ರೈತರಿಗೆ ಬೆಳೆ ಪರಿಹಾರ ನೀಡುವಂತೆ ಪಾವಗಡ ರೈತಸಂಘದಿಂದ ಪ್ರತಿಭಟನೆ…
ಪಾವಗಡ : ಅಕಾಲಿಕ ಮಳೆಯಿಂದಾಗಿ ಪಾವಗಡ ತಾಲೂಕು ರೈತರು ಇಟ್ಟಿರುವ ಬೆಳೆಗಳು ಮಳೆಯಿಂದ ಹಾನಿಯಾಗಿರುವು ದರಿಂದ ರೈತರಿಗೆ ತಕ್ಷಣ ಬೆಳೆ ವಿಮೆಯ ಪರಿಹಾರವನ್ನು ಕೊಡಿಸಬೇಕೆಂದು ತಾಲೂಕು ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪನ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು..
ಈ ಸಂದರ್ಭದಲ್ಲಿ ಪೂಜಾರಪ್ಪ ಮಾತನಾಡುತ್ತಾ 2021- 22 ನೇ ಸಾಲಿನ ಕೃಷಿ ಬೆಳೆ 63 . 887 ಹೆಕ್ಟೇರ್ ಶೇಂಗಾ ಬಿತ್ತನೆ. 97 ಎಕರೆ ರಾಗಿ. 26 ಎಕರೆ ತೊಗರಿ. 30 ಎಕರೆ ಹತ್ತಿ. 22 ಎಕರೆ ಜೋಳ. 13 ಎಕರೆ ತೋಟದ ಬೆಳೆ ಮಳೆಯಿಂದ ನಾಶವಾಗಿದೆ ಎಂದರು..ಹಾಗೂ ಮಳೆಯಿಂದಾಗಿ 34 ಪಂಚಾಯಿತಿಗಳಲ್ಲಿ ಮನೆಗಳು ಬಿದ್ದಿರುವುದನ್ನು ತಾಲೂಕು ರೆವಿನ್ಯೂ ಕಾರ್ಯದರ್ಶಿಗಳು ಸರಿಯಾಗಿ ಸಮೀಕ್ಷೆ ಮಾಡಿರುವುದಿಲ್ಲ. ಅವರು ಸರಿಯಾಗಿ ಸಮೀಕ್ಷೆ ಮಾಡಬೇಕೆಂದು ಒತ್ತಾಯಿಸಿದರು.
ಬಿದ್ದಿರುವ ಮನೆಗಳಿಗೆ ಸರ್ಕಾರದಿಂದ ತಕ್ಷಣ ಐದು ಲಕ್ಷ ರೂಗಳನ್ನು ಮಂಜೂರು ಮಾಡಬೇಕೆಂದು. ಬೆಳೆ ವಿಮೆಯನ್ನು 2020- 21ನೇ ಸಾಲಿನ ಬೆಳೆ ನಷ್ಟ ಪರಿಹಾರ ಕೊಡಿಸಬೇಕೆಂದು ಪ್ರತಿಭಟಿಸಿದರು. ಕೂಡಲೇ ರೈತರಿಗೆ ಬೆಳೆ ಪರಿಹಾರ ಕೊಡದಿದ್ದರೆ. ತಾಲೂಕು ಕಚೇರಿಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕೊನೆಗೆ ತಹಶೀಲ್ದಾರ್ ನಾಗರಾಜು ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ರೈತರಾದ ಹನುಮಂತರಾಯಪ್ಪ ನಾರಾಯಣಪ್ಪ .ಸಿದ್ದಪ್ಪ. ಕರಿಯಪ್ಪ ಜಯರಾಮಪ್ಪ ಇತರೆ ರೈತರು ಭಾಗವಹಿಸಿದ್ದರು
ವರದಿ: ಶ್ರೀನಿವಾಸುಲು ಎ