- ಗೃಹಸಚಿವರ ಜಿಲ್ಲೆಯಲ್ಲಿ ಸಾಮಾನ್ಯರಿಗಿಲ್ಲ ರಕ್ಷಣೆ
- ವೈ ಎನ್ ಹೊಸಕೋಟೆ ಪೊಲೀಸರ ಅಟ್ಟಹಾಸ
- ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರಿಗೆ ಏನು ಕೆಲಸ
- ಸೆಟಲ್ ಮೆಂಟ್ ಅಡ್ಡೆಯಾದ ಪೊಲೀಸ್ ಠಾಣೆ
ದಯಾಮರಣ ಕೊಡಸಿ ಸ್ವಾಮಿ – ನೊಂದ ಕುಟುಂಬದ ಆಕ್ರಂದನ…..!
ಬೆಂಗಳೂರು : ಪಾವಗಡ ತಾಲ್ಲೂಕಿನ ವೈ ಎನ್ ಹೋಸಕೋಟೆ ಕೆಲ ಪೊಲೀಸರ ಅಟ್ಟಹಾಸಕ್ಕೆ ಸಾಮಾನ್ಯ ಜನ ನರಳಿ ಹೋಗುತ್ತಿದ್ದಾರೆ. ವಸೂಲಿ / ಸೆಟಲ್ ಮೆಂಟ್ ಅಡ್ಡೆಯಾಗಿಗೆ
ಪೊಲೀಸ್ ಠಾಣೆಗೆ ಹಣವಂತರು – ಬಲಾಢ್ಯರು ಪೆನ್ನು – ಪೇಪರ್ ಇದೆ ಎಂದು ಬಾಯಿಗೆ ಬಂದಂತೆ ಬರೆದುಕೊಂಡು ಬಂದು ಅವರಿಗೆ ಬೇಕಾದ/ ಸ್ವಜಾತಿಯ ಪೊಲೀಸರೊಂದಿಗೆ ಡೀಲ್ ಮಾಡಿಕೊಳ್ಳುತ್ತಾರೆ, ಬಲಾಢ್ಯರು ದೂರಿನಲ್ಲಿ ಹೆಸರಿಸಿರುವಂತಾ ವ್ಯಕ್ತಿಗಳಿಗೆ ಪೋಲೀಸರ ಕಿರುಕುಳ ನೀಡಿ ಅವರನ್ನು ಹೈರಾಣು ಮಾಡುತ್ತಿದ್ದಾರೆ ಎಂಬ ಅಂಶವನ್ನು ಪೋಲೀಸರಿಂದ ನೋಂದ ವ್ಯಕ್ತಿಗಳಾದ ನಾಗರಾಜು ಕುಟುಂಬ ಮಾಹಿತಿ ನೀಡಿದೆ
ಯಾವುದೂ ಘಟನೆ ನಡೆಯದೆ ಇದ್ದರು ಸುಳ್ಳು ದೂರು ನೀಡುತ್ತಾರೆ. ಇಲ್ಲ ಘಟನೆ ನಡೆದ ಜಾಗದಲ್ಲಿ ಇಲ್ಲದಿರುವ ವ್ಯಕ್ತಿಗಳ ಹೆಸರುಗಳನ್ನು ಸೇರಿಸಿ ನಿಮ್ಮ ಕುಟುಂಬ ಸದಸ್ಯರು- ಸಂಬಂದೀಕರೆಲ್ಲರನ್ನು ಜೈಲಿಗೆ ಕಳುಹಿಸುತ್ತೇವೆ ಎಂಬ ಮಾತುಗಳನ್ನು ಪೋಲಿಸರಿಂದ ಹೇಳಿಸುವುದು ಅವರನ್ನು ಭಯದ ಕೂಪಕ್ಕೆ ತಳ್ಳುವುದು ಇಲ್ಲಿನ ಪರಿಪಾಠವಾಗಿದೆ.
