IMG 20241108 WA0002

ಪಾವಗಡ: ಕಾನೂನುಬಾಹಿರುವಾಗಿ ಮಕ್ಕಳನ್ನು ಕೊಳ್ಳುವುದು ಮಾರುವುದು ಶಿಕ್ಷಾರ್ಹ ಅಪರಾಧ….!

DISTRICT NEWS ತುಮಕೂರು

ಕಾನೂನುಬಾಹಿರುವಾಗಿ ಮಕ್ಕಳನ್ನು ಕೊಳ್ಳುವುದು ಮಾರುವುದು ಶಿಕ್ಷಾರ್ಹ ಅಪರಾಧ.

ಪಾವಗಡ: ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ಸಪ್ತಾಹ ಹಾಗೂ ಅರಿವು ಕಾರ್ಯಕ್ರಮಕ್ಕೆ ತಹಶೀಲ್ದಾರ್ ವರದರಾಜು ಚಾಲನೆ ನೀಡಿದರು.

ಜಾಗೃತಿ ಜಾಥಾ ಕಾರ್ಯಕ್ರಮ ತಹಶೀಲ್ದಾರ್ ಕಛೇರಿಯಿಂದ ನಾಗರಕಟ್ಟೆ ವೃತ್ತ ದವರೆಗೆ ನಡೆಯಿತು

ಕಾರ್ಯಕ್ರಮ ಉದ್ದೇಶಿಸಿ ಮಕ್ಕಳ ರಕ್ಷಣಾಧಿಕಾರಿಯಾದ ಶಿವಣ್ಣ ಮಾತನಾಡಿ.ಪ್ರತಿ ವರ್ಷ ನವಂಬರ್ ತಿಂಗಳನ್ನು ರಾಷ್ಟ್ರೀಯ ದತ್ತು ಮಾತಾಚರಣೆಯನ್ನಾಗಿ ಆಚರಿಸಲಾಗುತ್ತದೆ ರಾಷ್ಟ್ರೀಯ ದತ್ತು ಮಾತಾಚರಣೆ ನವೆಂಬರ್ 2024ರ ಘೋಷಣ್ಣ ವಾಕ್ಯ ಎಂದರೆ ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಉತ್ತೇಜಿಸಲು ಮೀಸಲಾದ ವಿಶೇಷ ತಿಂಗಳಾಗಿದೆ ಎಂದರು.

ಇದರ ಅಂಗವಾಗಿ ಕಾನೂನು ಬದ್ಧ ಮತ್ತು ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆದಲ್ಲಿ ವಿಧಿಸಬಹುದಾದ ಶಿಕ್ಷೆಗಳ ಕುರಿತು ಸಾರ್ವಜನಿಕರಲ್ಲಿ ಅರವಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಸಿ.ಡಿ.ಪಿ.ಒ ಸುನಿತಾ ಮಾತನಾಡಿ.ಮಗು ಪ್ರೀತಿ ವಾತ್ಸಲ್ಯದಲ್ಲಿ ಮಮತೆ ಹಾಗೂ ರಕ್ಷಣೆಯ ವಾತಾವರಣದಲ್ಲಿ ಬೆಳೆಯುವುದು ಪ್ರಾಥಮಿಕ ಹಕ್ಕು, ಎಂದರು.

ಮುದ್ದಾದ ಮಗು ಮನೆಯ ಸೊಬಗು, ಮಗುವಿನ ಭಾವನಾತ್ಮಕ ಬೌದ್ಧಿಕ ದೈಹಿಕ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕ ವಾತಾವರಣ ರೂಪಿಸಿ ಅವರ ಬದುಕನ್ನು ಕಟ್ಟಿಕೊಡುವಲ್ಲಿ ಪೋಷಕರ ಜವಾಬ್ದಾರಿ ಯಾಗಿರುತ್ತದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಮಕ್ಕಳನ್ನು ಬಿಟ್ಟು ಹೋಗಿದ್ದೆ ಆದರೆ, 24 ಗಂಟೆಯೊಳಗೆ ಮಕ್ಕಳ ಸಹಾಯವಾಣಿ 1098, ಸ್ಥಳೀಯ ಪೊಲೀಸ್ ಠಾಣೆ, ಅಥವಾ ಮಕ್ಕಳ ಕಲ್ಯಾಣ ಸಮಿತಿ ತುಮಕೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ ಎಂದು ತಿಳಿಸಿದರು.

ಯಾರಾದರೂ ಕಾನೂನುಬಾಹಿರುವಾಗಿ ಮಕ್ಕಳನ್ನು ಮಾರಿದರೆ ಅಂತಹವರಿಗೆ 5 ವರ್ಷ ಕಠಿಣ ಕಾರಾಗಾರ ಶಿಕ್ಷೆ, ಒಂದು ಲಕ್ಷ ದಂಡ ವಿಧಿಸಲಾಗುವುದು ಎಂದರು.

ಒಂದು ವೇಳೆ ಆಸ್ಪತ್ರೆ ಸಿಬ್ಬಂದಿ ಇಂತಹ ಕೆಲಸಗಳಲ್ಲಿ ತೊಡಗಿದರೆ ಏಳು ವರ್ಷಕ್ಕೂ ಅಧಿಕವಾಗಿ ಕಠಿಣ ಕಾರಾಗಾರ ಶಿಕ್ಷೆ ವಿಧಿಸಲಾಗುವುದು ಎಂದರು.

ಈ ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾಧಿಕಾರಿ ಶಿವಣ್ಣ, ಕಂದಾಯ ಅಧಿಕಾರಿ ರಾಜಗೋಪಾಲ್,ಮೇಲ್ವಿಚಾರಕಿ
ಜಯಮ್ಮ, ಅಂಗನವಾಡಿ ಕಾರ್ಯಕರ್ತೆಯರ ಅದ್ಯಕ್ಷರಾದ ಸುಶೀಲಮ್ಮ, ಖಜಾಂಚಿ ಭೂಲಕ್ಷ್ಮಿ, ಗಂಗಾದೇವಿ ,ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸಲು. A

Leave a Reply

Your email address will not be published. Required fields are marked *