IMG 20260501 WA0003 scaled

BJP : ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡ ಧೀಮಂತ ನಾಯಕ….!

POLATICAL STATE

 

*ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡ ಧೀಮಂತ ನಾಯಕ ಯಡಿಯೂರಪ್ಪ: ಬಸವರಾಜ ಬೊಮ್ಮಾಯಿ*

*ಕಾಂಗ್ರೆಸ್ ನ ಎಲ್ಲ ಗ್ಯಾರೆಂಟಿಗಳನ್ನು ಮೆಟ್ಟಿ ಬಿಜೆಪಿ ಸರ್ಕಾರ ಮಾಡುವ ಮೊದಲನೆ ಹೆಜ್ಜೆ ಅಭಿಮಾನೋತ್ಸವ- :ಬಸವರಾಜ ಬೊಮ್ಮಾಯಿ*

ಹಾವೇರಿ: ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಕೂಡ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಧೀಮಂತ ನಾಯಕರಾಗುತ್ತಾರೆ. ಅವರು ಯಡಿಯೂರಪ್ಪನವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಇದೇ ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ *ಅಭಿಮಾನೋತ್ಸವ* ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು..
ನನ್ನ ನೆಚ್ಚಿನ ನಾಯಕರ ಅಭಿಮಾನೋತ್ಸವ ಹುಟ್ಟಿದಾಗ ಯಾರೂ ನಾಯಕರಾಗುವುದಿಲ್ಲ. ಹುಟ್ಟಿದಾಗ ಕಣ್ಣು ತೆಗೆಯಲು ಬರುವುದಿಲ್ಲ. ಅವರೇಗೆ ನಾಯಕರಾಗುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ಗುರಿ ಸಾಧನೆಯ ಛಲದಿಂದ ನಿರಂತರವಾಗಿ ಜನರ ಜೊತೆಗೆ ಇದ್ದು, ಪರಿಶ್ರಮದ ನಾಯಕರು ಯಾರದರೂ ಇದ್ದರೆ ಅದು ಕರ್ನಾಟಕದ ರಾಜಾ ಹುಲಿ ಯಡಿಯೂರಪ್ಪ ಅವರು ಎಂದರು.

ನಾವೆಲ್ಲ ಸಾರ್ವಜನಿಕ ಜೀವನಕ್ಕೆ ಬಂದಾಗ ನಮ್ಮದೇ ಆದ ಆದರ್ಶಗಳನ್ನು ಇಟ್ಟುಕೊಂಡು ಬಂದಿದ್ದೇವೆ. ನಮ್ಮ ಆದರ್ಶ ಮತ್ತು ಅಧಿಕಾರ ಎರಡರ ನಡುವೆ ಸಂಘರ್ಷ ಇರುತ್ತದೆ. ಆದರ್ಶ ತಾಯಿ ಇದ್ದ ಹಾಗೆ, ಅಧಿಕಾರ ಕಟ್ಟಿಕೊಂಡ ಹೆಂಡತಿ ಇದ್ದ ಹಾಗೇ, ತಾಯಿ ಜನ್ಮ ಕೊಟ್ಟಿದ್ದೇನೆ ನನ್ನ ಮಗ ನನ್ನ ಮಾತು ಕೇಳುತ್ತಾನೆ ಎಂದುಕೊಳ್ಳುತ್ತಾಳೆ. ಹೆಂಡತಿ ನಾನು ಇವನಿಗೊಸ್ಕರ ತವರು ಮನೆ ಬಿಟ್ಟು ಬಂದಿದ್ದೇನೆ ನನ್ನ ಮಾತು ಕೇಳುತ್ತಾನೆ ಎಂದುಕೊಳ್ಳುತ್ತಾಳೆ. ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಕೂಡ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಧೀಮಂತ ನಾಯಕರಾಗುತ್ತಾರೆ. ಅವರು ಯಡಿಯೂರಪ್ಪನವರು ಎಂದು ಹೇಳಿದರು.