ಪೋಲೀಸರು ಹೇಳಿದ ರೀತಿ ಕೇಳಬೇಕು ಇಲ್ಲವಾದರೆ ಜೈಲಿಗೆ ಹೋಗಲು ರೆಡಿಯಾಗಬೇಕಾಗುತ್ತದೆ ಎಂಬ ಅಳಲು ಸಂತ್ರಸ್ಥ ಕುಟುಂಬಗಳದ್ದು. ಬಲಾಢ್ಯರು – ಹಣವಂತರ ಪರವಾಗಿ ಪೋಲೀಸರು ಕೆಲಸ ಮಾಡುತ್ತಿರುವುದನ್ನು ಕಂಡು ನ್ಯಾಯಕ್ಕಾಗಿ ಪರಿತಪಿಸುವ ಪರಿತಪಿಸುವ ಪರಿಸ್ಥಿತಿ ಬಂದಿದೆ
ನಿಮ್ಮ ಕುಟುಂಬದ ಎಲ್ಲರನ್ನು ಜೈಲಿಗೆ ಕಳುಹಿಸುತ್ತೇವೆ ಎಂಬುದನ್ನು ಅಸ್ತ್ರವಾಗಿಸಿಕೊಂಡು ಬೆದರಿಸಿ ನ್ಯಾಯ ದ ಕಡೆ ಗಮನ ಕೊಡದೆ ಅನ್ಯಾಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಿದೆ ಕುಟುಂಬ.
ವೈ.ಎನ್ ಹೊಸಕೋಟೆಯ ಬೆಸ್ತರಳ್ಳಿ ರಸ್ತೆಯಲ್ಲಿ ವಾಸವಿರುವ ನಾಗರಾಜು ಅಲಿಯಾಸ್ ಚಂದ್ರಬಾಬು ನಾಯ್ಡು ಕುಟುಂಬದ ಕರುಣಾಜನಕ ಕಥೆ. ತಂದೆ ಶಿರವಳಪ್ಪ ಅವರಿಗೆ ೮೦ ವರ್ಷ ಗ್ಯಾಂಗರಿಂಗ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇನ್ನು ಸುಬ್ಬಮ್ಮ ಸುಮಾರು ೭೫ ವರ್ಷ, ಇನ್ಬು ಹೆಂಡತಿ ಅಶ್ವಿನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಈತನ ಕುಟುಂಬ.
ಈ ಕುಟುಂಬ ತನ್ನ ಪಿತ್ರಾರ್ಜಿತ ಆಸ್ತಿ ಉಳಿಸಿಕೊಳ್ಳಲು ಬ್ರಷ್ಟ ಅಧಿಕಾರಗಳ ಸಮೂಹದಲ್ಲಿ ಸಮಾರು ವರ್ಷಗಳಿಂದ ಹೋರಾಟಮಾಡುತ್ತಿದ್ದಾರೆ.ಆಸ್ತಿ ಗೆ ಸಂಬಂದಿಸಿದಂತೆ ನ್ಯಾಯಾಲಯ ಆದೇಶಗಳು ಈ ಕುಟುಂಬದ ಪರವಾಗಿದ್ದರು ಈತನ ರಕ್ತ ಸಂಬಂದಿ ಜೆಡಿ ಎಸ್ ಬೆಂಬಲಿತ ಗ್ರಾಮಪಂಚಾಯತಿ ಸದಸ್ಯೆ ಕಾಮಾಕ್ಷಮ್ಮ ಮತ್ತು ಪತಿ ಡಾನ್ ಸೀನ ಅಲಿಯಾಸ್ ಶ್ರೀನಿವಾಸ್ ಇವರಿಂದ ನಮಗೆ ಬದಕುಲು ಹಾಗುತ್ತಿಲ್ಲ. ಮಾನವ ಹಕ್ಕುಗಳ ಹರಣ ವಾಗುತ್ತಿದೆ. ನಮ್ಮ ಸಂವಿಧಾನ ಪತ್ರಿಯೊಬ್ಬರಿಗೂ ತನ್ನದೆ ಆದ ಹಕ್ಕುಗಳನ್ನು ನೀಡಿದೆ. ಬ್ರಷ್ಟ ಅಧಿಕಾರಗಳ ಸಮೂಹದಿಂದ ನಾವು ಸಮಾಜದಲ್ಲಿ ಬದುಕಲು ಹಾಗದೆ ದಯಾಮರಣವನ್ನು ಕೋರುತ್ತಿದ್ದೇವೆ ಎನ್ನುತ್ತಿದ್ದಾರೆ.
