ತಾಲ್ಲೂಕನ್ನೂ ಕಾಂಗ್ರೆಸ್ ಮುಕ್ತವಾಗಿಸಿ, ಆರೋಗ್ಯ ಸಚಿವ ಡಾ. ಸುಧಾಕರ್ ಕರೆ
ಪಾವಗಡ: ದೇಶದಲ್ಲಿ ಹಲವಾರು ರಾಜ್ಯಗಳು ಕಾಂಗ್ರೆಸ್ ಮುಕ್ತವಾಗಿವೆ. ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಪಾವಗಡ ತಾಲೂಕು ಸಹ ಕಾಂಗ್ರೆಸ್ ಮುಕ್ತವಾಗಬೇಕೆಂದರು. ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರ ಕೊಡುಗೆ ಏನು ಎಂಬುದು ಜನರು ಚೆನ್ನಾಗಿ ಅರೆತಿದ್ದಾರೆ. ಆದ್ದರಿಂದ ಉತ್ತಮ ಆಡಳಿತಕ್ಕಾಗಿ ಜನರು ತಾಲೂಕಿನಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಬೇಕೆಂದು ಆರೋಗ್ಯ ಸಚಿವ ಸುಧಾಕರ್ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ತಾಲ್ಲೂಕು ಮಟ್ಟದ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಕೇವಲ ಭರವಸೆಗಳನ್ನು ನೀಡುವ ಪಕ್ಷವಾಗಿದೆ ಅಷ್ಟೇ. ಹೊರೆತು ಜನರಿಗೆ ಯಾವುದೇ ಅನುಕೂಲ ಮಾಡುವ ಪಕ್ಷವಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆ ಮಾಡುವ ಮೂಲಕ ವ್ಯಕ್ತಿಯನ್ನು ವಿಜೃಂಭಿಸಲು ಹೊರಟಿದೆ. ಆದರೆ ಬಿಜೆಪಿ ಜನರಿಗಾಗಿ ಜನೋತ್ಸವ ಮಾಡುತ್ತಿದೆ. ಎಂದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಾಮರ್ಥ್ಯವೇನು ಎಂದು ಎಂಬುದು ವಿರೋಧಪಕ್ಷಗಳಿಗೆ ತಿಳಿಸಿಕೊಡಬೇಕು ಎಂದರು.
ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರಗಳು ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಎಂದರು. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಆಯುಶ್ ಮಾನ್ ಭಾರತ್ ನಿಂದ ಸಾಕಷ್ಟು ಜನ ಅನುಕೂಲ ಪಡೆದಿದ್ದಾರೆ ಎಂದರು .
ಕಾರ್ಯಕ್ರಮದಲ್ಲಿ ತಾಲ್ಲೂಕು ಘಟಕದ ಅಧ್ಯ.ಕ್ಷ ರವಿಶಂಕರನಾಯ್ಕ, ಮಂಜಣ್ಣ, ಕೆ. ಎಸ್ ನವೀನ್ ಕುಮಾರ್, ಕೃಷ್ಣಾನಾಯ್ಕ, ಪ್ರಧಾನ ಕಾರ್ಯದರ್ಶಿ ಅಶೋಕ್, ಕೊತ್ತೂರು ಹನುಮಂತರಾಯ, ಡಾ.ಜಿ.ವೆಂಕಟರಾಮಯ್ಯ, ರವಿ, ಬ್ಯಾಡನೂರು ಶಿವು, ನವೀನ್, ಶೇಖರ್ ಬಾಬು ಉಪಸ್ಥಿತರಿದ್ದರು.