ಯಡಿಯೂರಪ್ಪ ಅವರದು ದಣಿವರಿಯದ ಹೋರಾಟ ಹಾವೇರಿಗೆ ಬಂದು ಕಾರ್ಯಕ್ರಮ ಮಾಡಿ, ಬೆಂಗಳೂರಿಗೆ ಹೋಗಿ ಅಲ್ಲೊಂದು ಕಾರ್ಯಕ್ರಮ, ಅಲ್ಲಿಂದ ಬೆಳಗಾವಿಗೆ ಬಂದು ಅಲ್ಲೊಂದು ಕಾರ್ಯಕ್ರಮ ನಿರಂತರ ಓಡಾಟ ಮಾಡುತ್ತಿದ್ದರು. 1994 ರಲ್ಲಿ ಚುನಾವಣೆಯಾಗಿ ಹದಿನೈದು ದಿನ ಕಳೆದಿತ್ತು. ಸರ್ಕಾರ ರಚನೆಯಾಗಿ ಹದಿನೈದು ದಿನ ಕಳೆದಿದರಲಿಲ್ಲ ಯಡಿಯೂರಪ್ಪ ಅವರು ಹರಿಹರದಲ್ಲಿ ರೈತರ ಪರವಾಗಿ ಬೃಹತ್ ಹೋರಾಟ ಮಾಡಿದ್ದರು. ಮೊದಲು ರೈತರ ಪರವಾಗಿ ರಾಜಕಾರಣ ಮಾಡುವ ನಾಯಕರು ಇರಲಿಲ್ಲ. ವಿರೋಧ ಪಕ್ಷದಲ್ಲಿ ಇದ್ದರೂ ಕೂಡ, ಒಬ್ಬರು, ಇಬ್ಬರೇ ಶಾಸಕರು ಇದ್ದರೂ ರೈತರ ಪರ ಹೋರಾಟ ಮಾಡಿ, ಅದನ್ನು ಮುಖ್ಯಮಂತ್ರಿಗಳ ವರೆಗೆ ತೆಗೆದುಕೊಂಡು ಹೋಗಿ ರಾಜ್ಯದಲ್ಲಿ ರೈತರ ಪರ ಹೋರಾಟ ಮಾಡುವ ಆಯಾಮ ತಂದವರು ಯಡಿಯೂರಪ್ಪ ಅವರು ಎಂದು ಹೇಳಿದರು.IMG 20260501 WA0011

*ನೀರಾವರಿಗೆ ಆದ್ಯತೆ*
ಯಾರು ವಿರೋಧ ಪಕ್ಷ ಇದ್ದಾಗ ಹೋರಾಟ ಮಾಡಿದ್ದರೋ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೆ ತರುವ ಪ್ರಯತ್ನ ಮಾಡಿದರು. ಅವರು ಭಾಷಣದಲ್ಲಿ ರೈತ ಮತ್ತೇನು ಕೇಳುವುದಿಲ್ಲ. ಆತನಿಗೆ ನೀರು ಕೊಟ್ಟರೆ ಆತ ಅನ್ನ ಕೊಡುತ್ತಾನೆ. ಅವರು ಮೊದಲು ಅಧಿಕಾರಕ್ಕೆ ಬಂದಾಗ ನಾಲ್ಕು ವರ್ಷದ ಅವಧಿಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದರು. 7.36 ಲಕ್ಷ ಎಕರೆ ಹೊಸದಾಗಿ ನೀರಾವರಿ ಮಾಡಿರುವ ದಾಖಲೆ ಮಾಡಿದರು. ಆ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಯಾವ ಯೋಜನೆ ಆಪೂರ್ಣ ಆಗಿತ್ತೊ ಅದನ್ನು ಪೂರ್ಣ ಮಾಡುವ ಕೆಲಸ ನಾವು ಮಾಡಿದ್ದೇವು. ಅದಕ್ಕೆ ಉದಾಹರಣೆ ತುಂಗಾ ಮೇಲ್ದಂಡೆ ಯೋಜನೆ, ಎಚ್.ಕೆ. ಪಾಟೀಲರು 2002 ರಲ್ಲಿ ಯೋಜನೆ ಮುಗಿಸುವುದಾಗಿ ಹೇಳಿದ್ದರು. ಯಡಿಯೂರಪ್ಪ ಅವರ ಕಾಲದಲ್ಲಿ 2012 ರಲ್ಲಿ ನಾವು ಈ ಯೋಜನೆ ಪೂರ್ಣಗೊಳಿಸಿದೆವು. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ನೀರು ತಂದವರು ನಾವು. ಕೃಷ್ಣಾ ಮೇಲದ್ದಂಡೆ ಯೋಜನೆ ನಾರಾಯಣಪುರ ಬಲದಂಡೆ ಯೋಜನೆಗೆ ನೀರು ತಂದವರು ನಾವು‌ ಕಾವೇರಿ ಕಣಿವೆಯಲ್ಲಿ ಸುಮಾರು 15 ಏತ ನೀರಾವರಿಗಳನ್ನು ನಾವು ಮಾಡಿದ್ದೇವೆ. ರೈತರಿಗಾಗಿ ಹಗಲಿರಳು ಕೆಲಸ ಮಾಡಿದ್ದೇವೆ. 2008 ರಲ್ಲಿ ಅವರು ಸಿಎಂ ಆಗಿದ್ದಾಗ ರೈತರ ಹೆಸರಿನಲ್ಲಿ ಪಮಾಣ ವಚನ ಸ್ವೀಕರಿಸಿ ಸಂಪುಟಕ್ಕೆ ಒಂದು ಫೈಲ್ ತರಿಸಿದರು. ನನ್ನ ಕಡೆಯಿಂದ ಮೊದಲ ನಿರ್ಧಾರ ಓದಿಸಿದರು. ಅದು ರೈತರಿಗೆ 10 ಎಚ್‌ಪಿ ವಿದ್ಯುತ್‌ ಉಚಿತವಾಗಿ ಕೊಡುವ ನಿರ್ಧಾರ ಆಗಿತ್ತು. ಅವರ ಆದರ್ಶದಲ್ಲಿಯೇ ನಾವು ನಡೆಯುತ್ತಿದ್ದೇವೆ ಎಂದು ಹೇಳಿದರು.

