1660578290725 IMG 20220815 WA0112

ಪಾವಗಡ:ಸ್ವಾತಂತ್ರ್ಯ ಹಲವು ನಾಯಕರ ತ್ಯಾಗ ಬಲಿದಾನದ ಕೊಡುಗೆ…!

DISTRICT NEWS ತುಮಕೂರು

ಸ್ವಾತಂತ್ರ್ಯ ಹಲವು ನಾಯಕರ ತ್ಯಾಗ ಬಲಿದಾನದ ಕೊಡುಗೆ,  ಶಾಸಕ ವೆಂಕಟರಮಣಪ್ಪ           

ಪಾವಗಡ: ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಹಲವಾರು ಮಹನೀಯರು ಶ್ರಮಿಸಿದ್ದಾರೆ . ಹಲವು ಜನ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ . ಅವರೆಲ್ಲರ ತ್ಯಾಗ ಮತ್ತು ಬಲಿದಾನದ ಪರಿಣಾಮವಾಗಿ ನಾವು ಇಂದು ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿದ್ದೇವೆ . ಈ ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವುದು ಹಾಗೂ ದೇಶವನ್ನು ಶಕ್ತಿಯುತಗೊಳಿಸುವುದು ನಮ್ಮ ಕರ್ತವ್ಯ ಆಗಿದೆ, ತಾಲೂಕನ್ನು ಸಮಗ್ರ ಅಭಿವೃದ್ಧಿ ಗೊಳಿಸಲು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ,ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.

 ಪಟ್ಟಣದಲ್ಲಿ ಸೋಮವಾರ ನಡೆದ 75ನೇ ಸ್ವತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಹಶೀಲ್ದಾರ್ ವರದರಾಜು,ಬಾಲಗಂಗಾಧರ್ ತಿಲಕ್ ಅವರು ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ ಎಂದು ಬ್ರಿಟೀಷರಲ್ಲಿ ನಡುಕ ಹುಟ್ಟಿಸಿದರು . ಸುಭಾಷ್ ಚಂದ್ರ ಬೋಸರು ಎರಡನೇ ಮಹಾಯುದ್ಧದಲ್ಲಿ ಸೆರೆಸಿಕ್ಕ ಭಾರತದ ಸೈನಿಕರ ಸಹಾಯದಿಂದ ಬ್ರಿಟಿಷರನ್ನು ಭಾರತದಿಂದ ಓಡಿಸಲು ಹೋರಾಡಿದರು . ಹೀಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಭಾರತ ದೇಶದ ಸ್ವಾತಂತ್ರ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡರು . 1942 ರಲ್ಲಿ ಭಾರತಬಿಟ್ಟು ತೊಲಗಿ ಎಂಬ ಕ್ರಾಂತಿ ಮೊಳಗಿತ್ತು ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಎಂಬ ಕರೆಕೊಟ್ಟರು . ಹೀಗೆ ಸ್ವಾತಂತ್ರ್ಯದ ಜ್ವಾಲೆ ಇಡೀ ದೇಶದ ತುಂಬಾ ಹರಡಿತು,. ಪೋರ್ಚುಗೀಸರು, ಡಚ್ಚರು,  ಫ್ರೆಂಚರು ಆರಂಭದಲ್ಲಿ ದೇಶವನ್ನು ಆಕ್ರಮಿಸಿಕೊಂಡರು. ನಂತರ ಬ್ರಿಟೀಷರು ದೇಶವನ್ನು ಕೊಳ್ಳೆ ಹೊಡೆದರು, ನಮ್ಮ ತಾಲೂಕಿನಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮ ಹೆಮ್ಮೆಯ ವಿಷಯ ಎಂದರು.

  ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಪುರಸಭೆ ಅಧ್ಯಕ್ಷ ವೇಲುರಾಜು, ಬಿಇಒ ಅಶ್ವಥನಾರಾಯಣ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಜಿ.ವೆಂಕಟೇಶ್ ಮಾತನಾಡಿದರು.

  ಪುರಸಭೆ ಉಪಾಧ್ಯಕ್ಷೆ ಜಾಹ್ನವಿ, ಸದಸ್ಯ ಎಂ ಎಜಿ ಇಮ್ರಾನ್, ಗೊರ್ತಿ ನಾಗರಾಜು, ನಾಗಬೂಷಣರೆಡ್ಡಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ವತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ, ವೈದ್ಯಾಧಿಕಾರಿ ಕಿರಣ್, ಪೊಲೀಸ್ ಇನ್ ಸ್ಪೆಕ್ಟರ್ ಅಜಯಸಾರಥಿ, ಕಾಂತರೆಡ್ಡಿ ಉಪಸ್ಥಿತರಿದ್ದರು.