SAVE 20201215 215006

ಪಾವಗಡ: ಬಡ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ಶಿಕ್ಷಣ…!

DISTRICT NEWS ತುಮಕೂರು
  ಪಾವಗಡ: –  ಕೋವಿಡ್19 ಆರ್ಥಿಕ ದುಷ್ಪರಿಣಾಮಕ್ಕೆ ಈಡಾದ ಬಡ ಗ್ರಾಮೀಣ ವಿದ್ಯಾರ್ಥಿನಿಯರಟ ನೆರವಿಗೆ ಕಂಪ್ಯೂಟರ್ ಶಿಕ್ಷಣ
“ಸದ್ವಿದ್ಯಾ ಯೋಜನೆ” 
ಈ ಯೋಜನೆಯ ಅಡಿಯಲ್ಲಿ, ಹೆಚ್ಚು ಶಾಲಾ ಶಿಕ್ಷಣ ಪಡೆದಿಲ್ಲದ ಬಡ ಹೆಣ್ಣುಮಕ್ಕಳಿಗೆ, ಕಂಪ್ಯೂಟರ್ ಆಧಾರಿತ ಆಧುನಿಕ ವೃತ್ತಿಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಪಾವಗಡದಲ್ಲಿ ಒಂದು ಅಂಗೀಕೃತ ಕಂಪ್ಯೂಟರ್ ಇನ್ಸ್ಟಿಟ್ಯೂಟ್‍ನಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮೊದಲೇ ಆರ್ಥಿಕವಾಗಿ ಹಿಂದುಳಿದ ಇಲ್ಲಿನ ಸಮುದಾಯವು ಕೋವಿಡ್‍ನ ದುಷ್ಪರಿಣಾಮದಿಂದ ಮತ್ತಷ್ಟು ಬಡತನದ ಕಂದಕಕ್ಕೆ ಬೀಳುವ ಸಂಭವವನ್ನು ಕಂಡು, ಸ್ವಾಮಿ ಜಪಾನಂದಜೀ, ಈ ಯೋಜನೆಯನ್ನು ಇನ್ಫೋಸಿಸ್ ಫೌಂಡೇಶನ್‍ನ ಸಹಯೋಗದಲ್ಲಿ ರೂಪಿಸಿದ್ದು, ಇದರ ಅಡಿಯಲ್ಲಿ ಸದ್ಯದಲ್ಲಿ 50 ಬಡ ಹೆಣ್ಣುಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಅರ್ಹರಾದ ಹೆಣ್ಣುಮಕ್ಕಳನ್ನು ಈಗಾಗಲೇ ಗುರುತಿಸಿ, ಅವರ ಹೆಸರುಗಳನ್ನು ನೊಂದಾಯಿಸಲಾಗಿದೆ. ಕೋವಿಡ್19ರ ಕಾರಣದಿಂದ ಹೆಚ್ಚಿನ ಸಂಕಷ್ಟಕ್ಕೆ ಈಡಾಗಿರುವ ಹಿಂದುಳಿದ ಹಾಗೂ ಮಧ್ಯಮ ವರ್ಗಗಳ ಹೆಣ್ಣುಮಕ್ಕಳಿಗೆ ಈ ಯೋಜನೆ ಬಹಳ ಸಹಾಯಕವಾಗುವುದರಲ್ಲಿ ಸಂದೇಹವಿಲ್ಲ.
ಈ ಯೋಜನೆಯ ಕಾರ್ಯಾರಂಭವನ್ನು ಅಧಿಕೃತವಾಗಿ ದಿನಾಂಕ:16-12-2020ರ ಬುಧವಾರ ಶ್ರೀ ರಾಮಕೃಷ್ಣ ಸೇವಾಶ್ರಮದ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಮತ್ ಸ್ವಾಮಿ ಜಪಾನಂದಜೀ ಮಹಾರಾಜ್, ಅಧ್ಯಕ್ಷರು, ಶ್ರೀರಾಮಕೃಷ್ಣ ಸೇವಾಶ್ರಮ ರವರು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ವೈ.ಎಸ್.ಹನುಮಂತರಾಯ, ಪ್ರಾಚಾರ್ಯರು, ವೈ.ಇ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಖ್ಯ ಅತಿಥಿಗಳಾಗಿ ಶ್ರೀ ವಿ.ಆರ್.ಚೆಲುವರಾಜನ್, ಇತಿಹಾಸ ಸಂಶೋಧಕರು, ಲೇಖಕರು ಮತ್ತು ಅಧ್ಯಕ್ಷರು, ಬ್ರಾಹ್ಮಣ ಸಂಘ ಮತ್ತು ವಿಶೇಷ ಆಹ್ವಾನಿತರಾಗಿ ಶ್ರೀ ಮಾರಪ್ಪ, ಕೆ.ಓ., ಪ್ರಾಚಾರ್ಯರು, ಸರ್ಕಾರಿ ಮಹಿಳಾ ಕಾಲೇಜು, ಶ್ರೀ ಸಿದ್ದಗಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶ್ರೀ ಬಸವರಾಜು ಆರ್., ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ರವರು ಭಾಗವಹಿಸಲಿದ್ದಾರೆ ಎಂದು ಆಶ್ರಮದ ಆಡಳಿತ ಮಂಡಳಿ ಪ್ರಕಟಿಸಿದೆ