*ಮೊದಲ ಹೆಜ್ಜೆ*
ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಅವರ ಮನೆಯಲ್ಲಿ ಗುಜರಾತ್‌ನಲ್ಲಿ ಭೇಟಿಗೆ ಹೋದಾಗ ನಾನು ಯಡಿಯೂರಪ್ಪ ಅವರ ಪಕ್ಷಪಾತಿ ಇದ್ದೇನೆ ಎಂದು ಹೇಳಿದರು. ಯಡಿಯೂರಪ್ಪ ಅವರ ನಡೆ ನುಡಿ ಸಂಘಟನೆಯಿಂದ ಅದನ್ನು ಗಳಿಸಿಕೊಂಡಿದ್ದರು. ಈ ರಾಜ್ಯದ ನೆಲ ಜಲ, ಜನರ ಗೌರವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದು ಯಡಿಯೂರಪ್ಪ ಅವರು. ಈಗ 50 ವರ್ಷದ ಅವರ ಅಭಿಮಾನೋತ್ಸವ ರಾಜಕಾರಣದಲ್ಲಿ 50 ವರ್ಷ ಜೀವಂತವಾಗಿರುವುದೇ ಕಷ್ಟ 1952 ರಲ್ಲಿ ನಮ್ಮ ರಾಜ್ಯ ಆಗಿದೆ. ಬಹಳ ಜನರು ಮಂತ್ರಿಗಳಾಗಿ ಹೋಗಿದ್ದಾರೆ. ಆದರೆ, ಎಂಟತ್ತು ಜನ ಮಂತ್ರಿಗಳು ನೆನಪಿದ್ದಾರೆ. ಮುಖ್ಯಮಂತಿಗಳಲ್ಲಿ ನಿಜಲಿಂಗಪ್ಪ, ದೇವರಾಜ್ ಅರಸು,
ಯಡಿಯೂರಪ್ಪ ಅವರ ಹೆಸರು ನೆನಪಿಗೆ ಬರುತ್ತವೆ. ಅವರು ಈ ರಾಜ್ಯದಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಈಗ ಬಿಜೆಪಿಗೆ ಅವರ ಪ್ರೇರಣೆ, ಶಕ್ತಿ, ಆಶೀರ್ವಾದ ತುಂಬುವ ಅವಶ್ಯಕತೆ ಇದೆ. ಬಹಳ ಒಳ್ಳೆಯ ಮುಹೂರ್ತದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಕಷ್ಟದಲ್ಲಿ ಸಿಲುಕುವ ಸಂದರ್ಭದಲ್ಲಿ ಬಿಜೆಪಿ ಮತ್ತೆ ಪುಟಿದೇಳಲು ಈ ಕಾರ್ಯಕ್ರಮ ನಡೆಯುತ್ತಿದೆ. ರಾಜಕೀಯವಾಗಿ ನಾವು ಕಾಂಗ್ರೆಸ್ ನ ಎಲ್ಲ ವಿಚಾರಧಾರೆಗಳನ್ನು, ಗ್ಯಾರೆಂಟಿಗಳನ್ನು ಮೆಟ್ಟಿ ನಮ್ಮ ಸರ್ಕಾರ ಮಾಡುವಂತ ಮೊದಲನೆ ಹೆಜ್ಜೆ ಈ ಅಭಿಮಾನೋತ್ಸವ. ಯಾವಾಗಲೂ ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕ ಶಕ್ತಿ ತುಂಬಿದೆ. ರಾಜಕೀಯವಾಗಿ ಅತಿ ಹೆಚ್ಚು ಸ್ಥಾನ ಕೊಟ್ಟಿದ್ದು ಉತ್ತರ ಕರ್ನಾಟಕ. ಬಿಜೆಪಿಗೆ ಸ್ಥಾನ ಕಡಿಮೆಯಾದಾಗಲೂ ಉತ್ತರ ಕರ್ನಾಟಕದ ಬಿ.ಸಿ. ಪಾಟೀಲರಂತ ನಾಯಕರಿಂದ ಶಕ್ತಿ ಬಂದಿದೆ. ಮೇ 9 ರಂದು ಹಾವೇರಿ ಜಿಲ್ಲೆಯಿಂದ 1 ಲಕ್ಷ ಜನರನ್ನು ಸೇರಿಸುವ ಪಯತ್ನ ಮಾಡಬೇಕು. ನಮ್ಮ ಅಭಿಮಾನದ ಶಕ್ತಿಯನ್ನು ಮೇ 9 ಕ್ಕೆ ತೋರಿಸೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವರಾದ ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನ, ಡಿ.ಎಂ.ಸಾಲಿ, ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *