ಆನೇಕಲ್: ಯಮರೆ ಗ್ರಾಮದಲ್ಲಿ ಡಾ”ಪುನೀತ್ ರಾಜ್ ಕುಮಾರ್ ರವರ ಪ್ರಥಮ ವರ್ಷದ ಪುಣ್ಯತಿಥಿ ದಿನದಂದು ಎಲ್.ವಿ ಆಸ್ವತ್ರೆ ಮತ್ತು ಎಲ್.ವಿ ಡೈಯಾಗ್ನೋಸ್ಟಿಕ್ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು
ಇದೇ ಸಂಧರ್ಭದಲ್ಲಿ ಗಂದದಗುಡಿ ಚಿತ್ರ ಬಿಡುಗಡೆ ಪ್ರಯುಕ್ತ 15 ದಿನಗಳ ಕಾಲ ಉಚಿತ ಆರೋಗ್ಯ ತಪಾಸಣೆ ಶಿಭಿರವನ್ನು ಶ್ರೀ ಶಿರಡಿ ಸಾಯಿ ಬಾಬಾ ಇಂಟರ್ ನ್ಯಾಷನಲ್ ಪೌಂಡೇಷನ್ ಮತ್ತು ಎಲ್ ವಿ ಆಸ್ವತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಡಾ” ಪುನೀತ್ ರಾಜ್ ಕುಮಾರ್ ರವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖೇನ ಸಾಂಕೇತಿಕವಾಗಿ ಉಚಿತ ಆರೋಗ್ಯ ತಪಾಸಣೆ ಶಿಭಿರಕ್ಕೆ ಇಂದು ಚಾಲನೆ ನೀಡಲಾಯಿತು
ಶಿಬಿರದಲ್ಲಿ ಘೊಸಾ ತೆರಪಿ,ಫಿಸಿಯೋ ತೆರಪಿ, ಮಂಡಿ ನೋವು, ಕೀಲು ನೋವು, ಕುತ್ತಿಗೆ ನೋವು, ವೈಗ್ರೀನ್ ಹೆಡ್ಡೇಕ್,ನರ ದೌರ್ಬಲ್ಯ,ಪ್ರಾಕ್ಟರ್ ಟ್ರಿಟ್ ಮೆಂಟ್, ಕಣ್ಣಿನ ಪೊರೆ ಆಪರೇಷನ್ ,ಇನ್ನು ಮುಂತಾದ ಉಚಿತ ಪರೀಕ್ಷೆ ಮಾಡಲಾಗುವುದು ಎಂದರು.
ಪುನೀತ್ ರಾಜಕುಮಾರ್ ಫೋಟೋ ಕರ್ನಾಟಕ ದ್ವಜ ಹಿಡಿದು ಪ್ರತಿಯೊಬ್ಬರು ಸ್ಟಾರ್ ಸ್ಟಾರ್ ಪುನೀತ್ ಸ್ಟಾರ್ ಎಂದು ಜೈಕಾರ ಕೂಗಿ ಬೆಂಗಳೂರು-ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಕಾಲ್ನಡಿಗೆ ಜಾಥ ಕಾರ್ಯಕ್ರಮವು ಸಹ ನಡೆಯಿತು..
ಈ ವೇಳೆ ಡಾಕ್ಟರ್ ಜೈ ಶ್ರೀ ಬೆಳಗಾವಿ ರವರು ಮಾತನಾಡಿ ಪುನೀತ್ ರಾಜ್ ಕುಮಾರ್ ರವರ ಸೇವೆ ಪ್ರಪಂಚ ಇರೋ ವರೆಗೂ ಅಜರಾಮರವಾಗಿ ಅವರ ಹೆಸರು ಉಳಿಯುವಂತೆ ಬಡ ಹೆಣ್ಣುಮಕ್ಕಳಿಗೆ ವಸತಿ ಮತ್ತು ಶಾಲೆಗಳು,ವಿಶೇಷ ಚೇತನರಿಗೆ ವಸತಿ,ವೃದ್ದಾಶ್ರಮ,ಗೋ ಶಾಲೆ,ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ತಮ್ಮ ಕೈಲಾದ ಸಹಾಯ ಮಾಡಿ ಹೀಗೆ ಮಾನವ ಕುಲಕ್ಕೆ ಮಾದರಿಯಾದ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನು ದೈಹಿಕವಾಗಿ ಬಿಟ್ಟು ಹೋದರು ಮಾನಸಿಕವಾಗಿ ಅವರು ನಮ್ಮ ಜೊತೆಯಲ್ಲೇ ಇದ್ದಾರೆ ಅವರು ನಮಗೆಲ್ಲರಿಗೂ ಆದರ್ಶವಾಗಿದ್ದಾರೆ,ಯಾವುದೇ ವ್ಯಕ್ತಿಯೂ ತಾನೂ ಮಾಡುವ ಒಳ್ಳೆಯ ಕೆಲಸ ಮಾತ್ರ ಅವರ ಸತ್ತ ಬಳಿಕವಷ್ಟೇ ಮಾತನಾಡುತ್ತೆ ಅದಕ್ಕೆ ಉದಾಹರಣೆಗೆ ಎಂದರೆ ಕರ್ನಾಟಕದ ರತ್ನ ಡಾ,ಪುನೀತ್ ರಾಜ್ ಕುಮಾರ್ ಎಂದರು.
ಅವರ ನೆನಪಿಗಾಗಿ ಪ್ರಥಮ ವರ್ಷದ ಪುಣ್ಯತಿಥಿಯ ಅಂಗವಾಗಿ ನಾವೂ ಇಂದು ಎಲ್ ವಿ ಆಸ್ವತ್ರೆ ಮತ್ತು ಡೈಗೋನಾಸ್ಟಿಕ್ ಕೇಂದವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಲ್ ವಿ ಡೆವಲಪರ್ಸ ಮತ್ತು ಎಲ್ ವಿ ಗ್ರೂಪ್ ನ ಮಾಲೀಕರಾದ ಶ್ರೀನಿವಾಸರೆಡ್ಡಿ ಮತ್ತು ಗಣ್ಯರು ಹಾಗೂ ಅತಿಥಿಗಳು ಮತ್ತು ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಸ್ಥಳೀಯ ಗ್ರಾಮಸ್ಥರು ಭಾಗವಹಿನ್ಯಾಷನಲ್:
ವರದಿ ಹರೀಶ್ ಗುರುಮೂರ್ತಿ ಆನೇಕಲ್.