ಪಾವಗಡ : ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರ ಜಯಂತಿ, ವೈಶಾಖ ಶುದ್ಧ ತದಿಗೆ 23- 04-2023 ರಂದು ಬಂದಿದೆ. ಬಸವಜಯಂತಿಯನ್ನು ಆಚರಿಸಲು ಪಾವಗಡ ತಾಲ್ಲೂಕಿನ ವೀರಶೈವ- ಲಿಂಗಾಯತ ಸಮಾಜದ ಕುಲಬಾಂಧವರು ನಿರ್ಧರಿಸಿದ್ದಾರೆ.
ಬೂದಿ ಬೆಟ್ಟದಲ್ಲಿ ಅದ್ದೂರಿ ಕಾರ್ಯಕ್ರಮ
ವೈ ಎನ್ ಹೊಸಕೋಟೆ ಹೋಬಳಿ ಬೂದಿಬೆಟ್ಟ ಗ್ರಾಮದಲ್ಲಿರುವ ವೀರಶೈವ – ಲಿಂಗಾಯತ ಸಮಾಜದ ಶ್ರೀ ಉಮಾಮಹೇಶ್ವರ ಟ್ರಸ್ಟ್ ವತಿಯಿಂದ ಅದ್ದೂರಿ ಯಾಗಿ ಬಸವಜಯಂತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೂದಿಬೆಟ್ಟ ಗ್ರಾಮದ ಶರಣ ಸಂತೋಷ್ ತಿಳಿಸಿದ್ದಾರೆ.
ಏಪ್ರಿಲ್ 23 ರಂದು ಮುಂಜಾನೆ 6 ರಿಂದ 10 ಗಂಟೆಯ ವರೆಗೆ ಪೂಜಾ ಕಾರ್ಯಕ್ರಮ ಗಳು ನಡೆಯಲಿದ್ದು. ಸಂಜೆ 3 ಗಂಟೆಯಿಂದ ಊರಿನ ಪ್ರಮಖ ಬೀದಿಗಳಲ್ಲಿ ಬಸವಣ್ಣನವರ ಮೂರ್ತಿ ಜೊತೆಗೆ ವೀರಗಾಸೆ , ವಾದ್ಯ ಗಳೊಂದಿಗೆ ಮೆರವಣಿಗೆ ನಡೆಯಲಿದೆ.ಬೆಳಿಗ್ಗೆ 10 ಗಂಟೆಯಿಂದ ಸಂಜೆ 3 ರ ವರೆಗು ಪ್ರಸಾದ ವಿನಿಯೋಗ ಮಾಡಲಾಗುವುದು ಎಂದರು.
ವೈಎನ್ ಹೊಸಕೋಟೆ – ಬಸವ ಜಯಂತಿ
ವೈ ಎನ್ ಹೊಸಕೋಟೆ ಪಟ್ಟಣ ದಲ್ಲಿ ಮೇ 1ರಂದು ಅದ್ದೂರಿಯಾಗಿ ಬಸವಜಯಂತಿ ಅಚರಿಸಲು ಹೋಬಳಿಯ ಎಲ್ಲಾ ಗ್ರಾಮಗಳ ವೀರಶೈವ- ಲಿಂಗಾಯತ ಸಮುದಾಯದ ಪ್ರಮುಖರು ನಿರ್ಧರಿಸಿದ್ದಾರೆ.
ಕಾರ್ಯಕ್ರಮದ ವಿವರ
ಮೇ 1 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ದಿಂದ ಅಲಂಕೃತ ಗೊಂಡ ಶ್ರೀ ಬಸವಣ್ಣ ನವರ ಪ್ರತಿಮೆಯನ್ನು ಬೆಳ್ಳಿರಥ ದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವದು .ನಂತರ ಮಹಾಮಂಗಳಾರತಿ, ಬಸವಣ್ಣ ನವರ ಬಗ್ಗೆ ಪ್ರವಚನ ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ ಇರಲಿದೆ ಪಾವಗಡ ತಾಲ್ಲೂಕಿನ ಎಲ್ಲಾ ವೀರಶೈವ- ಲಿಂಗಾಯತ ಸಮಾಜದ ಶರಣ- ಶರಣೆಯರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರಲ್ಕಿ ಒಬ್ಬರಾದ ಮಲ್ಲಿಕಾರ್ಜುನಯ್ಯನವರು ತಿಳಿಸಿದ್ದಾರೆ