ದಯಾಮರಣ ಕೊಡಸಿ ಸ್ವಾಮಿ :
ವೈ ಎನ್ ಹೊಸಕೋಟೆ ಪೋಲೀಸರು ನಡೆದು ಕೊಳ್ಳುತ್ತಿರುವ ರೀತಿ ಈ ನಿರ್ಧಾರಕ್ಕೆ ಒಂದು ಕಾರಣ. ಸಿವಿಲ್ ಪ್ರಕರಣಗಳಿಗೂ – ಪೋಲೀಸರಿಗೆ ಏನು ಸಂಬಂಧ….? ಎಂದು ಪ್ರಶಿಸುತ್ತಾರೆ..? ಪೋಲೀಸರ ಕಿರುಕುಳದಿಂದ ನೊಂದ ನಾಗರಾಜ. ವೈ ಎನ್ ಹೊಸಕೋಟೆ ಪೋಲೀಸ್ ಠಾಣೆ ಡೀಲ್ ಗಳ ಅಡ್ಡೆಯಾಗಿದೆ ಎನ್ನುತ್ತಾರೆ
ತಾಲ್ಲೂಕು ಪಂಚಾಯತಿ, ಗ್ರಾಮಪಂಚಾಯತಿ ಮತ್ತು ಪೋಲೀಸರಿಂದ ನ್ಯಾಯ ಸಿಗುತ್ತಿಲ್ಲ ಜೆಡಿ ಎಸ್ ಬೆಂಬಲಿತ ಗ್ರಾಮಪಂಚಾಯತಿ ಸದಸ್ಯೆ ಕಾಮಾಕ್ಷಮ್ಮ ಈಕೆಯ ಪತಿ ಡಾನ್ ಸೀನ ಅಲಿಯಾಸ್ ಶ್ರೀನಿವಾಸ್ ಮತ್ತು ಇಬ್ಬರು ಮಕ್ಕಳ ಕಿರುಕುಳಕ್ಕೆ ನಮಗೆ ಬದಕುವ ಆಸೆ ಕಳೆದು ಕೋಂಡಿದ್ದೇವೆ ಆದ್ದರಿಂದ ನಮಗೆ ನ್ಯಾಯಯುತವಾಗಿ ಬದುಕಲು ಅವಕಾಶ ಮಾಡಿಕೊಡಿ ಇಲ್ಲ ದಯಾಮರಣ ಕೊಡಿಸಿ ಎಂದು ಸರ್ಕಾರವನ್ನು ಕೊರುತ್ತೇವೆ ಎನ್ನುತ್ತಾರೆ ನಾಗರಾಜ ಅವರ ಪತ್ನಿ ಅಶ್ವಿನಿ.
ನಮ್ಮ ಮಾವ ಶಿರವಳಪ್ಪ ಅವರಿಗೆ ಎಂಬತ್ತು(80) ವರ್ಷ ಅವರಿಗೆ ಗ್ಯಾಂಗರಿಂಗ್ (ಕರಳಿನಲ್ಲಿ) ಖಾಯಿಲೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.ಮಲ- ಮೂತ್ರ ವಿಸರ್ಜನೆಗೆ ಬ್ಯಾಗ್ ಅಳವಡಿಸಲಾಗಿದೆ. ಇಂತಹ ವ್ಯಕ್ತಿಯನ್ನು ಗಲಾಟೆ ಬಂದಿದ್ದ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಇನ್ನು ನಮ್ಮ ಅತ್ತೆ ಸುಬ್ಬಮ್ಮ 75 ವರ್ಷ ಇವರ ಹೆಸರು ಕೂಡ ದೂರಿನಲ್ಲಿ ಇದೆ ಜೊತೆಗೆ ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ಹುಡುಗ ನ ಹೆಸರು ದೂರಿನಲ್ಲಿದೆ ಜೊತೆಗೆ ಘಟನೆಗೆ ಸಂಬಂಧ ವಿಲ್ಲದ ಬೇರೆ ಗ್ರಾಮಗಳಲ್ಲಿ ವಾಸವಿರುವರು ಸೇರಿದಂತೆ ಹನ್ನೊಂದು ಜನರ ಹೆಸರಿನಲ್ಲಿ ದೂರು ನೀಡುವುದು,
