IMG 20220709 114830 scaled

ಒಂದನೇ ತರಗತಿ ದಾಖಲಾತಿ ಗೆ 6 ವರ್ಷ ನಿಗದಿ…!

Genaral STATE

ಒಂದನೇ ತರಗತಿಗೆ ದಾಖಲಿಸಲು ಜೂ. 1ಕ್ಕೆ ಅನ್ವಯವಾಗುವಂತೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ಆದೇಶ ಹೊರಡಿಸಿದೆ.ಶಾಲಾ ಪ್ರವೇಶಾತಿ ನಿಯಮದಲ್ಲಿ ಪ್ರಮುಖ ಬದಲಾವಣೆ ತಂದಿದೆ.

IMG 20220727 WA0017
ಆದೇಶ

2016-17ನೇ ಶೈಕ್ಷಣಿಕ ಸಾಲಿನಲ್ಲಿ ಆರ್‌ಟಿಇ ಕಾಯ್ದೆ 2009ರ ಸೆಕ್ಷನ್‌ 12 (1) (ಸಿ) ಪ್ರಕಾರ, ಎಲ್‌ಕೆಜಿ ಪ್ರವೇಶಕ್ಕೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು ಹಾಗೂ 1ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ವಯೋಮಿತಿ ನಿಗದಿ ಮಾಡಲಾಗಿತ್ತು.

2018ರಲ್ಲಿ ವಯೋಮಿತಿ ಸಡಿಲಿಸಿದ್ದ ಸರಕಾರ 1ನೇ ತರಗತಿಗೆ ದಾಖಲಿಸಲು ಕನಿಷ್ಠ 5 ವರ್ಷ 5 ತಿಂಗಳಿನಿಂದ ಗರಿಷ್ಠ 7 ವರ್ಷದ ವಯೋಮಿತಿಯನ್ನು ನಿಗದಿ ಮಾಡಿತ್ತು. ಈಗ ಹೊಸ ಆದೇಶ ಹೊರಡಿಸಿದೆ.

IMG 20220727 WA0016
ಆದೇಶ

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಬಹುತೇಕ ಶಾಲೆಗಳಲ್ಲಿ ದಾಖಲಾತಿಯು ಮುಕ್ತಾಯ ಅಂತದಲ್ಲಿದೆ.. ಆದ್ದರಿಂದ ಮುಂದಿನ ವರ್ಷದಿಂದ ಈ ಆದೇಶ ಅನ್ವಯವಾಗಲಿದೆ. ಎಂದು ಶಿಕ್ಷಣ ಇಲಾಖೆ ತಿಳಿಸಿದೆ.