IMG 20220725 WA0007

ಪಾವಗಡ: ಖಾಸಗಿ‌ ಬದಕನ್ನು ಪ್ರಶ್ನಿಸುವುದು ಎಷ್ಟು‌ ಸರಿ….!

DISTRICT NEWS ತುಮಕೂರು

ಘಟನೆಯ ವಿಶ್ಲೇಷಣಾ ವರದಿ

ಪಾವಗಡ: ಭಾರತದಂತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ಬದುಕನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ, ನಮ್ಮ ಸಂವಿಧಾನ ವೇ ಸ್ವತಂತ್ರ ವಾಗಿ ಬದುಕುವ- ಜೀವನ ಸಾಗಿಸುನ ಹಕ್ಕನ್ನು ನೀಡಿದೆ.

ಕೆಲವು ಮಾಧ್ಯಮ ಗಳು‌ ಪತ್ರಿಕಾ ದರ್ಮ‌ ಪಾಲಿಸುತ್ತಿಲ್ಲ ಎನ್ನುವುದಕ್ಕೆ ಪಾವಗಡ‌ ಪುರಸಭೆ ಸದಸ್ಯರ ಮೋಜು- ಮಸ್ತಿ ಸುದ್ದಿ ಪ್ರಸಾರ ಮಾಡಿರುವುದೆ ಸಾಕ್ಷಿ. ಪತ್ರಿಕೋದ್ಯಮ ಎತ್ತ‌ಸಾಗುತ್ತಿದೆ‌ ಎಂಬುದಕ್ಕೆ ಇದು ಒಂದು‌ ತಾಜಾ ಉದಾಹರಣೆ.

ಯಾರೇ ವ್ಯಕ್ತಿ ಯಾಗಲಿ ರಾಜಕೀಯ ನಾಯಕರಾಗಲಿ, ಜನಪ್ರತಿನಿಧಿ , ವ್ಯಾಪಾರಸ್ಥರು, ಸರ್ಕಾರಿ ನೌಕರು ಯಾರೇ ಇರಲಿ ಅವರಿಗೂ ಖಾಸಗಿ ಜೀವನ ಎಂಬುದು ಇರುತ್ತೆ ಅದರ ವಿಡಿಯೋ, ಫೋಟೋ ತೆಗೆದು ಅವರ‌ ತೇಜೊವಧೆ ಮಾಡುವುದು‌ ಕಾನೂನಿನ ಪ್ರಕಾರ ಅಪರಾಧ.

ಒಂದು ಸುದ್ದಿಯನ್ನು‌ ಪ್ರಸಾರ‌ ಮಾಡಬೇಕೆಂದಾಗ ಎರಡು ಕಡೆಯವರನ್ನು ಸಂಪರ್ಕಿಸಿ ಸ್ಪಷ್ಟನೆ ಗಳನ್ನು ಪಡೆದು ಸುದ್ದಿ ಮಾಡಬೇಕು. ಚಾನಲ್ ಗಳು ಟಿ ಆರ್ ಪಿ ಗಾಗಿ ಸುದ್ದಿ ಯೇ ಅಲ್ಲದನ್ನು ವೈಭವೀಕರಿಸಿ ಬಿತ್ತರಿಸುವ ಚಾಳಿಯನ್ನು ಕೆಲ ಟಿ ವಿ ಚಾನಲ್ ಗಳ ಪ್ರತಿದಿನದ ಕಸುಬಾಗಿ ಮಾಡಿಕೊಂಡಿವೆ..

IMG 20220725 WA0008

ಪಾವಗಡ ಪುರಸಭೆ ಸದಸ್ಯರ‌ ಖಾಸಗಿ ಬದುಕನ್ನು ಪ್ರಶ್ನಿಸುತ್ತಿರುವ ಕೆಲ ವ್ಯಕ್ತಿಗಳು‌. ಪುರಸಭೆ ವ್ಯಾಪ್ತಿಯಲ್ಲಿ ನಿಜಕ್ಕೂ ಭ್ರಷ್ಟಾಚಾರ ನಡೆದಿದ್ದರೆ, ದಾಖಲೆಗಳಿದ್ದರೆ ಅದನ್ನು ಪ್ರಶ್ನಿಸಲು‌ ನಮಗೆ ಹಲವಾರು ತನಿಖಾ‌ ಏಜನ್ಸಿಸಿಗಳು – ನ್ಯಾಯಾಲಯಗಳು ಇವೆ ಅಲ್ಲಿ ಪ್ರಶ್ನಿಸಬಹುದು. ಚುನಾವಣೆ ಬರುತ್ತಿದೆ ಎಂಬ ಕಾರಣಕ್ಜೆ‌, ರಾಜಕೀಯ ಲಾಭಕ್ಕಾಗಿ ಈ ರೀತಿ ಸುದ್ದಿಗಳನ್ನು ಪ್ಲಾಂಟ್ ಮಾಡಿಸಿದರೆ ನಂಬುವಷ್ಟು ಜನರು ಮೂರ್ಖರಾ….?

ಪುರಸಭಾ ಸದಸ್ಯರ ಸ್ಪಷ್ಟೀಕರಣ

ಶನಿವಾರ ಮತ್ತು ಭಾನುವಾರ ಸರ್ಕಾರಿ ರಜಾದಿನ‌ ವಾದ್ದರಿಂದ‌ ನಾವು ಮತ್ತು‌ ನಮ್ಮ ಸ್ನೇಹಿತರು ಸೇರಿ ಶಿವಮೊಗ್ಗ ಸಮೀಪದ ಜೋಗ್ ಫಾಲ್ಸ್ ಗೆ ಪ್ರವಾಸ ಹೋಗಿದ್ದೆವು. ಇದು ನಮ್ಮ ಖಾಸಗಿ ಪ್ರವಾಸ ಇದಕ್ಜು ಪುರಸಭೆ ಗು ಸಂಬಂಧವಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

ಪಾವಗಡ ಪಟ್ಟಣದಲ್ಲಿ ಪ್ರಕೃತಿ ವಿಕೋಪವಾಗಿಲ್ಲ, ಯಾವುದೇ ಅಚಾತುರ್ಯ ನಡೆದಿಲ್ಲ ಸಾರ್ವಜನಿಕರ ಜೀವನ ಎಂದಿನಂತೆ ಸಹಜವಾಗಿ ನಡೆದು ಹೋಗುತ್ತಿರುವಾಗ ಸುಕಾ ಸುಮ್ಮನೆ ಪುರಸಭೆ ಸದಸ್ಯರ‌ ಖಾಸಗಿ ಜೀವನ ಪ್ರಶ್ನಿಸಿ ಸುದ್ದಿ ಮಾಡಿಸುವು ಎಷ್ಟು ಸಿರಿ ….? ಪ್ರಜ್ಞಾವಂತ ಸಾರ್ವಜನಿಕರು ಇಂತಹ ಘಟನೆಗಳನ್ನ ಖಂಡಿಸಬೇಕಿದೆ ಅಲ್ಲವಾ….?