IMG 20260311 WA0040 scaled

ಪಾವಗಡ : ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ದೇಶ ಸುಭದ್ರ…..!

DISTRICT NEWS ತುಮಕೂರು

 

ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ದೇಶ ಸುಭದ್ರ. ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ.

ಪಾವಗಡ: ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂವಿಧಾನದ 15ರ ಅನುಸೂಚಿಯಲ್ಲಿ ತಿಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಬುಧವಾರ ತಾಲ್ಲೂಕು ಸಾವಿತ್ರಿಬಾಯಿ ಫುಲೆ ಸಂಘದ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೆಣ್ಣು ಮತ್ತು ಗಂಡು ಗಾಡಿಯ ಎರಡು ಚಕ್ರದ ರೀತಿ ಸಮಾನ ರೀತಿಯಲ್ಲಿ ಚಲಿಸಬೇಕು ಒಂದು ಚಕ್ರ ವ್ಯತ್ಯಾಸವಾದರೂ ಸಂಸಾರದಲ್ಲಿ ಬಿರುಕು ಉಂಟಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ ಎಂದರು.

ಭಾರತ ಸೇರಿದಂತೆ ಪ್ರತಿಯೊಂದು ದೇಶದಲ್ಲಿಯೂ ಹೆಣ್ಣು ತುಳಿತಕ್ಕೆ ಒಳಗಾಗುತ್ತಿದ್ದಾಳೆ, ಹೆಣ್ಣು ಮಕ್ಕಳ ಸಮಾನತೆಗೆ ಸಂಬಂಧಿಸಿದ ಕೂಗು ಪ್ರಪಂಚದಾದ್ಯಂತ ಕೇಳಿಸುತ್ತಿದೆ ಎಂದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ ಸಾವಿತ್ರಿಬಾಯಿ ಫುಲೆ, ಬಡ ರೋಗಿಗಳ ಪಾಲಿಗೆ ತಾಯಿಯಾದ ಮದರ್ ತೆರೇಸಾ, ಆಕಾಶಯಾನದಲ್ಲಿ ಹೆಸರು ಪಡೆದ ಸುನಿತಾ ವಿಲಿಯಮ್ಸ್ ಕಲ್ಪನಾ ಚಾವ್ಲಾ ನಮಗೆಲ್ಲರಿಗೂ ಆದರ್ಶವಾದ ಮಹಿಳೆಯರೆಂದರು.

ನವ ಸಮಾಜದ ನಿರ್ಮಾಣದಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಎನ್‌.ಪಿ.ಎಸ್ ಶಿಕ್ಷಕರಸಂಘ, ಜಿ.ಪಿ.ಟಿ ಶಿಕ್ಷಕರ ಸಂಘ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, , ಬಿ ಆರ್ ಸಿ ವೆಂಕಟೇಶ್ ಜಿ, ಸಾವಿತ್ರಿಬಾಯಿ ಸಂಘದ ಅಧ್ಯಕ್ಷೆ ದುರ್ಗಮ್ಮ, ಇ ಸಿ ಓ ವೇಣುಗೋಪಾಲ್ ರೆಡ್ಡಿ, ಮಂಜುಳಾ, ಲಕ್ಷ್ಮಿ ದೇವಿ, ನಾಗೇಂದ್ರ, ಬೊಮ್ಮಯ್ಯ, ನಾಗವೇಣಿ, ಸಾವಿತ್ರಮ್ಮ, ರಂಗಯ್ಯ, ಮಾರುತೇಶ್ ಗಂಗಾಧರ್ ಮುಂತಾದವರು ಹಾಜರಿದ್ದರು

ವರದಿ : ಶ್ರೀನಿವಾಸಲು ಎ