ಮೊದಲ ಮೇವು ಬ್ಯಾಂಕ್ ಗೆ ಚಾಲನೆ ನೀಡಿದ ತಹಶೀಲ್ದಾರ್ ಸಂತೋಷ್ ಕುಮಾರ್.
ಪಾವಗಡ : ಬರಗಾಲದ ಹಿನ್ನೆಲೆಯಲ್ಲಿ ಉಂಟಾಗಿರುವ ಮೇವು ಕೊರತೆ ನೀಗಿಸಲು ಸರಕಾರದ ನೆರವಿನಿಂದ ತಾಲ್ಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಶುಕ್ರವಾರ ಮೊದಲ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ತಿಳಿಸಿದರು.
ಪ್ರತಿ ಕೆ.ಜಿ ಮೇವಿಗೆ ಎರಡು ರೂ ನಂತೆ 07 ದಿನಕ್ಕಾಗುವಷ್ಟು ಮೇವು ನೀಡಲಾಗುವುದು ಎಂದರು.
ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಹೊರಕೆರಪ್ಪ ಮಾತನಾಡಿ, ಇಂದು 55 ಜನ ರೈತರಿಗೆ 10 ಟನ್ ಮೇವು ವಿತರಣೆ ಮಾಡಲಾಗಿದೆ,,ತಮ್ಮ ಇಲಾಖೆಯ ಸಿಬ್ಬಂದಿಗಳು ಪ್ರತಿ ಹಳ್ಳಿಗೂ ಭೇಟಿ ನೀಡಿ ರೈತರಿಗಿರುವ ಜಾನುವಾರಗಳ ಮಾಹಿತಿಯನ್ನು ಪಡೆದು ಅವರಿಗೆ ಚೀಟಿ ವಿತರಿಸುವರು.
ಚೀಟಿ ಪಡೆದಂತಹ ರೈತರಿಗೆ ಮೇವು ವಿತರಣಾ ಕೇಂದ್ರದಲ್ಲಿ ಜಾನುವಾರುಗಳಿಗೆ ಅನುಗುಣವಾಗಿ ಒಂದು ಜಾನುವಾರಿಗೆ 6 ಕೆ.ಜಿಯಂತೆ ಏಳು ದಿನಗಳಿಗೆ ಆಗುವಷ್ಟು ಮೇವನ್ನು ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ವೈ ಎನ್ ಹೊಸಕೋಟೆಯಲ್ಲಿ ಎರಡನೇ ಹಂತದ ಮೇವಿನ ಬ್ಯಾಂಕ್ ತೆರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿ.ಡಿ ಗಿರೀಶ್ ಬಾಬುರೆಡ್ಡಿ, ನಾಲಮಡಿಕೆ ಆರ್ ಐ ನಾರಾಯಣಸ್ವಾಮಿ, ಉಪ ತಾಹಸೀಲ್ದಾರ್ ಕೆ ರಾಜಣ್ಣ, ಆಸೀಪ್, ಅಶ್ವತ್ ನಾರಾಯಣ, ಸಿಬ್ಬಂದಿ ಸೌಮ್ಯ, ರಾಮಾಂಜಿನೇಲು, ನಾಗಮ್ಮ, ಶಿವರಾಜಪ್ಪ, ದಿನೇಶ್, ತಿಪ್ಪೇಸ್ವಾಮಿ, ಸಣ್ಣಿರಪ್ಪ, ಸೇರಿದಂತೆ ಹಲವರು ಹಾಜರಿದ್ದರು
ವರದಿ. ಶ್ರೀನಿವಾಸಲು. A