ಭ್ರಷ್ಟಾಚಾರ ಮುಕ್ತ ತಾಲೂಕನ್ನು ಮಾಡಲು.
ಒಮ್ಮೆ ಬಿಜೆಪಿಗೆ ಅವಕಾಶ ನೀಡಿ. ಕೃಷ್ಣ ನಾಯ್ಕ
ಪಾವಗಡ : ತಾಲೂಕಿನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ತಾಲೂಕಿನ ಜನತೆ ಒಮ್ಮೆ ಬಿಜೆಪಿಗೆ ಅವಕಾಶ ನೀಡಬೇಕೆಂದು. ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ ಮನವಿ ಮಾಡಿದರು.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ, ಅಸಂಖ್ಯಾತ ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್ ಶೋ ನಡೆಸಿ ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಯಾದ ಅತಿಕ್ ಪಾಷಾ ರವರಿಗೆ ನಾಮಪತ್ರ ಸಲ್ಲಿಸಿದರು.
ಡಾಕ್ಟರ್ ವೆಂಕಟರಾಮಯ್ಯ, ಡಾಕ್ಟರ್ ಚಕ್ಕರ್ ರೆಡ್ಡಿ, ರವಿಶಂಕರ್ ನಾಯ್ಕ, ಕಲಾವತಿ ಕೃಷ್ಣ ನಾಯ್ಕ ನಾಮಪತ್ರ ಸಲ್ಲಿಸಲು ಸಾತ್ ನೀಡಿದರು.
ಮೆರವಣಿಗೆಯಲ್ಲಿ ಸಂಖ್ಯಾತ ಕಾರ್ಯಕರ್ತರನ್ನು ಉದ್ದೇಶಿಸಿ ಡಾಕ್ಟರ್ ಚಕ್ಕರ್ ರೆಡ್ಡಿ, ಮಾತನಾಡಿ,
ಕೋವಿಡ್ ಸಂಕಷ್ಟ ನಿವಾರಣೆಗೆ ಕೇಂದ್ರ- ರಾಜ್ಯ ಸರ್ಕಾರಗಳ ಕಾರ್ಯವೈಕರಿ ಶ್ಲಾಘನೀಯವೆಂದರು.
ದೇಶದ ಮತ್ತು ರಾಜ್ಯದ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ಪಟ್ಟಣದ ಕೃಷಿ ಮಾರುಕಟ್ಟೆ ಕೇಂದ್ರದಿಂದ
ಶನಿಮಹಾತ್ಮ ವೃತ್ತದವರೆಗಿನ ರಸ್ತೆ ಮಹಿಳಾ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿತ್ತು,
ಪುರುಷ ಕಾರ್ಯಕರ್ತರಿಗೆ ಸಮಾನ ರೀತಿಯಲ್ಲಿ ಮಹಿಳಾ ಕಾರ್ಯಕರ್ತರು ನೃತ್ಯ ಮಾಡಿದರು. ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದರು,
ರಸ್ತೆಉದ್ಧಕ್ಕೂ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಜೈಕಾರದ ಘೋಷಣೆ ಕೂಗಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ ಮಂಜಣ್ಣ, ಬಿಜೆಪಿ ಚುನಾವಣಾ ಪ್ರಭಾರಿ ಗಜೇಂದ್ರ ಸಿಂಗ್, ತಾಲೂಕು ಮಂಡಲ ಅಧ್ಯಕ್ಷ ರವಿಶಂಕರ್ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ್, ಬಿಜೆಪಿ ಕೋರ್ ಕಮಿಟಿ ಸದಸ್ಯ ಡಾಕ್ಟರ್ ವೆಂಕಟ ರಾಮಯ್ಯ, ಡಾಕ್ಟರ್ ಚಕ್ಕರ್ ರೆಡ್ಡಿ, ಡಾಕ್ಟರ್ ಶಶಿಕಿರಣ್, ತಾಲೂಕು ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಜಿ.ಟಿ ಗಿರೀಶ್ , ಪುರಸಭೆಯ ನಾಮಿನಿ ಸದಸ್ಯರಾದ ಲೋಕೇಶ್ ರಾವ್, ಶೇಖರ್ ಬಾಬು, ಪ್ರಸನ್ನ, ಗೋಲ್ಡನ್ ಮಂಜು ಮತ್ತು ಹಲವು ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ. ಶ್ರೀನಿವಾಸಲು.ಎ