IMG 20240403 WA0003

ಪಾವಗಡ : ಎರಡು ಬಸ್ ಗಳ‌ ನಡುವೆ ಮುಖಾ ಮುಖಿ ಡಿಕ್ಕಿ…!

DISTRICT NEWS ತುಮಕೂರು

ಕೋಟಗುಡ್ಡ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ, ಚಾಲಕನ ಸ್ಥಿತಿ ಗಂಭೀರ

ಪಾವಗಡ: ಬುಧವಾರ ಬೆಳಗ್ಗೆ ಸುಮಾರು 7:30ರ ಸಮಯದಲ್ಲಿ ಪಾವಗಡ ಪಟ್ಟಣದಿಂದ ಚಿತ್ರದುರ್ಗದ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದ ಖಾಸಗಿ ಬಸ್ ಮತ್ತು  ಪಾವಗಡದ ಕಡೆ ಬರುತ್ತಿದ್ದ ಕೆಎಸ್ಆರ್ಟಿಸಿಬಸ್ ಗಳ  ನಡುವೆ ಅಪಘಾತ ‌ಸಂಭವಿಸಿದೆ.

ಕೋಟಗುಡ್ಡ ಗ್ರಾಮದ ಎಸ್ ಬಿ ಐ ಬ್ಯಾಂಕ್ ಸಮೀಪದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಕೆಎಸ್ಆರ್ಟಿಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ

ಕೊಟ್ಟಗುಟ್ಟ ಗ್ರಾಮದ ಎಸ್ ಬಿ ಐ ಬ್ಯಾಂಕ್ ಬಳಿ ಎರಡು ಬಸ್ಗಗಳು ಬಂದ ತಕ್ಷಣ ನಿಯಂತ್ರಣ ತಪ್ಪಿ ಮುಖಮುಖಿ ಡಿಕ್ಕಿಯಾಗಿವೆ, ಈ ಸಂದರ್ಭದಲ್ಲಿ ಎರಡು ಬಸ್ ಗಳು ಮುಂಭಾಗದಲ್ಲಿರುವ ಗಾಜು ಪುಡಿಪುಡಿ ಆಗಿದೆ

ಕೆಎಸ್ಆರ್ಟಿಸಿ ಬಸ್ ನಲ್ಲಿದ್ದ ಒಂದಷ್ಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆIMG 20240403 WA0000

ಅಂಬುಲೆನ್ಸ್ ಗಾಗಿ ಪರದಾಡಿದ ಜನರು

ಈ  ಘಟನೆ ಸಂಭವಿಸಿ ಸುಮಾರು 30 ನಿಮಿಷಗಳಾದರೂ ಸ್ಥಳಕ್ಕೆ ಆಂಬುಲೆನ್ಸ್ ಬಾರದ ಕಾರಣ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ,

ಕೋಟಗುಡ್ಡ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಇಲ್ಲಿನ ಆಂಬುಲೆನ್ಸ್ ಬೇರೊಂದು ಕಡೆಗೆ ತೆರೆಳಿದೆ  ಇಂತಹ ತುರ್ತು ಪರಿಸ್ಥಿತಿಗಳಲ್ಲಿ ಆಂಬುಲೆನ್ಸ್ ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ ಮತ್ತಷ್ಟು ಆಂಬುಲೆನ್ಸ್ ಗಳ ವ್ಯವಸ್ಥೆಯನ್ನು ಮಾಡಬೇಕು ಎಂದು  ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ : ನಂದೀಶ ನಾಯ್ಜ