IMG 20220217 WA0045

ಪಾವಗಡ:ಯುವ ವಿಜ್ಞಾನಿ ಸ್ಪರ್ಧೆಗೆ ಆಯ್ಕೆ…

DISTRICT NEWS ತುಮಕೂರು

ರಾಜ್ಯಮಟ್ಟಕ್ಕೆ ಆಯ್ಕೆ.                                           ಪಾವಗಡ. ತಾಲೂಕಿನ ಕೋಟೆ ಗುಡ್ಡದ ಸಹನಾ ಕಾನ್ವೆಂಟ್ ಶಾಲೆಯ  9ನೇ ತರಗತಿಯ ವಿದ್ಯಾರ್ಥಿನಿ ಪ್ರಿಯದರ್ಶಿನಿ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ

.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ. ಇವರ ಸಹಯೋಗದಲ್ಲಿ ದಿನಾಂಕ 17-02-2022 ಗುರುವಾರದಂದು ಮಧುಗಿರಿಯ ಬಿ.ಆರ್‌.ಸಿ ಕಛೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ *ಪಾವಗಡ* *ತಾಲ್ಲೂಕಿನ ಕೋಟಗುಡ್ಡದ* *ಸಹನಾ* *ಪ್ರೌಢಶಾಲೆಯ* *9 ನೇ* *ತರಗತಿಯ* ವಿದ್ಯಾರ್ಥಿನಿಯಾದ *ಪ್ರಿಯದರ್ಶಿನಿ. ಜಿ.ಎಸ್* ರವರು ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
 *ಮಾನವ ಜೀವಕೋಶದಲ್ಲಿ* *ಕೊರೋನಾ ವೈರಾಣು* *ಪರಿಣಾಮ ಬೀರುವ* *ವಿಧಾನದ* ಕುರಿತು ಮಾದರಿಯನ್ನು ತಯಾರಿಸಿ, ಅತ್ಯುತ್ತಮವಾಗಿ ವಿಷಯ ಮಂಡನೆ ಮಾಡಿದ ಪ್ರಿಯದರ್ಶಿನಿ ರವರನ್ನು ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದು, ಐದು ಸಾವಿರ ರೂಪಾಯಿಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿರುತ್ತಾರೆ.
ವಿಜೇತ ವಿದ್ಯಾರ್ಥಿನಿಯನ್ನು ಮತ್ತು ಮಾರ್ಗದರ್ಶಿ ಶಿಕ್ಷಕರನ್ನು ಉಪ ನಿರ್ದೇಶಕರಾದ ರೇವಣಸಿದ್ದಪ್ಪ, ವಿಷಯ ಪರಿವೀಕ್ಷಕರಾದ ಚಿತ್ತಯ್ಯ. ಕಟ್ಟಾ ನರಸಿಂಹಮೂರ್ತಿ, ಸಹನಾ ಆಡಳಿತ ಮಂಡಳಿಯ ಶ್ರೀನಿವಾಸ್ ಮತ್ತು ಮುಖ್ಯಶಿಕ್ಷಕ ನರಸಿಂಹಪ್ಪ ಅಭಿನಂದಿಸಿರುತ್ತಾರೆ.

ವರದಿ :ಶ್ರೀನಿವಾಸುಲು ಎ