ಘಟನೆ ನಡೆದ ಸಂದರ್ಭದಲ್ಲಿ ಹಾಜರೇ ಇಲ್ಲದ ಹೆಸರುಗಳನ್ನು ತೆಗೆದು ಎಫ್ ಐ.ಆರ್ ಮಾಡಬೇಕು ಅಂದರೆ ನಿಮ್ಮ ಸೈಟ್ ದೂರು ದಾರರಿಗೆ ಬರೆದು ಕೊಡಬೇಕು ಎಂದು ದೂರುದಾರ ಮತ್ತು ಪೊಲೀಸರು ಹೇಳುತ್ತಾರೆ
ಊರಿನ ಪ್ರಮುಖರು ದೂರುದಾರ ಕ್ರಿಮಿನಲ್ ಹಿನ್ನಲೆ ಇರುವವನು ನೀನು ಒಬ್ಬೊಂಟಿಗ ಅವರು ಕೇಳಿರು ಸೈಟ್ ನೀಡು ಎಂಬ ಸಲಹೆ ನೀಡುತ್ತಾರೆ. ನಾಗರಾಜ್ ಸೈಟ್ ನೀಡಲು ಒಪ್ಪುತ್ತಾರೆ. ನಂತರ ಎಲ್ಲರ ಹೆಸರನ್ನು ಕೈಬಿಟ್ಟು ನಾಗರಾಜ್ ಮತ್ತು ದೂರುದಾರ ಡಾನ್ ಸೀನ ನ ಹೆಸರಿನಲ್ಲಿ ಎರಡು ಎಫ್.ಐ.ಆರ್ ದಾಖಲಾಗುತ್ತದೆ. ಸ್ಟೇಷನ್ ಬೈಲ್ ಕೊಟ್ಟು ಕಳುಹಿಸುತ್ತಾರೆ.
ಅಸಲಿ ಆಟ :
ದೂರುದಾರ ಕೇಳುತ್ತಿರುವ ಸೈಟ್ ನಾಗರಾಜ್ ತಂದೆ ಶಿರವಳ್ಳಪ್ಪನವರ ಹೆಸರಿನಲ್ಲಿ ಇರುತ್ತದೆ.ಇವರು ದೂರುದಾರನಿಗೆ ಸೈಟ್ ನೀಡಲು ಒಪ್ಪುವುದಿಲ್ಲ. ನಮ್ಮ ತಂದೆ ಒಪ್ಪುತ್ತಿಲ್ಲ ಎಂಬ ಮಾಹಿತಿ ರಾವಾನಿಸುತ್ತಾರೆ.
ತಕ್ಷಣ ಎಚ್ಚೆತ್ತ ಪೊಲೀಸರು ಆ ಸೈಟ್ ದೂರುದಾರನಿಗೆ ಕೊಡಿಸಲು ಶತಾಯ-ಗತಾಯ ಪ್ರಯತ್ನಿಸುತ್ತಿದ್ದಾರೆ . ನನಗೆ ಮಾರ್ಗದರ್ಶನ ಮಾಡಲು ಬಂದ ನನ್ನ ಸ್ನೇಹಿತನಿಗೂ ಠಾಣೆ ಕರೆಸಿ ಕೂರಿಸುತ್ತಾರೆ. ತಡರಾತ್ರಿಯ ವರೆಗೂ ಪೋಲೀಸರು -ದೂರುದಾರರು ನನ್ನುನ್ನು ಹುಡುಕಲು ನನ್ನ ಮನೆ ಸಂಬಂದೀಕರ ಮನೆಗಳನ್ನು ಸುತ್ತುತ್ತಾರೆ. ನಾಗರಾಜು ಅವರ ಕೈ ಗೆ ಸಿಕ್ಕಿದ್ದರೆ ಕಥೆ ಬೇರೆನೇ ಆಗಿರುತ್ತಿತ್ತು ಎಂಬ ಅಂಶವನ್ನು ಕುಟುಂಬ ವರ್ಗ ತಿಳಿಸಿದೆ.
