IMG 20211028 WA0019

ಪಾವಗಡ: ಕನ್ನಡ ಗೀತಗಾಯನ…..!

DISTRICT NEWS ತುಮಕೂರು

ವೈ ಎನ್.ಹೊಸಕೋಟೆಯಲ್ಲಿ ಕನ್ನಡ ಗೀತ ಗಾಯನ

ಪಾವಗಡ ತಾಲೂಕು ವೈ ಎನ್.ಹೊಸಕೋಟೆ ಗ್ರಾಮದಲ್ಲಿ ಲಕ್ಷ ಕಂಠ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಆಯೋಜನೆ ಮಾಡಿದ್ದು. ಈ ಕಾರ್ಯಕ್ರಮದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿಗಳಾದ ಶ್ರೀಯುತ ಸೋಮಪ್ಪ ಕಡಕೋಡ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಶ್ರೀಯುತ ಕೃಷ್ಣಮೂರ್ತಿ. ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ. ಶ್ರೀಯುತ ಅಶ್ವಥ್ ನಾರಾಯಣ. ಪಾವಗಡ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಯುತ ಪವನ್ ಕುಮಾರ್ ರೆಡ್ಡಿ. ಬಿ .ಆರ್ .ಪಿ ಮಾರುತೇಶ್ . ಸಿ ಆರ್ ಪಿ ಗಳು. ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿವಿಧ ಶಾಲೆಗಳ ಮುಖ್ಯ ಉಪಾಧ್ಯಾಯರುಗಳು. ಕರ್ನಾಟಕದ ಹೆಮ್ಮೆಯ ಗಾಯಕರಾದ ಕಂಬದ ರಂಗಯ್ಯ ಹಾಗೂಶಾಲೆಗಳ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಬಾರಿಸು ಕನ್ನಡ ಡಿಂಡಿಮ ಎಂಬ ಕನ್ನಡ ಗೀತೆಯನ್ನು ವೇದಿಕೆ ಮೇಲಿದ್ದ ಅಧಿಕಾರಿಗಳು ಸ್ವತಹ ಗಾಯನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಕನ್ನಡದ ನೆಲದ ಬಗ್ಗೆ ಕನ್ನಡ ಭಾಷೆಯ ಬಗ್ಗೆ. ಹೆಚ್ಚಿನ ಒಲವನ್ನು ತೋರಲು ಸಹಾಯಕವಾಯಿತು.ಈ ಕಾರ್ಯಕ್ರಮಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ತಮಗಿರುವ ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ನಾಗಲಮಡಿಕೆಯಲ್ಲಿ ಕನ್ನಡ ಗೀತ ಗಾಯನ

IMG 20211028 WA0021

ಪಾವಗಡ ತಾಲೂಕು ನಾಗಲಮಡಿಕೆ ಗ್ರಾಮದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮವನ್ನು ಜೋಗದ ಸಿರಿ ಬೆಳಕಿನಲ್ಲಿ ಎಂಬ ಕನ್ನಡ ಹಾಡನ್ನು ಸಾಮೂಹಿಕವಾಗಿ ಗಾಯನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜವಾಬ್ದಾರಿಯುತ ಪ್ರಜೆಯಾದ ನಾನು ಕನ್ನಡದಲ್ಲಿ ಮಾತನಾಡುತ್ತೇನೆ. ಕನ್ನಡದಲ್ಲಿ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನು ಬಳಸುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರರಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ.ಬದ್ಧನಾಗಿರುತ್ತೇನೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಕಟ್ಟಾ ನರಸಿಂಹಮೂರ್ತಿಯವರು ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಜಗೋಪಾಲ್ ರಾಜಣ್ಣ ರವಿ ಜಯ ಬಾಯಿ ಅಪ್ಸರ್ ಖಾನ್. ಸ್ವಾ ರಪ್ಪ ನರಸಿಂಹಯ್ಯ ಭಾಗವಹಿಸಿದ್ದರು. ಈ ಕಾರ್ಯಕ್ರಮದಿಂದಾಗಿ ಮಕ್ಕಳಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಒಲವನ್ನು ತೋರಲು ಸಹಾಯಮಾಡಿತು

ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಗಾಯನ

IMG 20211028 WA0022

ಮುರಾರ್ಜಿ ದೇಸಾಯಿ ವಸತಿ ಶಾಲೆ ಕೊಡಿಗೆಹಳ್ಳಿ ಪಾವಗಡ ತಾಲ್ಲೂಕು. ಈ ಶಾಲೆಯಲ್ಲಿ  ಸರ್ಕಾರದ ಆದೇಶದ ಅನ್ವಯ ಲಕ್ಷ ಕಂಠ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಪ್ರಾಂಶುಪಾಲರು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೆ ಎಸ್ ನಿಸಾರ್ ಅಹಮದ್ ರವರ ಜೋಗದ ಸಿರಿ ಬೆಳಕಿನಲ್ಲಿ ಎಂಬ ಕನ್ನಡದ ಹಾಡನ್ನು ಸಾಮೂಹಿಕ ಗಾಯನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಶಿಕ್ಷಕರಾದ ನರಸಿಂಹಮೂರ್ತಿ ಅಶೋಕ್ ನಾಗೇಂದ್ರ ಸುಬ್ರಮಣಿ ರುದ್ರೇಶ್ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಮಾತನಾಡುತ್ತಾ. ಪಾವಗಡ ಗಡಿನಾಡು ಪ್ರದೇಶವಾಗಿದ್ದು. ಪಾವಗಡದಲ್ಲಿ ಹೆಚ್ಚು ಜನ ತೆಲುಗು ಮಾತನಾಡುತ್ತಾರೆ.ಪಾವಗಡದಲ್ಲಿ ಕನ್ನಡವನ್ನು ಉಳಿಸುವುದು ಬೆಳೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಕರ್ತವ್ಯ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 200 ಜನ ವಿದ್ಯಾರ್ಥಿಗಳು ಭಾಗವಹಿಸಿ ತಮಗಿದ್ದ ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ಪಾವಗಡ: ಜ್ಞಾನ ಬೋಧಿನಿ ಶಾಲೆ ಯಲ್ಲಿ  ಕನ್ನಡ ಗಾಯನ

IMG 20211030 WA0008

ಜ್ಞಾನ ಬೋಧಿನಿ ಶಾಲೆ ಪಾವಗಡ ಟೌನ್.  ಲಕ್ಷ ಕಂಠ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಪಾವಗಡ ಟೌನಿನ ಜ್ಞಾನ ಬೋಧಿನಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಕನ್ನಡ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ , ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಯಾದ ಪವಿತ್ರ ಆಚಾರ್. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಸಂಧ್ಯಾರಾಣಿ. ಇತರೆ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಮ್ಮ ಏಳಿಗೆಗಾಗಿಹಲವಾರು ಭಾಷೆಗಳನ್ನು ಕಲಿತರು
ಮಾತೃಭಾಷೆಯಾದ ಕನ್ನಡವನ್ನು ಎಂದಿಗೂ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ತಿಳಿಸಿದರು

ವರದಿ: ಎ ಶ್ರೀನಿವಾಸುಲು