IMG 20260311 WA0037

ಪಾವಗಡ : ದಾಳಿಂಬೆ ತೋಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು….!

DISTRICT NEWS ತುಮಕೂರು

ದಾಳಿಂಬೆ ತೋಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು.

ಪಾವಗಡ: ಕಿಡಿಗೇಡಿಗಳು ದಾಳಿಂಬೆ ತೋಟಕ್ಕೆ ಬೆಂಕಿ ಹಚ್ಚಿದ ಪರಿಣಾಮ 12 ಎಕರೆ ಪ್ರದೇಶದಲ್ಲಿ ದ್ದ ದಾಳಿಂಬೆ ತೋಟ ಸುಟ್ಟು ಬಸ್ಮವಾಗಿರುವ ಘಟನೆ ತಾಲ್ಲೂಕಿನ ತಾಳೆಮರದಲಿ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.

ತಾಳೇಮರದಹಳ್ಳಿ ಗ್ರಾಮದ ರೈತ ಹರಿ ಕುಮಾರ್ ಎನ್ನುವವರು ತಾಳೆಮರದಹಳ್ಳಿ-ಕಡಪಲಕೆರೆ ಬಳಿಇರುವ 12 ಎಕರೆಯಲ್ಲಿ ದಾಳಿಂಬೆ ಬೆಳೆ ಹಾಕಿದ್ದು, ಯಾರೋ ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಹಚ್ಚಿದ ಪರಿಣಾಮ
ಫಸಲಿಗೆ ಬಂದಿದ್ದ ದಾಳಿಂಬೆ ಬೆಳೆ ಮತ್ತು ತೋಟಕ್ಕೆ ಅಳವಡಿಸಿದ್ದ ಹನಿ ನೀರಾವರಿ ಸಲಕರಣೆಗಳು, ಪೈಪ್ ಗಳು, ಗಿಡ, ಮರಗಳು ಸುಟ್ಟು ಹೋಗಿ ಸುಮಾರು 80 ಲಕ್ಷ ರೂ ನಷ್ಟವಾಗಿರುವುದಾಗಿದೆ ಎಂದು ಅಂದಾಜಿಸಿ ರೈತ ಹರಿ ಕುಮಾರ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಲ ಸೂಲ ಮಾಡಿ ಬೆಳೆಗಳನ್ನು ಇಟ್ಟಿದ್ದ ರೈತನಿಗೆ ನಷ್ಟ ಉಂಟಾಗಿದೆ ಎಂದು ಪೊಲೀಸರು ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಪತ್ತೆ ಹಚ್ಚಿಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ರೈತರು ಆಗ್ರಹಿಸಿದ್ದಾರೆ.