ಇತ್ತೀಚಿನ ದಿನಮಾನಗಳಲ್ಲಿ ಸಹಕಾರಿ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ ಎಂದ ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೆ ಎನ್ ರಾಜಣ್ಣ …….
ಮಧುಗಿರಿ ಪಟ್ಟಣದ ಹಿಂದೂಪುರ ಗೌರಿಬಿದನೂರು ರಸ್ತೆಯ ಸಮೀಪವಿರುವ ಮಧುಸೂಹಾರ್ದ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಇನ್ನು ಹೆಚ್ಚು ಸದೃಢವಾಗಿ ಬೆಳೆಯಲಿ ಎಂದು ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದಕೆ ಎನ್ ರಾಜಣ್ಣ ತಿಳಿಸಿದರು. ಕಟ್ಟಡ ನಿರ್ಮಾಣವು ಸಂಘದ ಇತಿಹಾಸದ ಮೈಲುಗಲ್ಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ. ಒಂದು ದಶಕದಿಂದ ಜನರಿಗೆ ಸೇವೆ ಮಾಡುತ್ತಾ ಬಂದಿರುವುದು ಶ್ಲಾಘನೀಯ ವಾಗಿದೆ.
ಹಿರಿಯರ ಸಹಕಾರ ಸಲಹೆ ಸೂಚನೆಗಳ ಮಾರ್ಗದರ್ಶನದಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಈ ಒಂದು ಅಂತಕ್ಕೆ ಬೆಳೆಯಲು ಸಾಧ್ಯವಾಗಿದೆ ಅವರೆಲ್ಲರಿಗೂ ಕೂಡ ನಾನು ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಒಂದು ಸಂಘ ಸಂಸ್ಥೆಯು ಅಭಿವೃದ್ಧಿಯಾಗಬೇಕಾದರೆ ಆ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ನೌಕರರ ಕಾರ್ಯದಕ್ಷತೆ ಪ್ರಾಮಾಣಿಕತೆ ಬಹಳ ಮುಖ್ಯವಾಗಿದೆ
ಸಹಕಾರಿ ಸಂಘಗಳು ವಸೂ ಲಾತಿಯನ್ನು. ನೂರಕ್ಕೆ ನೂರರಷ್ಟು ಮಾಡಿದರೆ ಮಾತ್ರ ಸಂಘ ಸಂಸ್ಥೆಗಳ ಬೆಳವಣಿಗೆಗೆ ಸಾಧ್ಯ. ಸಂಘದ ಸದುದ್ದೇಶ ಈಡೇರಲಿ ಎಂದು ಆಶಿಸುತ್ತಾ. ಕಟ್ಟಡ ನಿರ್ಮಾಣವನ್ನು ಮುಂದಿನ ಪೀಳಿಗೆಗೆ ಪೂರಕವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪುಟ್ಟಣ್ಣ. ಹನುಮಂತರಾಜು. ಆರ್ ಎಸ್ ಸುಧಾಕರ್ ಜಿ ಎ ನಾಗೇಂದ್ರ ಪ್ರಸಾದ್. ಎಸ್ ಲಲಿತ. ಕೆ.ಎ.ಲಕ್ಷ್ಮೀದೇವಿ ಎಂ.ಸಿ .ಪ್ರಸನ್ನ ಕುಮಾರ್. ಪುಟ್ಟಯ್ಯ ಎಮ್ ಎಲ್ ನಾಗಮ್ಮ. ಇಂದಿರಮ್ಮ ಎಸ್ ಆರ್ ನಾರಾಯಣಪ್ಪ. ಅನಂತಪದ್ಮಾ ನಾಭಚಾರ್. ಎಂ ವಿ ಶಿವಕುಮಾರ್ ಎ ಮಲ್ಲೇಶಯ ಡಾ. ರಾಜಾಲಕ್ಷ್ಮಿ. ಆರ್ ಕಪ್ಪಯ್ಯ. ಎಂ ಎಸ್ .ನಂಜೇಗೌಡ. ರಾಜ್ಯ ಸಹಕಾರಿ ಮಹಾಮಂಡಲದ ಮಾಜಿ ಅಧ್ಯಕ್ಷ
ಎನ್ ಗಂಗಣ್ಣಿ. ಇತರರು ಹಾಜರಿದ್ದರು
ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.