IMG 20220218 WA0014

ಪೋತಗಾನಹಳ್ಳಿ ಗ್ರಾಮಪಂಚಾಯಿತಿ: ಉಪಾಧ್ಯಕ್ಷರ ಅವಿರೋಧ ಆಯ್ಕೆ…!

DISTRICT NEWS ತುಮಕೂರು

ಉಪಾಧ್ಯಕ್ಷರ ಅವಿರೋಧ ಆಯ್ಕೆ

ವೈ.ಎನ್.ಹೊಸಕೋಟೆ : ಹೋಬಳಿಯ ಪೋತಗಾನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿಆನಂದಕುಮಾರ್ ರವರು ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರದಂದು ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಜ್ಯೋತಿಆನಂದಕುಮಾರ್ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ಕೆ.ಆರ್.ನಾಗರಾಜು ರವರು ಜ್ಯೋತಿಆನಂದಕುಮಾರ್ ರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮಪಾತಲಿಂಗಪ್ಪ, ಪಿಡಿಓ ಹನುಮಂತರಾಯಪ್ಪ, ಮುಖಂಡರಾದ ಪೂಜಾರಿ ತಿಮ್ಮಯ್ಯ, ಗಂಗಾಧರಪ್ಪ, ಪಾತಲಿಂಗಪ್ಪ, ನಾಗರಾಜು, ಪಾತಣ್ಣ, ಭೀಮನಕುಂಟೆ ರಾಮಾಂಜಿನಪ್ಪ, ಗ್ರಾಮಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.

ವರದಿ: ಸತೀಶ್