ಅಪರಾಧ ತನಿಖೆ: ತಂತ್ರಜ್ಞಾನ ಅಳವಡಿಕೆಯಲ್ಲಿ ಕರ್ನಾಟಕ ಕೈಗೊಂಡ ಕ್ರಮಗಳ ಬಗ್ಗೆ ಸಮ್ಮೇಳನದಲ್ಲಿ ಪ್ರಶಂಸೆ: – ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.
ಬೆಂಗಳೂರು, ಅಕ್ಟೋಬರ್ ೨೯
ಹರಿಯಾಣ ರಾಜ್ಯದ ಸೂರಜ್ ಕುಂಡ್ ನಲ್ಲಿ ನಡೆದ ಎರಡು ದಿನಗಳ ಕಾಲ ನಡೆದ ಎಲ್ಲಾ ರಾಜ್ಯಗಳ ಗೃಹ ಸಚಿವರ ಸಮ್ಮೇಳನ ಅತ್ಯಂತ ಫಲಪ್ರದವಾಗಿದ್ದು, ಅಪರಾಧ ನೋಂದಣಿ ಮತ್ತು ತನಿಖೆ ಪ್ರಕ್ರಿಯೆಯಲ್ಲಿ, ಆಧುನಿಕ ತಂತ್ರಜ್ಞಾನ ಅಳವಡಿಕೆ ಕುರಿತಂತೆ, ಕರ್ನಾಟಕದ ಪ್ರಯತ್ನ, ಮೆಚ್ಚುಗೆ ಪಡೆದಿದೆ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ.
ಮಾಧ್ಯಮದ ಸದಸ್ಯರೊಂದಿಗೆ, ಇಂದು, ಮಾತನಾಡಿದ ಸಚಿವರು, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಕರೆದ ಎರಡು ದಿನಗಳ ಸಮ್ಮೇಳನ ” ಚಿಂತನ್ ಶಿಬಿರ” ಹತ್ತು ಹಲವು ವಿಷಯಗಳ ಬಗ್ಗೆ ಗಹನ ಚರ್ಚೆ ನಡೆಸಿ, ಅಪರಾಧ ತನಿಖೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಯಾಗಬೇಕು ಹಾಗೂ ಅಪರಾಧಿಗಳ ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು ಎಂಬ ಬಗ್ಗೆ ಒತ್ತು ನೀಡಲಾಯಿತು, ಎಂದರು.
ಆಂತರಿಕ ಭದ್ರತೆ, ಸೈಬರ್ ಅಪರಾಧಗಳ ನಿಯಂತ್ರಣ, ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ, ಹಾಗೂ ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಹಾಗೂ, ಮಹಿಳಾ ಹಾಗೂ ಮಕ್ಕಳ ಹಕ್ಕು ರಕ್ಷಣೆ ಬಗ್ಗೆ ಆದ್ಯತೆ ಬಗ್ಗೆಯೂ, ಸಮ್ಮೇಳನದಲ್ಲಿ, ವಿಶೇಷ ಚರ್ಚೆ ಯಾಯಿತು, ಎಂದರು.
ಕರ್ನಾಟಕ ಸರಕಾರ ತೆಗೆದುಕೊಂಡ ಬಹಳ ವಿನೂತನ ವಾದ, ಅಪರಾಧ ಸ್ಥಳ ಪರಿವೀಕ್ಷಣಾ ಅಧಿಕಾರಿಗಳ ನೇಮಕ ನಿರ್ಧಾರ ಮತ್ತು ಸಾರ್ವಜನಿಕರು ಪೊಲೀಸ್ ಠಾಣೆ ಯಲ್ಲಿ, ಯಾವುದೇ ದೂರುಗಳಿದ್ದರೆ, ಆನ್ ಲೈನ್ ಮೂಲಕವೂ ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಮ್ಮೇಳನದಲ್ಲಿ ವಿಶೇಷವಾಗಿ ಪ್ರಸ್ತಾಪಿಸಲ್ಪಟ್ಟು, ಇತರೆ ರಾಜ್ಯ ಗಳಲ್ಲಿಯೂ, ಅಂತಹದೇ ಪ್ರಯತ್ನಕ್ಕೆ ಕರ್ನಾಟಕ ಮಾದರಿಯಾಗಬೇಕು ಎಂಬ ಅಭಿಪ್ರಾಯ ಮೂಡಿದೆ, ಎಂದು ಸಚಿವರು ತಿಳಿಸಿದರು.
ಸಮ್ಮೇಳನದಲ್ಲಿ, ಎಲ್ಲಾ ರಾಜ್ಯಗಳ ಗೃಹ ಸಚಿವರೂ, ಉಪ ರಾಜ್ಯಪಾಲರುಗಳೂ, ಹಾಗೂ ಸಂಬಂಧಿತ ಪೊಲೀಸ್ ಮುಖ್ಯಸ್ಥರೂ ಭಾಗವಹಿಸಿದ್ದರು, ಎಂದು ತಿಳಿಸಿದರು.