ತಾಲೂಕಿನಾದ್ಯಂತ ಸಡಗರದ ಶಿವರಾತ್ರಿ ಆಚರಣೆ.
ಪಾವಗಡ.. ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಸಂಕಾಪುರ ಮಹಾಬಲೇಶ್ವರ, ನಲಗಾನ ಹಳ್ಳಿಯ ನಂಜುಂಡೇಶ್ವರ, ವೆಂಕಟಾಪುರದ ಶಿವಾಲಯ, ಪಟ್ಟಣದ ಸಿದ್ದರಾಮೇಶ್ವರ ಸ್ವಾಮಿ ದೇವಾಲಯಗಳಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಶಿವಲಿಂಗಕ್ಕೆ ಅಭಿಷೇಕ, ಕುಂಕುಮಾರ್ಚನೆ, ಮಾಡುವ ಮೂಲಕ ಸಂಭ್ರದಿಂದ ಶಿವರಾತ್ರಿ ಆಚರಿಸಲಾಯಿತು.
ಇಂದು ಮುಂಜಾನೆಯಿಂದಲೇ ಶಿವಲಿಂಗಕ್ಕೆ, ಕ್ಷೀರಾಭಿಷೇಕ, ಗಂಗಾಭಿಷೇಕ, ಕುಂಕುಮಾರ್ಚನೆ ಮಾಡಿ, ಬಿಲ್ವಪತ್ರೆ ಹಾಗೂ ಹಲವಾರು ವಿವಿಧ ಬಗೆಯ ಹೂಗಳಿಂದ ಶಿವಲಿಂಗವನ್ನು ಅಲಂಕರಿಸಿದ್ದು ವಿಶೇಷವಾಗಿತ್ತು.
ಕೋವಿಡ್ ನಿಂದ ಕಳೆದೆರಡು ವರ್ಷಗಳಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ನಿಷೇಧವಿದ್ದು, ಸದ್ಯ ಕೋವಿಡ್ ನಿಯಮಗಳು ತೆರವಾದ ಹಿನ್ನೆಲೆ ದೇವಸ್ಥಾನದ ಆಡಳಿತ ಮಂಡಳಿಗಳು ಭಕ್ತರಿಗೆ ಅವಕಾಶ ನೀಡಿದೆ, ಶಿವರಾತ್ರಿ ಹಬ್ಬದ ಪ್ರಯುಕ್ತ ಶೈವ ದೇವಾಲಯಗಳೆಲ್ಲವೂ ಭಕ್ತ ಸಾಗರದಿಂದ ತುಂಬಿತ್ತು, ಎಲ್ಲಿ ನೋಡಿದರು ಓಂ ನಮಃ ಶಿವಾಯ ಎಂಬ ನಾಮಸ್ಮರಣ ಸಾಮಾನ್ಯವಾಗಿತ್ತು.
ಶಿವರಾತ್ರಿ ಪ್ರಯುಕ್ತ ಹಲವು ಶೈವ ದೇವಾಲಯಗಳಲ್ಲಿ ಜಾಗರಣೆಯ ಹಿನ್ನೆಲೆ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು.
ಪಾವಗಡದ ರೋಟರಿ ಕ್ಲಬ್ ವತಿಯಿಂದ ಟೌನಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಜಾಗರಣೆ ಇರುವ ಭಕ್ತಾದಿಗಳಿಗೆ ಅನುಕೂಲವಾಗಿತ್ತು.
ಪಾವಗಡ ಟೌನಿನ ಗೌಡೇಟಿ ರಾಧಮ್ಮ ಹತ್ತು ಸಾವಿರ ಶಿವಲಿಂಗಗಳನ್ನು ತಯಾರಿಸಿ ಪೂಜಿಸಿದ್ದು ವಿಶೇಷವಾಗಿತ್ತು
ವರದಿ: ಶ್ರೀನಿವಾಸುಲು ಎ.