ಪೋಲೀಸರಿಗೂ ಸಿವಿಲ್ ವ್ಯಜ್ಯಕ್ಕೂ ಏನು ಸಂಬಂಧ ಡಾನ್ ಸೀನ ನ ಕುಟುಂಬಕ್ಕೆ ನಿಮ್ಮ ಸೈಟ್ ಬರೆದು ಕೊಡಿ ಇಲ್ಲವಾದರು ನಿಮ್ಮ ಕುಟುಂಬ – ಸಂಬಂದೀಕರನ್ನು ಜೈಲಿಗೆ ಕಳುಹಿಸುತ್ತೇವೆ ನಾವು ಯಾರನ್ನು ಬಿಡುವುದಿಲ್ಲ ಎಂದು ಗೂಂಡಾಗಳ ರೀತಿ ನಮ್ಮ ಕುಟುಂಬಕ್ಕೆ ಪೊಲೀಸರು ದಮ್ಕಿ ಹಾಕುತ್ತಿದ್ದಾರೆ ನಮಗೆ ನ್ಯಾಯ ಕೊಡುವವರು ಯಾರು…?
ದಯಾಮರಣ ಕೋರಲು – ಪಿಡಿಒ – ಇಒ ಕಾರಣ :
ದೂರುದಾರ ಗ್ರಾಮಪಂಚಾಯತಿ ಸದಸ್ಯೆ ಕುಟುಂಬದ ಅಕ್ರಮ ಮತ್ತು ಕಾನೂನು ಬಾಹಿರ ಕೆಲಸಗಳ ಬಗ್ಗೆ ಹಲವಾರು ದೂರುಗಳು ಜಿಲ್ಲಾಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಗೆ ತಲುಪಿವೆ. ಜಿಲ್ಲಾಪಂಚಾಯತಿಯಿಂದ ಕ್ರಮ ಕೈಗೊಳ್ಳುಲು ಪಾವಗಡ ತಾಲ್ಲೂಕು ಪಂಚಾಯತಿ ಇ.ಒ ಜಾನಕೀರಾಮ್ ಗೆ ತಿಳಸಿ ತಿಂಗಳುಗಳೆ ಕಳೆದಿದೆ ಯಾವುದೇ ಪ್ರಯೋಜನವಿಲ್ಲ.
ಪಾವಗಡ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಮ್ ಮತ್ತು ವೈ ಎನ್ ಹೊಸಕೋಟೆ ಪಿ ಡಿ ಒ ಶ್ರೀರಾಮನಾಯಕ್ ಅವರು ಸರ್ಕಾರದ ಸಂಬಂಳ ತೆಗೆದುಕೊಂಡು ಸಾರ್ವಜನಿಕರ ಕೆಲಸ ಸರಿಯಾಗಿ ಮಾಡಿದ್ದರೆ ನಮಗೆ ಈ ಸಮಸ್ಯೆ ಬರುತ್ತಿರಲಿಲ್ಲ. ನಮ್ಮ ನೋವಿಗೆ ಈ ಇಬ್ಬರು ಅಧಿಕಾರಿಗಳೆ ಪ್ರಮುಖ ಕಾರಣ, ಇಂತಹ ಬೇಜವಾಬ್ದಾರಿ ಅಧಿಕಾರಿಗಳು ಕಾರಣ. ತಾಲ್ಲೂಕಿನ ಬಹಳಷ್ಟು ಕುಟುಂಬಗಳು ಸಂಕಷ್ಟ ಎದುರಿಸುವ ಸ್ಥಿತಿ ಬಂದಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಆಗಲೇ ಬೇಕು ಎನ್ನುವುದು ಕುಟುಂಬ ವರ್ಗದ ಆಗ್ರಹ.
