಸಿದೆ.

ಆ ಪಟ್ಟಿಯಲ್ಲಿ ಹೆಸರಿರುವವರು ತಕ್ಷಣವೇ ಕಂದಾಯ ಇಲಾಖೆಗೆ ಆಧಾರ್ ಕಾರ್ಡ್ ನಕಲು, ಮಾಶಾಸನದ ಚೀಟಿ (ಅಂಚೆಚೀಟಿ) ಗಳನ್ನು ತಲುಪಿಸಬೇಕು. ಇಲ್ಲವಾದಲ್ಲಿ ಮಾಶಾಸನ ರದ್ದಾಗಿ ಮತ್ತೊಮ್ಮೆ ನೂತನವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಾದ ರವಿ, ಅಂಜಾದ್ಖಾನ್, ದಿಲಾವಾರ್ ಲಾಲ್ಶೇಖ್, ಶ್ರೀಧರ್, ರಾಘವೇಂದ್ರ ಹಾಜರಿದ್ದರು.