ಪಾವಗಡ. ವಿದ್ಯುತ್ ಪ್ರವಹಿಸಿ ವ್ಯಕ್ತಿ ಒಬ್ಬ ಮರಣ ಹೊಂದಿದ ಘಟನೆ ಶುಕ್ರವಾರ ತಾಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ ಗ್ರಾಮದ ಸೋಲಾರ್ ಪಾರ್ಕ್ ನಲ್ಲಿ ನಡೆದಿದೆ.
ಮೃತ ವ್ಯಕ್ತಿ ತಾಲೂಕಿನ ಚಿಕ್ಕ ಹಳ್ಳಿ ಗ್ರಾಮದ ಗೋಪಾಲ (28) ಎಂದು ತಿಳಿದು ಬಂದಿದೆ. ಮೃತ ಗೋಪಾಲ್ ಕಳೆದ ನಾಲ್ಕು ವರ್ಷಗಳಿಂದ ಔದಾಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕ್ಯಾತಗಾನಕೆರೆ ಕೋಡಿ ಬಿದ್ದು ಹರಿದ ಪರಿಣಾಮ ಸೋಲಾರ್ ಪಾರ್ಕ್ ಸಂಪೂರ್ಣವಾಗಿ ಜಲಮಯವಾಗಿತ್ತು.
ಔದಾ ಕಂಪನಿಯಲ್ಲಿ ನೀರಿರುವ ಪ್ರದೇಶದಲ್ಲಿ ಎಸ್ ಎಮ್ ಬಿ ಆನ್ ಮಾಡಲು ಹೋದಾಗ. ಬಲಗೈ ತೋರು ಬೆರಳಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುತ್ತಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಪಾವಗಡದ 2050 ಮೆಗಾ ವ್ಯಾಟ್ ಸೋಲಾರ್ ಪಾರ್ಕಿನಲ್ಲಿ ಕೆ ಎಸ್ ಪಿ ಡಿ ಸೆಲ್ ಸಂಸ್ಥೆಯು ಖಾಸಗಿ ಸೋಲಾರ್ ಸಂಸ್ಥೆಗಳಿಗೆ ಮೂಲಭೂತಗಳ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ವರಿಗೆ ಪ್ರಥಮ ಚಿಕಿತ್ಸೆ, ವಿದ್ಯುತ್ ಅವಗಡಗಳು ಸಂಭವಿಸಿದಾಗ ಸೂಕ್ತವಾದ ಅಗ್ನಿಶಾಮಕ ದಳದ ವ್ಯವಸ್ಥೆ ಇಲ್ಲದಿರುವುದು, ಸೋಲಾರ್ ಪಾರ್ಕ್ ನ ಅವ್ಯವಸ್ಥೆಯ ಕೈಗನ್ನಡಿ ಯಾಗಿದೆ ಎಂದು ತಿರುಮಣಿಯ ನಿವಾಸಿ ಅಶೋಕ್ ದೂರಿದ್ದಾರೆ.
ವರದಿ: ಶ್ರೀನಿವಾಸಲು ಎ