ನ್ಯಾಯಕೊಡಿ ಇಲ್ಲ ದಯಾಮರಣ ಕೊಡಿ – ಜಿಲ್ಲಾ ಕಚೇರಿಯ ಮುಂದೆ ಧರಣಿ :
ಡಾನ್ ಸೀನ ನ ಕುಟುಂಬ ಮತ್ತು ವೈ ಎನ್ ಹೊಸಕೋಟೆಯ ಕೆಲ ಪೋಲೀಸರ ಭಯದಿಂದ ನಾವೆಲ್ಲರೂ ಅಜ್ಞಾತ ಸ್ಥಳದಲ್ಲಿದ್ದು ಕೆಲವೇ ಘಂಟೆಗಳಲ್ಲಿ ಸಂಬಂಧ ಪಟ್ಟ ಜಿಲ್ಲೆಯ ಹಿರಿಯ ಅಧಿಕಾರಿಗಳ ಕಚೇರಿಯ ಮುಂದೆ ಧರಣಿ ಕೂಡುತ್ತಿದ್ದೇವೆ. ನ್ಯಾಯಕೊಡಿ ಇಲ್ಲ ದಯಾಮರಣ ಕೊಡಿಸಿ ಕೊನೆಯದಾಗಿ ನಮಗೆ ಉಳಿದಿರುವುದು ಇದು ಒಂದೇ ದಾರಿ ಎಂಬ ಮಾತನ್ನು ನಾಗರಾಜ್ ಅವರ ಮಡದಿ ಅಶ್ವಿನಿ ಯವರು ಸಪ್ತಸ್ವರ ಕ್ಕೆ ತಿಳಿಸಿದ್ದಾರೆ.
ವೈ ಎನ್ ಹೊಸಕೋಟೆ ಪೋಲೀಸ್ ಠಾಣೆಯ ಕೆಲ ಪೋಲೀಸರು ಬಹಳ ವರ್ಷದಿಂದ ಇಲ್ಲೆ ಬೀಡುಬಿಟ್ಟಿದ್ದು ಇವರ ವಸೂಲಿ ಅಡ್ಡಯಾಗಿದೆ ಪೋಲೀಸ್ ಠಾಣೆಯನ್ನು ಪರಿವರ್ತಿಸಿಕೊಂಡಿದ್ದಾರೆ ಇವರು ತಮ್ಮ ಕರ್ತವ್ಯವನ್ನು ನ್ಯಾಯಬದ್ದವಾಗಿ ನಿರ್ವಹಿಸಿದ್ದರೆ ನಾವು ಅಜ್ಞಾತ ಸ್ಥಳದಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾರೆ ನಾಗರಾಜು..
ಪೊಲೀಸ್ ಠಾಣೆಯ ಅಧೋಗತಿ :
ಪೊಲೀಸ್ ಠಾಣೆಯಲ್ಲಿ ದಕ್ಷ ಪೋಲೀಸ್ ಅಧಿಕಾರಿ ಇಲ್ಲದಿರುವುದದೇ ಈ ಎಲ್ಲಾ ಸಮಸ್ಯೆ ಗೆ ಕಾರಣ, ಕೆಲ ಪೋಲೀಸ್ ಪೇದೆಗಳು, ದೆಫೆದಾರ್ ಎ.ಎಸ್ ಏ ಗಳದ್ದೆ ದರ್ಬಾರು.
ವೈ ಎನ್ ಹೊಸಕೋಟೆಯಲ್ಲಿ ಪೋಲೀಸರಿಂದ ಸಾಮಾನ್ಯ ಜನರಿಗೆ ನ್ಯಾಯ ಸಿಗುವ ಲಕ್ಷಣ ಪ್ರಸ್ತುತ ಪರಿಸ್ಥಿತಿಯಲ್ಲಿದೆ. ಏನೇ ತೊಂದರೆಯಾದರು/ ಕಿರುಕುಳನೀಡಿದರು/ ಅನ್ಯಾಯವಾದರು ನ್ಯಾಯ ಕೊಡಿಸಬೇಕಾದ ಸಂವಿಧಾನ ದ ನಾಲ್ಕನೇ ಅಂಗ ದ ಹೆಸರಿನ ಮುಖವಾಡ ದರಿಸಿರುವ ಸ್ಥಳೀಯರು ನ್ಯಾಯಕೊಡಿಸುವುದೇ ಇಲ್ಲ ಕಾರಣ ಬೇರ ವಿಷಯನೇ ಇದೆ….! ಸಾಮಾನ್ಯ ಜನರ ಗೋಳು ಕೇಳುವ ನಾಥನೇ ಇಲ್ಲ….?