IMG 20230422 WA0000

ಪಾವಗಡ:ಜೆ.ಡಿ.ಎಸ್ ಪಕ್ಷದಿಂದ ಮಾತ್ರ ತಾಲೂಕು ಅಭಿವೃದ್ಧಿ ಸಾದ್ಯ..!

DISTRICT NEWS ತುಮಕೂರು

ಜೆ.ಡಿ.ಎಸ್ ಪಕ್ಷದಿಂದ ಮಾತ್ರ ತಾಲೂಕು ಅಭಿವೃದ್ಧಿ ಸಾಧ್ಯ. ತಿಮ್ಮರಾಯಪ್ಪ.
ಪಾವಗಡ : ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷದ ಶ್ರಮವು ಹೆಚ್ಚಿದೆ ಎಂದು, ಮಾಜಿ ಶಾಸಕ ತಿಮ್ಮರಾಯಪ್ಪ ತಿಳಿಸಿದರು.
ಶುಕ್ರವಾರ ಪಟ್ಟಣ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಜೆ.ಡಿ.ಎಸ್ ಪಕ್ಷದ ಎಸ್ ಟಿ ಸಮಾಜದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ತಾನು ಜೆಡಿಎಸ್ ನಿಂದ ಶಾಸಕನಾಗಿ ಆಯ್ಕೆಯಾಗಿದ್ದಾಗ ತಾಲೂಕಿಗೆ ಶಾಲೆಗಳು, ಕಾಲೇಜುಗಳು, ವಸತಿ ನಿಲಯಗಳು, ಕಚೇರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ವಸತಿಗಳು ಹೀಗೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಮುಖಂಡ ಚನ್ನಮಲ್ಲಪ್ಪ ಮಾತನಾಡಿ, ಕಾಂಗ್ರೆಸಿನವರು ನೆನ್ನೆ ಪಳವಳ್ಳಿಯಲ್ಲಿ ಭಾಷಣ ಮಾಡುವ ವೇಳೆ ಚೆನ್ನ ಮಲ್ಲಪ್ಪನವರು ಇಷ್ಟು ದಿನ ಕಾಂಗ್ರೆಸ್ ನಲ್ಲಿ ಅಧಿಕಾರ ಅನುಭವಿಸಿ, ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆಂದು ತಿಳಿಸುತ್ತಾರೆಂದು,
ನಿಜವಾಗಲೂ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದವರು ಈಗಿನ ಶಾಸಕರೆಂದರು.
2008ರಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡದಿದ್ದಾಗ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಪಕ್ಷದ ಕಚೇರಿಯನ್ನು ದ್ವಂಸಗೊಳಿಸಿದರೆಂದರು.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ತಾನು ಕಳೆದುಕೊಂಡಿದ್ದೆ ಹೆಚ್ಚು ಅವರಿಂದ ನನಗೆ ಕಿಂಚಿತ್ತು ಸಹಾಯ ವಾಗಿಲ್ಲವೆಂದರು.
ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರೆ , ಇಲ್ಲವಾದಲ್ಲಿ ಅವರು ರಾಜಕೀಯ ಸನ್ಯಾಸ ತೆಗೆದುಕೊಳ್ಳಬೇಕಿತ್ತು, ಅವರ ಗೆಲುವಿನ ಹಿಂದೆ ತನ್ನ ಶ್ರಮವಿದೆ ಎಂದರು.
ಇನ್ನು ಮೇಲಾದರೂ ಕಾಂಗ್ರೆಸಿನ ಅಭ್ಯರ್ಥಿ ತನ್ನ ವೈಯಕ್ತಿಕ ನಿಂದನೆಯನ್ನು ಬಿಟ್ಟು ಪ್ರಚಾರ ಮಾಡಿಕೊಳ್ಳುವುದು ಉತ್ತಮವೆಂದು ತಿಳಿಸಿದರು.

ಕಾರ್ಯಕ್ರಮದ ಉದ್ದೇಶಿಸಿ, ಆರ್. ಸಿ ಅಂಜಿನಪ್ಪ ಮಾತನಾಡಿ ,
ತಾಲೂಕಿನಲ್ಲಿ 45,000 ಪರಿಶಿಷ್ಟ ಪಂಗಡದ ಜನಾಂಗ ವಿದ್ದು ಅದರಲ್ಲಿ ಶೇಕಡ 75 ಭಾಗದ ಜನರು ಜೆಡಿಎಸ್ ಪರವಿದ್ದಾರೆ ಎಂದರು.
ಕಳೆದ ವರ್ಷ ತಿಮ್ಮರಾಯಪ್ಪ ಕೇವಲ 409 ಮತಗಳ ಅಂತರದಿಂದ ಸೋಲಲು ಅನುಭವಿಸಿದ್ದು, ಈ ಬಾರಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಅಲೆ ಜೋರಾಗಿದ್ದು, ಮೊನ್ನೆ ನಾಮಪತ್ರ ಸಲ್ಲಿಸುವ ವೇಳೆ ವಿರೋಧಿಗಳಿಗೆ ಜೆಡಿಎಸ್ ನ ಶಕ್ತಿ ಏನು ಎಂಬುದು ತಿಳಿದಿದೆ ಎಂದರು.
ಈ ಬಾರಿ 25,000 ವೋಟುಗಳ ಅಂತರದಲ್ಲಿ ತಾಲೂಕಿನಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂದರು.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 9ರಿಂದ 10 ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸುತ್ತದೆ ಎಂದರು.
ತಿಮರಾಯಪ್ಪ ಶಾಸಕರಾಗಿದ್ದಾಗ ತಾಲೂಕಿನ ಅನೇಕ ಸಮಸ್ಯೆಗಳನ್ನು ವಿಧಾನಸೌಧದಲ್ಲಿ ಚರ್ಚಿಸಿದರು ಎಂದರು.
ಕಾಂಗ್ರೆಸಿನವರು ಜನರಿಗೆ ನೀಡುತ್ತಿರುವುದು ಗ್ಯಾರೆಂಟಿ ಕಾರ್ಡ್ ಅಲ್ಲ ಅದು ನಕಲಿ ಕಾರ್ಡ್ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿಯವರ ಪಂಚರತ್ನ ಕಾರ್ಯಕ್ರಮಗಳು ಜನರ ಮನ್ನಣೆಯನ್ನು ಪಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್ ಸಿ ಅಂಜಿನಪ್ಪ, ಚೆನ್ನ ಮಲ್ಲಪ್ಪ, ರಾಜಶೇಖರ್, ಸಿ ಕೆ ರೆಡ್ಡಿ, ಸಣ್ಣಾ ರೆಡ್ಡಿ, ಅಂಬಿಕಾ, ರಂಗಮ್ಮ ,ಬಲರಾಮ್ ರೆಡ್ಡಿ, ಈರಣ್ಣ, ಸೊಗಡು ವೆಂಕಟೇಶ್, ಸಾಯಿ ಸುಮನ, ಯೂನಸ್ , ಅಕ್ಕಲಪ್ಪ ನಾಯ್ಡು, ನಾನಿ, ಮನು ಮಹೇಶ್, ಪಾಳೆಗಾರ್ ಲೋಕೇಶ್ , ಕಾವಲಗೆರೆ ರಾಮಾಂಜಿ, ರಾಜಶೇಖರ್, ಗಿರಿರಾಜ್, ರಾಜಗೋಪಾಲ್, ರಾಮಾಂಜಿನ ರೆಡ್ಡಿ, ಮುಂತಾದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.