17 ynh 1

ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ: ನೂತನ ಉಪಾಧ್ಯಕ್ಷ ರ ಆಯ್ಕೆ…!

DISTRICT NEWS Uncategorized ತುಮಕೂರು

ಉಪಾಧ್ಯಕ್ಷರ ಆಯ್ಕೆ

ವೈಎನ್ ಹೊಸಕೋಟೆ ಗ್ರಾಮಪಂಚಾಯತಿ ಉಪಾಧ್ಯಕ್ಷ ರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಉಪಾಧ್ಯಕ್ಷ ರಾಗಿ E1 ಬ್ಲಾಕ್ ನ ಗ್ರಾಮಪಂಚಾಯತಿ‌ ಸದಸ್ಯರಾದ ನಾಗಮಣಿ ಅವರು ಆಯ್ಕೆಯಾದರು.

ರಾಜೀನಾಮೆಯಿಂದ ತೆರವಾಗಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.

ಉಪಾಧ್ಯಕ್ಷ ಸ್ಥಾನವು‌ ಬಿಸಿಎಂ ಎ ಮಹಿಳಿ ಮೀಸಲಿತ್ತು. ವೈ .ಎನ್. ಹೊಸಕೋಟೆ ಗ್ರಾಮ ಪಂಚಾಯತಿ ಯಲ್ಲಿ‌ ಜೆಡಿ ಎಸ್ ಬೆಂಬಲಿತ ಸದಸ್ಯರು. ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾದಿಸಿದ್ದರು. ಮೊದಲ‌ ಉಪಾಧ್ಯಕ್ಷ ರಾಗಿದ್ದ ಶ್ರೀಮತಿ ಫಾತೀಮಾಬಿ ಅವರಿಗೆ ಜೆಡಿ ಎಸ್ ಪಕ್ಷ ಅವಕಾಶ ಕಲ್ಪಿಸಿತ್ತು. ಪಕ್ಷದ ಆಂತರಿಕ ಒಡಂಬಡಿಕೆಯಂತೆ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ್ದರು

.

IMG 20220217 WA0034

ಚುನಾವಣೆಯಲ್ಲಿ ಮೂರು ಜನ ಉಮೇದುವಾರಿಕೆ ಸಲ್ಲಿಸಿದ್ದು, ಒಬ್ಬರು ಹಿಂಪಡೆದರು. ಇಬ್ಬರ ನಡುವೆ ನೇರ ಸ್ಪರ್ಧೆ ನಡೆಯಿತು.

IMG 20220217 WA0032

ಜೆಡಿ ಎಸ್ ಬೆಂಬಲಿತ ಅಭ್ಯರ್ಥಿ ನಾಗಮಣಿ 21 ಮತಗಳು ಪಡೆದು ಜಯಶೀಲರಾದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೌಭಾಗ್ಯಮ್ಮ 11 ಮತ ಪಡೆದು‌ ಪರಾಭವಗೊಂಡರು..

ಚುನಾವಣಾ ಅಧಿಕಾರಿ ತಹಶೀಲ್ದಾರ್ ಕೆ. ಆರ್. ನಾಗರಾಜು ಅವರು ನಾಗಮಣಿ ಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪದ್ಮಕ್ಕ ಓಬಳೇಶ್ ಪಿಡಿಒ ಕೆಂಪರಾಜು ಕಾರ್ಯದರ್ಶಿ ಹನುಮಂತರಾಯಪ್ಪ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.

ವರದಿ: ಸತೀಶ್,